ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನ, ಬೆಳ್ಳಿ ಧಾರಣೆ ಅಲ್ಪ ಕುಸಿತ

Last Updated 15 ಸೆಪ್ಟೆಂಬರ್ 2011, 19:35 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಜಾಗತಿಕ ಸಂಗತಿಗಳ ಹಿನ್ನೆಲೆಯಲ್ಲಿ ಚಿನ್ನ ಮತ್ತು ಬೆಳ್ಳಿ ಧಾರಣೆ ಗುರುವಾರದ ವಹಿವಾಟಿನಲ್ಲಿ ಅಲ್ಪ ಇಳಿಕೆ ಕಂಡಿವೆ. ಚಿನ್ನ 10 ಗ್ರಾಂಗಳಿಗೆ ರೂ175 ಇಳಿಕೆ ಕಂಡರೆ, ಬೆಳ್ಳಿ 1 ಕೆ.ಜಿಗೆ ರೂ800 ಇಳಿಕೆಯಾಗಿದೆ.

ದೇಶಿಯ ಮಾರುಕಟ್ಟೆಯಲ್ಲಿ 99.9 ಮತ್ತು 99.5 ಶುದ್ಧತೆ ಚಿನ್ನದ ಬೆಲೆ ಕ್ರಮವಾಗಿ 10 ಗ್ರಾಂಗಳಿಗೆ ರೂ28,290 ಮತ್ತು ರೂ28,140ರಷ್ಟಾಗಿದೆ. ಬುಧವಾರ ಚಿನ್ನದ ಬೆಲೆ ರೂ225 ಏರಿಕೆಯಾಗಿತ್ತು. ಬೆಳ್ಳಿ ಧಾರಣೆ ರೂ64,200ರಷ್ಟಾಗಿದೆ.

ಜಾಗತಿಕ ಷೇರುಪೇಟೆಗಳಲ್ಲಿನ ಚೇತರಿಕೆ ಮತ್ತು ಯೂರೋಪ್ ಆರ್ಥಿಕ ಬಿಕ್ಕಟ್ಟು ಶಮನಕ್ಕೆ ಜರ್ಮನಿ, ಪ್ರೆಂಚ್ ಮತ್ತು ಚೀನಾ ಬೆಂಬಲ ಸೂಚಿಸಿರುವುದರಿಂದ ಹೂಡಿಕೆದಾರರ ಆತ್ಮವಿಶ್ವಾಸ ಮರಳಿದೆ. ಇದು  ಚಿನ್ನದ ಮೇಲಿನ ಹೂಡಿಕೆ ಮತ್ತು ಖರೀದಿಗೆ ತಾತ್ಕಾಲಿಕ ಕಡಿವಾಣ ಹಾಕಿವೆ. 

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನದ ಬೆಲೆ ಶೇ 0.9ರಷ್ಟು ಇಳಿಕೆ ಕಂಡಿದ್ದು, ಪ್ರತಿ ಔನ್ಸ್‌ಗೆ 1,804 ಡಾಲರ್‌ಗಳಷ್ಟಾಗಿದೆ. ಬೆಳ್ಳಿ ಬೆಲೆ ಕೆ.ಜಿಗೆ ಶೇ 0.4ರಷ್ಟು ಕುಸಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT