ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನ: ಹಾಲ್‌ಮಾರ್ಕ್ ಕಡ್ಡಾಯ

Last Updated 4 ಜನವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ನಕಲಿ ಮತ್ತು ಕಳಪೆ ಗುಣಮಟ್ಟದ ಚಿನ್ನಾಭರಣ ವಹಿವಾಟು ತಡೆಯಲು ಹಾಗೂ ಸುರಕ್ಷತೆ ಖಾತರಿಗೊಳಿಸಲು  ಚಿನ್ನಾಭರಣಗಳಿಗೆ ಬಿಐಎಸ್ `ಹಾಲ್‌ಮಾರ್ಕ್~ ಹಾಕುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ.

ಇಲ್ಲಿಯವರೆಗೆ ಚಿನ್ನಾಭರಣ ವರ್ತಕರು ಸ್ವಯಂಪ್ರೇರಿತವಾಗಿ `ಹಾಲ್‌ಮಾರ್ಕ್~ ಹಾಕುತ್ತಿದ್ದರು. ಆದರೆ,  ಇನ್ನು ಮುಂದೆ ಇದು ಕಡ್ಡಾಯವಾಗಲಿದೆ. `ಹಾಲ್‌ಮಾರ್ಕ್~ ಕಡ್ಡಾಯಗೊಳಿಸೇಕು ಎನ್ನುವ ಪ್ರಸ್ತಾವಕ್ಕೆ ಬುಧವಾರ ಮನಮೋಹನ್ ಸಿಂಗ್ ಅಧ್ಯಕ್ಷತೆಯಲ್ಲಿನ ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿದೆ.

ಗ್ರಾಹಕ ವ್ಯವಹಾರಗಳ ಸಚಿವಾಲಯದ ಅಧೀನದಲ್ಲಿ ಬರುವ ಭಾರತೀಯ ಮಾನದಂಡ ಮಂಡಳಿ (ಬಿಐಎಸ್) `ಹಾಲ್‌ಮಾರ್ಕ್~ ನೀಡುವ  ಅಧಿಕಾರ ಹೊಂದಿದೆ.

`ಬಿಐಎಸ್~ ಕಾಯ್ದೆ 1986ರ ಅಡಿ ಸದ್ಯ ಸಿಮೆಂಟ್, ಶುದ್ಧೀಕರಿಸಿದ ನೀರು, ಹಾಲಿನ ಉತ್ಪನ್ನಗಳು ಸೇರಿದಂತೆ 77 ಸರಕುಗಳಿಗೆ `ಹಾಲ್‌ಮಾರ್ಕ್~ ಕಡ್ಡಾಯಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT