ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನದ ಅಕ್ರಮ ವಹಿವಾಟು; ಮಾಹಿತಿ ಇಲ್ಲ-ಆರ್‌ಬಿಐ

Last Updated 17 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದೇಶದಲ್ಲಿ ಲೆಕ್ಕಕ್ಕೆ ಸಿಗದ ಅಥವಾ ಕಾನೂನುಬಾಹಿರವಾದ ಚಿನ್ನದ ವಹಿವಾಟು ನಡೆಯುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಹಣಕಾಸು ಸಚಿವಾಲಯ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟಪಡಿಸಿವೆ.

ಕೇಂದ್ರೀಯ ಮಾಹಿತಿ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಈ ವಿಷಯ ಸ್ಪಷ್ಟಪಡಿಸಲಾಗಿದೆ. ಮಾಹಿತಿ ಆಯುಕ್ತ ದೀಪಕ್ ಸಂಧು ನೀಡಿದ್ದ ನಿರ್ದೇಶನ ಅನ್ವಯ `ಆರ್‌ಬಿಐ~ ಮತ್ತು ಹಣಕಾಸು ಸಚಿವಾಲಯ ಪ್ರಮಾಣ ಪತ್ರ ಸಲ್ಲಿಸಿದ್ದವು.

ದೇಶದಲ್ಲಿ ಲೆಕ್ಕಕ್ಕೆ ಸಿಗದ ಚಿನ್ನದ ಮಾರಾಟ, ಬಳಕೆ ಮತ್ತಿತರ ಸಂಗತಿಗಳ ಕುರಿತು ಸಾಮಾಜಿಕ ಕಾರ್ಯಕರ್ತ ಎಸ್. ಸಿ. ಅಗರ್‌ವಾಲ್, ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ್ದ ವಿವರಗಳಿಗೆ ಪ್ರತಿಯಾಗಿ, ಮಾಹಿತಿ ಆಯೋಗವು ವಿವರಣೆ ಕೇಳಿತ್ತು.

ಅಗರವಾಲ್ ಅವರು ಮೊದಲು ಕಂದಾಯ ಇಲಾಖೆಯಿಂದ ಮಾಹಿತಿ ಬಯಸಿದ್ದರು. ಆ ಅರ್ಜಿಯನ್ನು ಹಣಕಾಸು ಸಚಿವಾಲಯದ ವಿವಿಧ ವಿಭಾಗಗಳಿಗೆ ರವಾನಿಸಲಾಗಿತ್ತು. ಈ ವಿಷಯದ ಬಗ್ಗೆ ತಮ್ಮಲ್ಲಿ ಯಾವುದೇ ಮಾಹಿತಿ ಇಲ್ಲ ಎಂದು ಎಲ್ಲ ವಿಭಾಗಗಳು ಉತ್ತರಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT