ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನದ ಹಾಸಿಗೆ ಮ್ಯಾಗ್ನಿಫ್ಲೆಕ್ಸ್

Last Updated 27 ಜನವರಿ 2012, 19:30 IST
ಅಕ್ಷರ ಗಾತ್ರ

  ಚಿನ್ನದ ಬೆಲೆ ಗಗನಕ್ಕೇರಿದೆ. ಚಿನ್ನ ಧರಿಸಲು ಕೂಡ ಆಗದಂತಹ ಪರಿಸ್ಥಿತಿ. ಹಾಗಿರುವಾಗಿರುವಾಗ ಇಲ್ಲಿ ಅಲ್ಟ್ರಾ-ಹೈ-ಇನ್‌ಕಂ ಜನರಿಗಾಗಿಯೇ 22 ಕ್ಯಾರೆಟ್ ಚಿನ್ನದ ಹಾಸಿಗೆಯನ್ನು ಇಟಾಲಿಯನ್ ತಂತ್ರಜ್ಞಾನದ ಮ್ಯಾಗ್ನಿಫ್ಲೆಕ್ಸ್ ಸಂಸ್ಥೆ ಬಿಡುಗಡೆ ಮಾಡಿದೆ.

`ಮಲಗುವ ಕೊಠಡಿಗಳಿಗಾಗಿಯೇ ಇಕೋ ಫ್ರೆಂಡ್ಲಿ ಹಾಸಿಗೆಗಳನ್ನು ಸಿದ್ಧಪಡಿಸಲಾಗಿದೆ. ಸಿವಿಲ್ ಎಂಜಿನಿಯರ್‌ಗಳು ಹಾಗೂ ಒಳಾಂಗಣ ವಿನ್ಯಾಸಕಾರರು ತಿಳಿಯಲೇಬೇಕಾದ ಗೃಹ ಪರಿಕರ ಇದು~ ಎಂಬ ಮ್ಯಾಗ್ನಿಫ್ಲೆಕ್ಸ್‌ನ ಭಾರತದ ಮುಖ್ಯಸ್ಥ ಆನಂದ್ ನಿಕಲಾನಿ ನುಡಿಯೇ ಅವರ ಕಣ್ಣು ಯಾವ ಮಾರುಕಟ್ಟೆ ಮೇಲಿದೆ ಎಂಬುದಕ್ಕೆ ಕನ್ನಡಿ ಹಿಡಿಯುತ್ತದೆ. ಕ್ಲಾಸಿಕ್ ಮತ್ತು ಸಮಕಾಲೀನ ದೃಷ್ಟಿಯಿಂದ ಬಗೆಯ ಈ ಮ್ಯಾಟ್ರಸ್‌ಗಳನ್ನು ಮಲಗುವ ಕೋಣೆಯ ಅತ್ಯಾಧುನಿಕ ವಿನ್ಯಾಸ ಮಾಡುವವರು ಬಳಸುತ್ತಾರೆ.

ಸದ್ಯಕ್ಕೆ ಲಭ್ಯವಿರುವ ಬಹುತೇಕ ಮ್ಯಾಟ್ರಸ್‌ಗಳು `ರಬ್ಬರೈಸ್ಡ್ ಕಾಯರ್~ನಿಂದ ಸಿದ್ಧವಾಗಿರುತ್ತವೆ. ಇವುಗಳ ಬಳಕೆಯಿಂದಾಗಿ ಬೆನ್ನು ನೋವು, ಬೆನ್ನುಮೂಳೆಯ ತೊಂದರೆಗಳು ಬಂದಿರುವ ಉದಾಹರಣೆಗಳುಂಟು.
 
ಆದರೆ, ಮ್ಯಾಗ್ನಿಫ್ಲೆಕ್ಸ್ ಹಾಸಿಗೆಗಳನ್ನು ನಿಸರ್ಗದತ್ತ ಉತ್ಪನ್ನಗಳಿಂದ ತಯಾರಿಸಲಾಗಿದೆ. ಇದರಲ್ಲಿ ಉಪಯೋಗಿಸಿರುವ ಉತ್ಪನ್ನಗಳು ಮರುಬಳಕೆಗೆ ಯೋಗ್ಯ. ಹಾಗಾಗಿಯೇ ಇದು ಪರಿಸರ ಸ್ನೇಹಿ.

22 ಕ್ಯಾರೆಟ್ ಚಿನ್ನದ ಫ್ಯಾಬ್ರಿಕ್ ಮತ್ತು ಕಸೂತಿ ಕಲೆಯಿಂದ ಗ್ರಾಹಕರ ಹೆಸರನ್ನು ಕೂಡ ಚಿನ್ನದಲ್ಲಿ ಬರೆಯಲಾಗಿರುತ್ತದೆ. ಚಿನ್ನ ಅಂದಮೇಲೆ ಬೆಲೆ ಕಡಿಮೆ ಇರುತ್ತದಾ? ಇದರ ಬೆಲೆ ಬರೋಬ್ಬರಿ 15 ಲಕ್ಷ ರೂಪಾಯಿಯಿಂದ 20 ಲಕ್ಷ ರೂ.ವರೆಗೆ ಇದೆ.

`ಅರೋಮಾ ಥೆರಪಿ~ಯಲ್ಲಿ ಉಪಯೋಗಿಸುವ ಲ್ಯಾವೆಂಡರ್ ಹೂವು ದೇಹದಲ್ಲಿ ಉಂಟಾಗುವ ಉಷ್ಣಾಂಶಗಳನ್ನು ತಡೆಯುತ್ತದೆ. ಅಂಥ ಹೂಗಳನ್ನು ಬಳಸಿ ಮಾಡಿದ ಹಾಸಿಗೆಗಳನ್ನೂ ಇದೇ ಕಂಪೆನಿ ತಯಾರಿಸಿದೆ. ಲ್ಯಾವೆಂಡರ್ ಹೂವಿನ ಪರಿಮಳ, ಬಣ್ಣದಲ್ಲಿ ಅವು ಸಿಗುತ್ತವೆಂಬುದು ವಿಶೇಷ.

`ನ್ಯೂ ಡ್ಯುಯೋ ಫೋರ್ಮ್‌~ ಎಂಬ ಬಗೆಯ ಹಾಸಿಗೆಗಳು ಮೂಳೆ ತೊಂದರೆಗಳಿಗೆ ಒಳಗಾದವರ ಬಳಕೆಗೆ ಯೋಗ್ಯ. ಇದನ್ನು ವಿಭಿನ್ನ ರೀತಿಯಲ್ಲಿ ತಯಾರಿಸಲಾಗಿದೆ, ಈ ಹಾಸಿಗೆಯು ದೇಹವು ಮಲಗುವ ಭಂಗಿಯ ಆಕಾರದ್ಲ್ಲಲೇ ರೂಪಿತವಾಗಿದೆ.
ಮಾಹಿತಿಗೆ: 99725 01014.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT