ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನಾಭರಣ ರಫ್ತು ಶೇ21 ಹೆಚ್ಚಳ

Last Updated 6 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ಸತತ ಐದು ತಿಂಗಳ ಕುಸಿತದ ನಂತರ ದೇಶದ ಚಿನ್ನಾ­ಭರಣ ರಫ್ತು ವಹಿವಾಟು ಅಕ್ಟೋಬರ್‌­ನಲ್ಲಿ ಶೇ 21.8ರಷ್ಟು ಏರಿಕೆ ಕಂಡಿದ್ದು ರೂ 20,894 ಕೋಟಿ (337 ಕೋಟಿ ಡಾಲರ್‌ ) ವಹಿವಾಟು ದಾಖಲಿಸಿದೆ.

ಕ್ರಿಸ್‌ಮಸ್‌ ಹಿನ್ನೆಲೆಯಲ್ಲಿ ಲ್ಯಾಟಿನ್‌ ಅಮೆರಿಕ, ಯೂರೋಪ್‌, ಜಪಾನ್‌, ಮಧ್ಯಪ್ರಾಚ್ಯ ಸೇರಿದಂತೆ ಸಾಗರೋತ್ತರ ಮಾರುಕಟ್ಟೆಗಳಿಂದ ದೇಶದ ಆಭರಣ­ಗಳಿಗೆ, ವಿಶೇಷವಾಗಿ ಕುಸುರಿ ಕೆಲಸದ ಚಿನ್ನದ ಒಡವೆಗಳು, ಹವಳಗಳು, ವಜ್ರ­ಗಳಿಗೆ ಬೇಡಿಕೆ ಹೆಚ್ಚಿದೆ ಎಂದು ಚಿನ್ನಾ­ಭರಣ ರಫ್ತು ವಹಿವಾಟು ಉತ್ತೇಜನಾ ಮಂಡಳಿ(ಜಿಜೆಇಪಿಸಿ) ತಿಳಿಸಿದೆ.

2012ರ ಅಕ್ಟೋಬರ್‌ನಲ್ಲಿ ರೂ 16,740 ಕೋಟಿ (270 ಕೋಟಿ ಡಾಲರ್‌) ರಫ್ತು ವಹಿವಾಟು ನಡೆದಿತ್ತು.
ಕಳೆದ ಹಣಕಾಸು ವರ್ಷದಲ್ಲಿ 830 ಟನ್‌ ಚಿನ್ನ ಆಮದು ಮಾಡಿ­ಕೊಳ್ಳ­ಲಾ ಗಿತ್ತು. ಈ ಬಾರಿ ರಫ್ತು ಉತ್ತೇ­ಜಿಸಲು ಸರ್ಕಾರ ಸಾಕಷ್ಟು ಉತ್ತೇಜನಾ ಕೊಡುಗೆ ಗಳನ್ನು ಪ್ರಕಟಿಸಿದೆ. ರಫ್ತು ಉದ್ದೇಶಕ್ಕಾ ಗಿಯೇ ಆಮದು ಮಾಡಿಕೊಳ್ಳಬೇಕು ಎಂಬ ನಿರ್ಬಂಧ­ವನ್ನೂ ವಿಧಿಸಿತ್ತು.

ದೇಶದ ಒಟ್ಟಾರೆ ರಫ್ತು ವಹಿವಾಟಿ ನಲ್ಲಿ ಚಿನ್ನಾ­ಭರ­ಣಗಳ ಪಾಲು ಶೇ 17ರ ಷ್ಟಿದ್ದು, 15 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗ ಒದಗಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT