ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಯರ್ಸ್‌... ವೈನೋತ್ಸವ

Last Updated 9 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ವೈನ್ ಪ್ರಿಯರಿಗೊಂದು ಸಂತಸದ ಸುದ್ದಿ! ಅರಮನೆ ಮೈದಾನದ (ಬಳ್ಳಾರಿ ರಸ್ತೆ) ವೈಟ್ ಪೆಟಲ್ಸ್‌ನಲ್ಲಿ ಶುಕ್ರವಾರ, ಶನಿವಾರ ಮತ್ತು ಭಾನುವಾರ (ಮಾರ್ಚ್ 11,12, 13) ‘ಬೆಂಗಳೂರು ಅಂತರರಾಷ್ಟ್ರೀಯ ವೈನ್ ಉತ್ಸವ’ ನಡೆಯಲಿದೆ. ಇಲ್ಲಿ ಸ್ವದೇಶಿ ಹಾಗೂ ವಿದೇಶಿ ಹೆಸರಾಂತ ಕಂಪೆನಿಗಳ ವಿವಿಧ ಬ್ರಾಂಡ್‌ಗಳ ವೈನ್ ಪೇಯಗಳ ರುಚಿಯನ್ನು ಸವಿಯಬಹುದು. ಜೊತೆಯಲ್ಲಿ ಮಧ್ಯಾಹ್ನ 3 ರ ನಂತರ ನಡೆಯುವ ‘ಗ್ರೇಪ್ ಸ್ಟಾಂಪಿಂಗ್’ಗೆ (ದ್ರಾಕ್ಷಿ ತುಳಿಯುವುದು)‘ಡಿಜೆ’ಗಳ ಸಂಗೀತ ಜೊತೆಯಾಗಲಿದೆ.

‘ಸಿಎಂಸಿ’ (cosmic meltdown crew) ಸಂಸ್ಥೆಯು ವೈನ್ ತಯಾರಕ ಕಂಪೆನಿಗಳ ಸಹಯೋಗದಲ್ಲಿ ಆಯೋಜಿಸಿರುವ ಈ ಉತ್ಸವದಲ್ಲಿ ದೇಶಿಯ ಮಟ್ಟದಿಂದ ವಿದೇಶಿಯ ಮಟ್ಟದವರೆಗೆ ಹೆಸರಾಂತ ಕಂಪೆನಿಗಳ ಗುಣಮಟ್ಟದ ವೈವಿಧ್ಯಮಯ ವೈನ್ ಪೇಯಗಳ ಪ್ರದರ್ಶನ ಮತ್ತು ಮಾರಾಟ ಇರುತ್ತದೆ. ಏಷ್ಯಾ ಸೇರಿದಂತೆ ದಕ್ಷಿಣ ಅಮೆರಿಕಾ, ಆಫ್ರಿಕಾ, ಆಸ್ಟ್ರೇಲಿಯಾ, ಯೂರೋಪ್‌ಗಳ ಹೆಸರಾಂತ ವೈನ್ ಪೇಯಗಳೊಂದಿಗೆ ರಾಜ್ಯದ ಹೆಸರಾಂತ ಕಂಪೆನಿಗಳ ವೈನ್‌ಗಳು ಇರಲಿವೆ.

ವೈನ್‌ನೊಂದಿಗೆ ಸಂಜೆಯ ಮನರಂಜನೆ, ಸಂಗೀತದ ಕಂಪು ಉತ್ಸವಕ್ಕೆ ಮೆರಗು ನೀಡಲಿದೆ. ಹೆಸರಾಂತ ಮೃದಂಗ ವಾದಕ ರಮೇಶ್, ಬೀಟ್ ಗುರೂಸ್, ಡಿಜೆ (ಡಿಸ್ಕ್ ಜಾಕಿ) ಟಿಟಿ, ಡಿಜೆ ರವಿ, ಡಿಜೆ ರಾಹುಲ್ ಮುಂತಾದ ಕಲಾವಿದರ ತಂಡಗಳಿಂದ ಸಂಗೀತ, ಡಿಜೆ ನೈಟ್ಸ್ ಹಾಗೂ ರಾಕ್ ಮ್ಯೂಸಿಕ್ ವೈನ್ ಉತ್ಸವದ ‘ಕಿಕ್’ ಏರಿಸಲಿದೆ.

ಇದು ನಗರದಲ್ಲಿ ನಡೆಯುತ್ತಿರುವ ಎರಡನೇ ವೈನ್ ಉತ್ಸವ. ‘ಆರೋಗ್ಯಕ್ಕಾಗಿ ವೈನ್ ಪೇಯ’ ಎಂಬುದೇ ಉತ್ಸವದ ಧ್ಯೇಯವಾಕ್ಯ. ವೈವಿಧ್ಯಮಯ ವಿವಿಧ ಬ್ರಾಂಡ್‌ಗಳ ವೈನ್ ಪೇಯಗಳನ್ನು ಪರಿಚಯಿಸುವುದು, ದ್ರಾಕ್ಷಿ ಬೆಳಗಾರರನ್ನು ಪ್ರೋತ್ಸಾಹಿಸುವುದು ಉತ್ಸವದ ಉದ್ದೇಶವಾಗಿದೆ.

ಇದರೊಂದಿಗೆ ದ್ರಾಕ್ಷಿ ಬೆಳೆಗಾರರಿಗೆ, ವೈನ್ ತಯಾರಕರಿಗೆ, ವಿತರಕರಿಗೆ ಹಾಗೂ ಬಳಕೆದಾರರಿಗೆ ಪರಿಣಿತರಿಂದ ಉಪಯುಕ್ತ ಮಾಹಿತಿ, ವಿಚಾರ ಸಂಕಿರಣ ಕೂಡ ನಡೆಯಲಿದೆ’ ಎನ್ನುತ್ತಾರೆ ‘ನಾಕಾ’ದ ಬಿ.ಎನ್. ನಂಜುಂಡಯ್ಯ ಮತ್ತು ಆಯೋಜಕರಲ್ಲೊಬ್ಬರಾದ ಅಸ್ಲಾಂ ಗಫೂರ್. ಪ್ರವೇಶ ಶುಲ್ಕ 100 ರೂ. ಟಿಕೆಟ್ ಲ್ಯಾಂಡ್ ಮಾರ್ಕ್, ಕೂಪ್ಪಾ, ರಿಲಯನ್ಸ್ ಟೈಮ್ ಔಟ್, ಕೊಸ್ಟಾ ಕಾಫಿ  ಮಳಿಗೆಗಳಲ್ಲಿ ಅಥವಾ  www.buzzintown.com ಜಾಲತಾಣದಲ್ಲಿ ಲಭ್ಯ. ಮಾಹಿತಿಗೆ 99869 84878, 98442 01845.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT