ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿರತೆ ದಾಳಿ: ಮೇಕೆಗೆ ಗಾಯ

Last Updated 20 ಜನವರಿ 2012, 8:40 IST
ಅಕ್ಷರ ಗಾತ್ರ

ಮೈಸೂರು: ಗೌರಿಶಂಕರನಗರದಲ್ಲಿ ಎರಡು ಚಿರತೆಗಳು ಸೆರೆಯಾದ ಬೆನ್ನ ಹಿಂದೆಯೇ ಮತ್ತೊಂದು ಚಿರತೆ ಗುರುವಾರ ಮೇಕೆ ಮೇಲೆ ದಾಳಿ ಮಾಡಿ ಗಾಯಗೊಳಿಸಿದೆ.

ಮನೆ ಮುಂದೆ ಕಟ್ಟಿದ್ದ ಮೇಕೆಯ ಮೇಲೆ ಚಿರತೆ ದಾಳಿ ಮಾಡಿ ಕುತ್ತಿಗೆಗೆ ಬಾಯಿ ಹಾಕಿದ್ದರಿಂದ ಗಾಯವಾಗಿದೆ. ಜನವಸತಿ ಪ್ರದೇಶವಾದ್ದರಿಂದ ಹೆದರಿ ಚಾಮುಂಡಿ ಬೆಟ್ಟದತ್ತ ಓಡಿದ ಚಿರತೆ ಕಣ್ಮರೆಯಾಗಿದೆ ಎನ್ನಲಾಗಿದೆ.

ಈ ಹಿಂದೆ ಚಿರತೆ ಮೇಕೆ ಮೇಲೆ ದಾಳಿ ನಡೆಸಿದ್ದರಿಂದ ಅರಣ್ಯ ಇಲಾಖೆ ಬೋನನ್ನು ಇರಿಸಲಾಗಿ ಜ.9 ರಂದು ಚಿರತೆ ಸೆರೆ ಸಿಕ್ಕಿತ್ತು. ಅದೇ ಬೋನನ್ನು ಮತ್ತೊಂದು ಸ್ಥಳದಲ್ಲಿ ಇರಿಸಲಾಗಿ ಜ.14 ರಂದು ಎರಡನೇ ಬಾರಿ ಚಿರತೆ ಸೆರೆ ಸಿಕ್ಕಿತ್ತು. ಇದರಿಂದ ಬಡಾವಣೆ ಮತ್ತು ಸುತ್ತಮುತ್ತಲಿನ ನಿವಾಸಿಗಳು ನಿಟ್ಟುಸಿರು ಬಿಟ್ಟಿದ್ದರು.

ಆದರೆ ಚಿರತೆ ದಾಳಿ ನಡೆಸಿ ಮೇಕೆಯನ್ನು ಗಾಯಗೊಳಿ ಸಿರುವುದರಿಂದ ಜನತೆಯಲ್ಲಿ ಆತಂಕ ಮನೆ ಮಾಡಿದೆ. ಬೆಟ್ಟದ ಕಾಡಿನಿಂದ ಆಹಾರ ಅರಸಿ ಜನವಸತಿ ಪ್ರದೇಶದತ್ತ ಬರುತ್ತಿ ರುವ ಚಿರತೆಗಳನ್ನು ಹಿಡಿಯಲು ಅರಣ್ಯ ಇಲಾಖೆ ಶಾಶ್ವತ ವಾಗಿ ಬೋನು ಇರಿಸಲು ಸ್ಥಳೀಯರು ಒತ್ತಾಯಿಸಿದ್ದಾರೆ.

ಹಲ್ಲೆ ಆರೋಪಿ ಬಂಧನಕ್ಕೆ ಆಗ್ರಹ
ಮೈಸೂರು: ನಗರದ ಆಯುರ್ವೇದ ಮಹಾವಿದ್ಯಾಲಯದ ವಿದ್ಯಾರ್ಥಿನಿ ಧನ್ಯಶ್ರೀ ಮೇಲಿನ ಮಾರಣಾಂತಿಕ ಹಲ್ಲೆಗೆ ಕಾರಣನಾದ ಆರೋಪಿಯನ್ನು ಕೂಡಲೇ ಬಂಧಿಸಿ, ತಕ್ಕ ಶಿಕ್ಷೆ ವಿಧಿಸಬೇಕು ಎಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಂಘಟನೆಯ ಮೈಸೂರು ಜಿಲ್ಲಾ ಸಮಿತಿ ಒತ್ತಾಯಿಸಿದೆ.

ಧನ್ಯಶ್ರೀ ಅವರನ್ನು ಮದುವೆ ಆಗುವಂತೆ ಆರೋಪಿ ಭಾಗ್ಯರಾಜ್ ಪೀಡಿಸುತ್ತಿದ್ದು, ಏಕಾಏಕಿ ರಾತ್ರಿ ವೇಳೆ ಹಾಸ್ಟೆಲ್ ಬಳಿ ಬಂದು ಆಕೆಯ ಕುತ್ತಿಗೆಗೆ ಇರಿದಿರುವ ದುಷ್ಕೃತ್ಯವನ್ನು ಸಂಘಟನೆ ತೀವ್ರವಾಗಿ ಖಂಡಿಸುತ್ತದೆ.
 
ಮದುವೆ ವಿಚಾರದ ನಿರ್ಧಾರ ಆಕೆಯ ವೈಯಕ್ತಿಕ ಹಕ್ಕಾಗಿದೆ. ಆದ್ದರಿಂದ ಸರ್ಕಾರ ಎಚ್ಚೆತ್ತು ಕ್ರಮ ಕೈಗೊಳ್ಳಬೇಕು ಎಂದು ಎಐಎಂಎಸ್‌ಎಸ್ ಜಿಲ್ಲಾಧ್ಯಕ್ಷರಾದ ಪಿ.ಎಸ್.ಸಂಧ್ಯಾ ಅವರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT