ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಲಿಪಿಲಿ ಕಲರವ ಮಕ್ಕಳ ಶಿಬಿರ

Last Updated 16 ಏಪ್ರಿಲ್ 2013, 10:16 IST
ಅಕ್ಷರ ಗಾತ್ರ

ಧಾರವಾಡ:  `ಮಕ್ಕಳಲ್ಲಿರುವ ಪ್ರತಿಭೆಯನ್ನು ಪಾಲಕರು ತಮ್ಮ ಒಳಗಣ್ಣಿನಿಂದ ನೋಡಿ ಗುರುತಿಸಿ ಮಾರ್ಗದರ್ಶನ ಮಾಡಬೇಕು. ಮಕ್ಕಳೆಂದರೆ ದೊಡ್ಡವರು ಹೇಳಿದಂತೆ ಕೇಳಿಕೊಂಡು ಇರುವವರು ಎಂದು ಭಾವಿಸಬೇಡಿ' ಎಂದು ಅವಳಿ ನಗರದ ಪರಿಸರ ಸಮಿತಿಯ ಅಧ್ಯಕ್ಷ ಶಂಕರ ಕುಂಬಿ ಸಲಹೆ ನೀಡಿದರು.

ಇಲ್ಲಿಯ ಕಮಲಾಪುರದಲ್ಲಿ ಗ್ರಾಮೀಣ ಮಕ್ಕಳ ಚಿಲಿಪಿಲಿ ಕಲರವ ಮಕ್ಕಳ ಬೇಸಿಗೆ ಶಿಬಿರದಲ್ಲಿ ಸೋಮವಾರ ಗ್ರಾಮೀಣ ಆಟವಾದ ಚಿನ್ನಿದಾಂಡು ಆಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, `ಮಕ್ಕಳ ಹುಟ್ಟುಹಬ್ಬನ್ನು ಸಾವಿರ ಸಾವಿರಗಟ್ಟಲೇ ಹಣ ಖರ್ಚು ಮಾಡಿ ಇನ್ನಷ್ಟು ಪರಿಸರ ಕೆಡುವಂತೆ ಮಾಡದೇ ಹುಟ್ಟುಹಬ್ಬದ ನೆನಪಿನಲ್ಲಿ ಮಕ್ಕಳಿಂದ ಒಂದು ಸಸಿ ನೆಟ್ಟು ಬೆಳೆಯುವಂತೆ ನೋಡಿಕೊಳ್ಳಬೇಕು. ಹೀಗೆ ಮಾಡುವುದರಿಂದ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸುವಲ್ಲಿ ಸಹಾಯವಾಗುತ್ತದೆ' ಎಂದರು.

ರಂಗಕಲಾವಿದ ಲಕ್ಷ್ಮಣ ಪೀರಗಾರ, `ಪ್ರತಿ ಮಗುವಿನಲ್ಲೂ ಒಂದು ಪ್ರತಿಭೆ ಇದ್ದೇ ಇರುತ್ತದೆ. ಅದನ್ನು ಇಂಥ ಶಿಬಿರಗಳು ಗುರುತಿಸಿ ಪ್ರೋತ್ಸಾಹಿಸುತ್ತಾ ಸಮಾಜಕ್ಕೆ ಪರಿಚಯಿಸು ವಂತಾಗಬೇಕು. ಗ್ರಾಮೀಣ ಪ್ರದೇಶದ ಮಕ್ಕಳ ಬಗ್ಗೆ ಚಿಲಿಪಿಲಿ ಸಂಸ್ಥೆ ಕಳೆದ ಐದು ವರ್ಷಗಳಿಂದ ಶಿಬಿರ ನಡೆಸಿಕೊಂಡು ಬಂದಿದ್ದು ಅಭಿನಂದನಾರ್ಹ' ಎಂದು ಹೇಳಿದರು. 

ಅತಿಥಿ ಕಲಾವಿದ ರಾಜು ಕುಲಕರ್ಣಿ ಮಕ್ಕಳಿಗೆ ಬೆವು ಬೆಲ್ಲ ಹಂಚಿ ಅದರ ಮಹತ್ವವನ್ನು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಂಕರ ಹಲಗತ್ತಿ, `ಬೇಸಿಗೆ ಬಂದರೆ ಸಾಕು ಮಕ್ಕಳ ಶಿಬಿರಗಳು ನಾಯಿ ಕೊಡೆಯಂತೆ ಪ್ರಾರಂಭವಾಗುತ್ತವೆ. ಶಿಬಿರ ಸಂಘಟಕರಿಗೆ ಸರಿಯಾದ ತಿಳಿವಳಿಕೆ ಇರಬೇಕಾಗುತ್ತದೆ. ಶಿಬಿರ ಎಂದಕೂಡಲೇ ಒಂದಿಷ್ಟು ಮಕ್ಕಳನ್ನು ಸೇರಿಸಿ ತಮಗೆ ತಿಳಿದದ್ದನ್ನು ಹೇಳುವದಾಗಲಿ, ಮಾಡುವುದಾಗಲಿ ಅಲ್ಲ. ಪ್ರತಿ ಶಿಬಿರದಲ್ಲಿ ಮಕ್ಕಳ ಮನಸ್ಸನ್ನು ಅರಳಿಸುವ ಚಟುವಟಿಕೆಗಳು ಒಳಗೊಂಡಿರಬೇಕೇ ವಿನಹ ಅವರಿಗೆ ಒತ್ತಾಯದ ಮತ್ತೊಂದು ಶಾಲೆಯ ಚಟುವಟಿಕೆಯಂತಾಗಬಾರದು' ಎಂದು ಕಿವಿಮಾತು ಹೇಳಿದರು.

  ಶಿಬಿರದ ಸಂಚಾಲಕಿ ಗಿರಿಜಾ ಹೊರಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜಯಲಕ್ಷ್ಮಿ ಸುಭಾಂಜಿ ಕಾರ್ಯಕ್ರಮ ನಡೆಸಿಕೊಟ್ಟರು.

ಭಾರತಿ ಸ್ವಾಗತಿಸಿ ವಂದಿಸಿದರು. ಇಪ್ಪತ್ತೈದು ದಿನಗಳ ಕಾಲ ನಡೆಯುವ ಈ ಶಿಬಿರದಲ್ಲಿ 60 ಮಕ್ಕಳು ಭಾಗವಹಿಸಿದ್ದಾರೆ.

ತಸನೀಮ್ ತಾಜ್‌ಗೆ ಪಿಎಚ್.ಡಿ 
ಹುಬ್ಬಳ್ಳಿ: ಕರ್ನಾಟಕ ವಿಶ್ವವಿದ್ಯಾಲಯವು ತಸನೀಮ್ ತಾಜ್ ಅವರು ` ಸ್ಟಡೀಸ್ ಆನ್ ದಿ ನೈಟ್ರೋಜನ್ ಅಂಡ್ ಆಕ್ಸಿಜನ್ ಹೆಟ್ರೋಸೈಕಲ್ಸ್ ಆಫ್ ಫಾರ್ಮಾಕಲೋಜಿಕಲ್ ಇಂಟರೆಸ್ಟ್' ಶೀರ್ಷಿಕೆಯಲ್ಲಿ ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ   ಪಿಎಚ್.ಡಿ ನೀಡಿದೆ. ಕರ್ನಾಟಕ ವಿವಿ ರಸಾಯನಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ. ರವೀಂದ್ರ ಕಾಂಬಳೆ ಮಾರ್ಗದರ್ಶನದಲ್ಲಿ ಅವರು ಈ ಸಾಧನೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT