ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಲ್ಲರೆ ಕೊರತೆ, ಗ್ರಾಹಕರಿಗೆ ನಷ್ಟ

Last Updated 7 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನಂದಿನಿ ಹಾಲಿನ ದರವನ್ನು ಇತ್ತೀಚೆಗೆ ಲೀಟರ್‌ಗೆ ರೂ. 27 ಮತ್ತು 30ಕ್ಕೆ (ಹೆಚ್ಚು ಕೆನೆಭರಿತ) ಏರಿಸಲಾಗಿದೆ.

ಲೀಟರ್‌ಗೆ ರೂ. 30 ಇದ್ದ ಹಾಲನ್ನು ಅರ್ಧ ಲೀಟರ್ ಖರೀದಿಸಿದಲ್ಲಿ ರೂ. 15ಕ್ಕೆ ಕೊಡುತ್ತಾರೆ. ಆದರೆ ರೂ. 27ರ ದರ ಇರುವ ಹಾಲನ್ನು ಅರ್ಧ ಲೀಟರ್ ಮಾರುವಾಗ 14 ರೂಪಾಯಿ ಪಡೆಯುತ್ತಾರೆ. ಕೇಳಿದರೆ `50 ಪೈಸೆ ಚಿಲ್ಲರೆ ಇಲ್ಲ~ ಎಂಬ ಸಿದ್ಧ ಉತ್ತರ.

ಚಿಲ್ಲರೆ ಕೇಳಿದ ಜನರ ಜೊತೆ ಬೂತ್‌ನವರು ವಾಗ್ವಾದ ಮಾಡುವುದೂ ಸಾಮಾನ್ಯವಾಗಿದೆ. ಪ್ರತಿದಿನ ಬರುವ ಗ್ರಾಹಕರು ಒಂದು ದಿನ 14 ರೂಪಾಯಿ ಕೊಟ್ಟಿದ್ದರೆ ಮರುದಿನ 13 ರೂಪಾಯಿ ಕೊಡಲು ಅವಕಾಶ ಮಾಡಿಕೊಡಬೇಕು.
 
ಹೀಗಾದರೆ ಚಿಲ್ಲರೆ ಮತ್ತು ಗ್ರಾಹಕರಿಗೆ ಟೋಪಿ ಹಾಕುವ ಪದ್ಧತಿಯ ಸಮಸ್ಯೆ ಪರಿಹರಿಸಬಹುದು. ಗ್ರಾಹಕರ ಕಿಸೆಗೆ ಕತ್ತರಿ ಹಾಕುವ ಈ ಸಮಸ್ಯೆಗೆ `ನಂದಿನಿ~ಯವರು ಸೂಕ್ತ ಬದಲಿ ವ್ಯವಸ್ಥೆ ಮಾಡಬೇಕು.
 -
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT