ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಲ್ಲರೆ ನಾಣ್ಯಗಳ ಅಪಮೌಲ್ಯ ಏಕೆ?

Last Updated 14 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ವ್ಯಾಪಾರಿಗಳು ಈಗ 50 ಪೈಸೆಯ ನಾಣ್ಯ ನಡೆಯುವುದಿಲ್ಲವೆಂದು ಅದರ ಚಲಾವಣೆ ನಿಲ್ಲಿಸಿದ್ದಾರೆ. ಇದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ. ಈ ನಾಣ್ಯಗಳನ್ನಿಟ್ಟುಕೊಂಡವರಿಗೆ ನಷ್ಟ. ಇದಲ್ಲದೆ 50 ಪೈಸೆಗೆ ಖರೀದಿಸುವ ವಸ್ತುಗಳನ್ನು ಒಂದು ರೂಪಾಯಿಗೆ ಕೊಂಡು ಕೊಳ್ಳಬೇಕಾಗಿದೆ. ಸರಿಯಾದ ಲೆಕ್ಕಾಚಾರದಲ್ಲಿ ಈಗಾಗಲೇ ಅನಧಿಕೃತವಾಗಿ ಚಲಾವಣೆಯಲ್ಲಿಲ್ಲದ 25 ಪೈಸೆಯ ನಾಣ್ಯಗಳ ಬದಲಾಗಿ ಮುಂದಿನ ಹೊಂದಾಣಿಕೆಗಾಗಿ 50 ಪೈಸೆಯವರೆಗೆ 50 ಪೈಸೆಯನ್ನೂ ಮತ್ತು ಮುಂದಿನ ಚಿಲ್ಲರೆಗೆ ಒಂದು ರೂಪಾಯಿ ಕೊಡಬೇಕಾದುದು ನ್ಯಾಯ, ಆದರೆ 50 ಪೈಸೆಯ ನಾಣ್ಯವನ್ನು ಅನಧಿಕೃತವಾಗಿ ಚಲಾವಣೆ ನಿಲ್ಲಿಸಿರುವ ಕ್ರಮದಿಂದಾಗಿ, ಒಂದು ರೂಪಾಯಿಯ ಒಳಗಿನ ಚಿಲ್ಲರೆ ಅದು ಎಷ್ಟೇ ಇದ್ದರೂ ಒಂದು ರೂಪಾಯಿ ಕೊಡಬೇಕಾಗುವುದರಿಂದ ಅನಾವಶ್ಯಕವಾಗಿ ಹಣ ಕಳೆದುಕೊಳ್ಳಬೇಕಾಗಿದೆ.

ಕೇವಲ 50 ಪೈಸೆ ಎಂದುಕೊಂಡರೂ ಬೀಡಿ, ಸಿಗರೇಟು, ಹಾಲು, ತರಕಾರಿ, ದಿನಸಿ ಇತ್ಯಾದಿ ಕೊಳ್ಳುವ ಬಡವರಿಗೆ ದಿನ ನಿತ್ಯ ಚಿಲ್ಲರೆ ವ್ಯಾಪಾರದಲ್ಲಿ ಪ್ರತಿ ದಿನ ಒಂದು ಕುಟುಂಬಕ್ಕೆ ಕನಿಷ್ಠ ಹತ್ತು ರೂಪಾಯಿಯಾದರೂ ಕತ್ತರಿ ಬೀಳುತ್ತಿದೆ. ಚಲಾವಣೆಯಲ್ಲಿರುವ ನಾಣ್ಯಗಳನ್ನು ಅಪಮೌಲ್ಯ ಮಾಡಿ ಸಾರ್ವಜನಿಕರಿಗುಂಟಾಗಿರುವ ತೊಂದರೆ ತಪ್ಪಿಸಲು ಸಾಧ್ಯವಿಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT