ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಚಿಲ್ಲರೆ' ರಾಜಕೀಯಕ್ಕೆ ಗೆಲುವು

ಬಿಜೆಪಿ ನಿಲುವಳಿಗೆ ಸೋಲು: ಎಸ್‌ಪಿ, ಬಿಎಸ್‌ಪಿ ಸಭಾತ್ಯಾಗ
Last Updated 5 ಡಿಸೆಂಬರ್ 2012, 19:58 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):  ಬಹುಬ್ರಾಂಡ್ ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ಶೇ 51ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್‌ಡಿಐ) ಅವಕಾಶ ಮಾಡಿಕೊಡುವ ಕೇಂದ್ರದ ನಿರ್ಧಾರಕ್ಕೆ ಬುಧವಾರ ಲೋಕಸಭೆಯಲ್ಲಿ ಅನುಮೋದನೆ ದೊರೆಯಿತು`ಎಫ್‌ಡಿಐ' ನಿರ್ಧಾರ ವಾಪಸ್ ತೆಗೆಯಲು ಪ್ರತಿಪಕ್ಷ ಮಂಡಿಸಿದ ನಿಲುವಳಿಗೆ ಸೋಲು ಉಂಟಾಗಿದ್ದು, ಮತದಾನದಿಂದ ದೂರ ಉಳಿಯುವ ಮೂಲಕ ಎಸ್‌ಪಿ ಹಾಗೂ ಬಿಎಸ್‌ಪಿ ಪರೋಕ್ಷವಾಗಿ ಸರ್ಕಾರದ ಗೆಲುವಿಗೆ ಕಾರಣವಾದವು.

ಲೋಕಸಭೆಯಲ್ಲಿ ಎಫ್‌ಡಿಐ ವಿರುದ್ಧ ಬಿಜೆಪಿ ಮಂಡಿಸಿದ ನಿಲುವಳಿಯ ಪರವಾಗಿ 218 ಮತಗಳು, ವಿರುದ್ಧವಾಗಿ 253 ಮತಗಳು ಬಿದ್ದವು. 545 ಸದಸ್ಯ ಬಲದ ಲೋಕಸಭೆಯಲ್ಲಿ ಒಟ್ಟು 471 ಸದಸ್ಯರು ಮತ ಹಾಕಿದರು. ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ ಅವರು ಸರ್ಕಾರದ ಗೆಲುವನ್ನು ಶ್ಲಾಘಿಸಿದ್ದಾರೆ.ಮತದಾನಕ್ಕೂ ಮುನ್ನ ನಡೆದ ಚರ್ಚೆಗೆ ಪ್ರತಿಕ್ರಿಯಿಸಿದ ವಾಣಿಜ್ಯ ಸಚಿವ ಆನಂದ್ ಶರ್ಮಾ ಅವರು, ಎಫ್‌ಡಿಐ ಕುರಿತಂತೆ ವಿರೋಧ ಪಕ್ಷಗಳ ಆಕ್ಷೇಪಗಳನ್ನು ಅಲ್ಲಗಳೆದರು.

ಸಭಾತ್ಯಾಗ: ಮತದಾನಕ್ಕೂ ಮುನ್ನ ಎಸ್‌ಪಿಯ ಒಟ್ಟು 22 ಹಾಗೂ ಬಿಎಸ್‌ಪಿ 21 ಸದಸ್ಯರು ಸಭಾತ್ಯಾಗ ಮಾಡಿದರು.ಇದು ರೈತ ವಿರೋಧಿ ಸರ್ಕಾರ' ಎಂದು ಎಸ್‌ಪಿ ವರಿಷ್ಠ ಮುಲಾಯಂ ಸಿಂಗ್ ಯಾದವ್ ದೂರಿದರು.  ಈ ಮಧ್ಯೆ, ಮತದಾನದ ಬಳಿಕ ಸಂಸತ್ ಭವನದ ಹೊರಗಡೆ ಸುದ್ದಿಗಾರರ ಜೊತೆ ಮಾತನಾಡಿದ ಎನ್‌ಸಿಪಿ ನಾಯಕ ಮತ್ತು ಕೇಂದ್ರ ಸಚಿವ ಪ್ರಫುಲ್ ಪಟೇಲ್ ಅವರು, `ಲೋಕಸಭೆಯಲ್ಲಿ ಪಕ್ಷ ಎಫ್‌ಡಿಐ ಪರ ಮತ ಚಲಾಯಿಸಿದ್ದರೂ ಸಹ, ಮಹಾರಾಷ್ಟ್ರದಲ್ಲಿ ಅದರ ಜಾರಿಗೆ ಅವಕಾಶ ನೀಡುವುದಿಲ್ಲ' ಎಂದಿದ್ದಾರೆ.

ಫೆಮಾ ತಿದ್ದುಪಡಿಗೆ ಸೋಲು
ಎಫ್‌ಡಿಐಗೆ ಅವಕಾಶ ನೀಡಲು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಅಡಿಯಲ್ಲಿ ರಿಸರ್ವ್ ಬ್ಯಾಂಕ್ ಪ್ರಕಟಿಸಿದ ನಿಯಮಗಳಿಗೆ ತಿದ್ದುಪಡಿ ತರುವಂತೆ ಕೋರಿ ಮಂಡಿಸಿದ ನಿಲುವಳಿಗೂ ಲೋಕಸಭೆಯಲ್ಲಿ ಸೋಲಾಗಿದೆ. ಈ ವಿಷಯದಲ್ಲಿ 254 ಸದಸ್ಯರು ಸರ್ಕಾರದ ಪರ ಮತ ಹಾಕಿದರೆ, 224 ಸದಸ್ಯರು ವಿರುದ್ಧವಾಗಿ ಮತ ಹಾಕಿದರು.


14 ಪಕ್ಷ ಎಫ್‌ಡಿಐ ವಿರುದ್ಧ: ಬಿಜೆಪಿ
ಲೋಕಸಭೆಯಲ್ಲಿ ಎಫ್‌ಡಿಐ ವಿರುದ್ಧ ನಿಲುವಳಿ ಮಂಡಿಸಿದ ವಿರೋಧ ಪಕ್ಷ ಬಿಜೆಪಿಯ ನಾಯಕಿ ಸುಷ್ಮಾ ಸ್ವರಾಜ್, `14 ಪಕ್ಷಗಳು ಇದನ್ನು ವಿರೋಧಿಸಿವೆ. ತಾಂತ್ರಿಕವಾಗಿ ಸರ್ಕಾರ ಗೆದ್ದಿರಬಹುದು. ಆದರೆ ನೈತಿಕವಾಗಿ ಸೋತಿದೆ' ಎಂದರು.

ಅಲ್ಪಮತದಲ್ಲಿ ಸರ್ಕಾರ: ಮಮತಾ
ಕೋಲ್ಕತ್ತ ವರದಿ:ಎಫ್‌ಡಿಐ ವಿಷಯದಲ್ಲಿ ಲೋಕಸಭೆಯಲ್ಲಿ ಯುಪಿಎ ಸರ್ಕಾರ ಗೆಲುವು ಪಡೆದಿದ್ದಕ್ಕೆ ಪ್ರತಿಕ್ರಿಯಿಸಿದ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ` ಇದು ಅಲ್ಪಮತದ ಸರ್ಕಾರ' ಎಂದರು.ಎರಡನೇ ಅವಧಿಯಲ್ಲಿ ಯುಪಿಎ ಅಲ್ಪಮತಕ್ಕೆ ಕುಸಿದಿದೆ ಎನ್ನುವುದು ಸಾಬೀತಾಗಿದೆ. ಸರ್ಕಾರ ವಿಶ್ವಾಸ ಕಳೆದುಕೊಂಡಿದೆ. ಹಾಗಾಗಿ ಹೊಸದಾಗಿ ಜನಾದೇಶ ಪಡೆಯಬೇಕಾಗಿದೆ' ಎಂದು `ದೀದಿ' ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT