ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನದ ಶ್ರವಣಕುಮಾರ!

Last Updated 20 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೀಜಿಂಗ್ (ಐಎಎನ್‌ಎಸ್): ಇಲ್ಲೊಬ್ಬ ಯುವಕ ದಿಢೀರ್ ದೇಶದ ಕಣ್ಮಣಿಯಾಗಿ ಹೊರಹೊಮ್ಮಿದ್ದಾನೆ. ಕಾರಣವಿಷ್ಟೇ, ಫಾನ್ ಮೆಂಗ್ ಎಂಬ 26 ವರ್ಷದ ಈತ  ಪಾರ್ಶ್ವವಾಯುಪೀಡಿತ ವೃದ್ಧೆ ತಾಯಿಯನ್ನು ಗಾಲಿಕುರ್ಚಿಯಲ್ಲಿಯೇ ಅವಳ ಇಷ್ಟದ ಪ್ರವಾಸಿ ತಾಣಗಳಿಗೆ ಕರೆದೊಯ್ಯುವ ಮೂಲಕ ಸುದ್ದಿಯಾಗಿದ್ದಾನೆ.

ಪಾರ್ಶ್ವವಾಯುವಿನ ಪರಿಣಾಮ ಕೌ ಮಿನ್‌ಜುನ್ ಅನೇಕ ವರ್ಷಗಳಿಂದ ಬೀಜಿಂಗ್‌ನಿಂದ ಹೊರ ಹೋಗಿರಲಿಲ್ಲ. ಟಿ.ವಿ. ಮತ್ತು ಪತ್ರಿಕೆಗಳಿಂದ ಕ್ಝಿಶುವಾಂಗ್‌ಬನ್ನ ಎಂಬ ಪ್ರವಾಸಿ ತಾಣದ ಬಗ್ಗೆ ತಿಳಿದಿದ್ದ ಆಕೆ ತನ್ನ ಮಗ ಫಾನ್ ಬಳಿ ಅಲ್ಲಿಗೆ ಹೋಗುವ ಮನದಿಚ್ಛೆ ವ್ಯಕ್ತಪಡಿಸಿದ್ದಳು.

ಗಾಲಿಕುರ್ಚಿಯಲ್ಲಿಯೇ ಇದ್ದ ತನ್ನ ತಾಯಿಯ ಬಹು ದಿನಗಳ ಮನದಾಸೆಯನ್ನು ಪೂರೈಸಲು ಫಾನ್, ನೂರು ದಿನ 3,500 ಕಿ.ಮೀ. ಸಂಚರಿಸಿದ್ದಾನೆ. ಅದಕ್ಕಾಗಿ ತನ್ನ ಉದ್ಯೋಗಕ್ಕೆ ರಾಜೀನಾಮೆ ನೀಡಿ ಜುಲೈ 11ರಂದು ತನ್ನ ತಾಯಿ ಮತ್ತು ಪ್ರೀತಿಯ ಸಾಕು ನಾಯಿಯೊಂದಿಗೆ ಪ್ರವಾಸ ಆರಂಭಿಸಿದ್ದ. ಫಾನ್ ಬಗ್ಗೆ ದೇಶದಾದ್ಯಂತ ಮೆಚ್ಚುಗೆ, ಅಭಿನಂದೆನಗಳ ಮಹಾಪೂರವೇ ಹರಿದುಬಂದಿದೆ. ಎಲ್ಲೆಡೆಯೂ ಆತನಿಗೆ ಸಂಭ್ರಮದ ಸ್ವಾಗತ ದೊರೆಯುತ್ತಿದೆ. 
`ನನ್ನ ಮಗನಿಂದಾಗಿ ಅನೇಕ ವರ್ಷಗಳ ಆಸೆ ಈಡೇರಿದೆ. ಈ ದೀರ್ಘ ಪಯಣದೊಂದಿಗೆ ಫಾನ್ ಹೆಚ್ಚು ಪಕ್ವವಾಗಿದ್ದಾನೆ~ ಎಂದು ಆತನ ತಾಯಿ ಮಿನ್‌ಜುನ್ ಮೆಚ್ಚುಗೆಯ ಮಾತನಾಡಿದ್ದಾಳೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT