ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ: ಎಡಪಕ್ಷ ಕೇಂದ್ರೀಯ ಸಮಿತಿ ಸಭೆ

Last Updated 15 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೀಜಿಂಗ್ (ಪಿಟಿಐ): ಚೀನಾ ಎಡಪಕ್ಷದ ಕೇಂದ್ರೀಯ ಸಮಿತಿ ಸಭೆಯು ಶನಿವಾರ ಆರಂಭವಾಗಿದೆ. ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವಂತಹ ಅಧಿಕಾರ ಹೊಂದಿರುವ ಸಮಿತಿಯ ಆರನೇ ಸಭೆ ಇದಾಗಿದೆ.

ಮುಂದಿನ ವರ್ಷ ಪಕ್ಷದ ಮುಖಂಡತ್ವದಲ್ಲಿ ಆಮೂಲಾಗ್ರ ಬದಲಾವಣೆ ತರಲು ಸಿದ್ಧತೆ ನಡೆಸಲು ಈ ಸಭೆ ನಡೆಸಲಾಗುತ್ತಿದೆ. ಈ ಸಭೆಯಲ್ಲಿ ಕೇಂದ್ರ ಸಮಿತಿಯ 200ಕ್ಕೂ ಹೆಚ್ಚು ಸದಸ್ಯರು ಮತ್ತು ಸೇನೆ, ಸರ್ಕಾರ ಹಾಗೂ ಪ್ರಾಂತೀಯ ಸಮಿತಿಗಳಿಂದ ಆಯ್ದ 150 ಮಂದಿ ಭಾಗವಹಿಸಿದ್ದಾರೆ.

ವಿಶ್ವದಲ್ಲಿ ಬಲಿಷ್ಠ ಎಡಪಕ್ಷ ಹೊಂದಿರುವ ಹೆಗ್ಗಳಿಕೆ ಉಳಿಸಿಕೊಳ್ಳಲು ಹಾಗೂ ಭವಿಷ್ಯದಲ್ಲಿ ಚೀನಾಕ್ಕೆ ಈ ಪಕ್ಷ ಎಷ್ಟರಮಟ್ಟಿಗೆ ಪ್ರಸ್ತುತ ಎಂಬ ಬಗ್ಗೆಸಭೆಯಲ್ಲಿ ಗಹನವಾದ ಚರ್ಚೆ ನಡೆಯಲಿದೆ.  ಚೀನಾ ಕೂಡ ಹಣದುಬ್ಬರ, ಬೆಲೆ ಏರಿಕೆ, ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ನಡೆಯುತ್ತಿರುವ ಎಡಪಕ್ಷದ ಕೇಂದ್ರೀಯ ಸಮಿತಿ ಸಭೆ ಬಹು ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT