ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ ಮರೆತು ಮುಂದಡಿ ಇಡಿ - ಕಲಾಂ

Last Updated 4 ಜನವರಿ 2012, 19:30 IST
ಅಕ್ಷರ ಗಾತ್ರ

ಭುವನೇಶ್ವರ (ಪಿಟಿಐ):  `ವೈಜ್ಞಾನಿಕ ರಂಗದಲ್ಲಿ ಚೀನಾ ನಮ್ಮನ್ನು ಮೀರಿಸಿದೆ ಎಂದು ತಲೆಕೆಡಿಸಿಕೊಳ್ಳಬೇಡಿ. ಈ ಕ್ಷೇತ್ರದಲ್ಲಿ ಸಾಧನೆ ಮಾಡುವ ಕನಸನ್ನು ಬಿಡಬೇಡಿ...~

-ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ನೀಡಿದ ಸಂದೇಶ ಇದು.

`ಚೀನಾ ದೇಶವು ಸಂಶೋಧನೆ ಹಾಗೂ ಅಭಿವೃದ್ಧಿಯಲ್ಲಿ ಭಾರತವನ್ನು ಹಿಂದಕ್ಕೆ ಹಾಕಿದೆ ಎಂದು ಬೇಸರ ಪಟ್ಟುಕೊಳ್ಳುವ ಅಗತ್ಯವಿಲ್ಲ. ಕಠಿಣ ಪರಿಶ್ರಮ, ನಿರಂತರ ಜ್ಞಾನದಾಹ ಇದ್ದಲ್ಲಿ ಏನು ಬೇಕಾದರೂ ಸಾಧಿಸಬಹುದು~ ಎಂದು ವಿದ್ಯಾರ್ಥಿಗಳಲ್ಲಿ ಕಲಾಂ ಹೊಸ ಕನಸು ಬಿತ್ತಿದರು.

ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶವು ಹಿನ್ನಡೆ ಸಾಧಿಸುತ್ತಿದೆ ಎಂದು ಮಂಗಳವಾರ ವಿಜ್ಞಾನ ಸಮಾವೇಶವನ್ನು ಉದ್ಘಾಟಿಸಿ ಪ್ರಧಾನಿ ಅವರು ಆತಂಕ ವ್ಯಕ್ತಪಡಿಸಿದ ಮರುದಿನವೇ ಕಲಾಂ ಈ ಭರವಸೆಯ ಮಾತುಗಳನ್ನು ಆಡಿದ್ದಾರೆ.

ಭ್ರಷ್ಟಾಚಾರದ ವಿರುದ್ಧ ಹೋರಾಟ, ಕ್ಷಿಪಣಿ ಉಡಾವಣೆಯಿಂದ ಕಡಲ ಜೀವಗಳ ಮೇಲೆ ಆಗುವ ದುಷ್ಪರಿಣಾಮ... ಇತ್ಯಾದಿ ವಿಷಯಗಳ ಬಗ್ಗೆ  ಕಲಾಂ ಅವರಿಗೆ ವಿದ್ಯಾರ್ಥಿಗಳಿಂದ ನೂರಾರು ಪ್ರಶ್ನೆಗಳು ತೂರಿಬಂದವು.

`ನಿಮ್ಮ ಮನೆಯನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸಿ~ ಎನ್ನುವುದು ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಪ್ರಶ್ನೆಗೆ ಕಲಾಂ ಕೊಟ್ಟ ಚುಟುಕು ಉತ್ತರ.

`ನೀವು  ರಾಷ್ಟ್ರಪತಿಯಾಗಿದ್ದಾಗ ವಿಜ್ಞಾನ ಹಾಗೂ ರಾಜಕೀಯವನ್ನು ಸರಿದೂಗಿಸಿಕೊಂಡು ಹೋಗಿದ್ದು ಹೇಗೆ?~ ಎನ್ನುವ ಪ್ರಶ್ನೆ ಕೂಡ ಕೇಳಿಬಂತು.

ಇದಕ್ಕೆ ಕಲಾಂ `ವಿಜ್ಞಾನಕ್ಕೆ ಭಾರಿ ಹಣ ಬೇಕು. ಈ ಹಣ ರಾಜಕೀಯದಿಂದ ಬರುತ್ತದೆ~ ಎಂದು ಮಾರ್ಮಿಕವಾಗಿ ನುಡಿದರು. `ಮುಂದಿನ ಮೂರು ದಶಕಗಳಲ್ಲಿ ಭೂಮಿ, ಚಂದ್ರ ಹಾಗೂ ಮಂಗಳ ಗ್ರಹ ಆರ್ಥಿಕ ವಸ್ತುಗಳಾಗುತ್ತವೆ. ನಾವು ಇವುಗಳಿಂದ ಅನೇಕ ಪ್ರಯೋಜನಗಳನ್ನು ಎದುರು ನೋಡುತ್ತಿದ್ದೇವೆ~ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT