ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ ರೇಷ್ಮೆ ಆಮದು ಅನಿವಾರ್ಯ

Last Updated 5 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಕೊಯಮತ್ತೂರು (ಪಿಟಿಐ): ದೇಶದಲ್ಲಿ ರೇಷ್ಮೆ ಪೂರೈಕೆಗಿಂತಲೂ ಬೇಡಿಕೆಯೇ ಹೆಚ್ಚಾಗಿರುವುದರಿಂದ ಚೀನಾದಿಂದ 4000 ಟನ್ ನೇಯ್ಗೆ ರೇಷ್ಮೆ ಆಮದು ಮಾಡಿಕೊಳ್ಳುವುದು ಅನಿವಾರ್ಯವಾಗಲಿದೆ ಎಂದು `ಸಿಲ್ಕ್   ಮಾರ್ಕ್ ಆಫ್ ಇಂಡಿಯ~ದ ಮುಖ್ಯ ಕಾರ್ಯನಿರ್ವಣಾಧಿಕಾರಿ ಕೆ.ಎಸ್.ಮೆನನ್ ಹೇಳಿದರು.

ಪ್ರಸ್ತುತ ದೇಶದ ಬಟ್ಟೆ ಉದ್ಯಮದಲ್ಲಿ ಕಚ್ಚಾ ಮತ್ತು ನೇಯ್ಗೆಯ ರೇಷ್ಮೆ ಸೇರಿ ಒಟ್ಟು 30 ಸಾವಿರ ಟನ್ ಬೇಡಿಕೆ ಇದೆ. ಆದರೆ, ಮಾರುಕಟ್ಟೆಯಿಂದ ಪೂರೈಕೆ ಆಗುತ್ತಿರುವುದು ಕೇವಲ 21,500 ಟನ್. ಹಾಗಾಗಿ 5000 ಟನ್ ಕಚ್ಚಾ ರೇಷ್ಮೆ ಮತ್ತು 4000 ಟನ್ ನೇಯ್ಗೆ ರೇಷ್ಮೆ(ಚೀನಾದಿಂದ) ಆಮದು ಮಾಡಿಕೊಳ್ಳುವುದು ತಕ್ಷಣದ ಅಗತ್ಯವಾಗಿದೆ ಎಂದು ಇಲ್ಲಿ ಸುದ್ದಿಗಾ   ರರಿಗೆ ತಿಳಿಸಿದರು.

`ಆರು ದಿನಗಳ ಸಿಲ್ಕ್ ಮಾರ್ಕ್ ಮೇಳ~ದಲ್ಲಿ ಭಾಗವಹಿಸಲು ಇಲ್ಲಿಗೆ ಆಗಮಿಸಿರುವ ಅವರು, ಭಾರತದಿಂದ ಅಮೆರಿಕ, ಯೂರೋಪ್ ಮತ್ತು ಮಧ್ಯಪ್ರಾಚ್ಯ ದೇಶಗಳಿಗೆ ವಾರ್ಷಿಕ ರೂ. 3000 ಕೋಟಿ ಮೌಲ್ಯದ ರೇಷ್ಮೆ ಬಟ್ಟೆ ಮತ್ತಿತರ ಉತ್ಪನ್ನಗಳನ್ನು ರಫ್ತು ಮಾಡಲಾಗುತ್ತಿದೆ ಎಂದು ವಿವರಿಸಿದರು.

ಕಲಬೆರಕೆ ರೇಷ್ಮೆ ಬಳಕೆ ನಿಯಂತ್ರಣ ಕುರಿತ ಪ್ರಶ್ನೆಗೆ, ಇಂತಹುದನ್ನೆಲ್ಲಾ ಕಾನೂನು ಜಾರಿ ಮೂಲಕ ನಿಯಂತ್ರಿಸುವುದು ಬಹಳ ಕಷ್ಟ ಎಂದು ಉತ್ತರಿಸಿದರು.

ದೇಶದಲ್ಲಿ ಸದ್ಯ ಕೈಮಗ್ಗ ಮತ್ತು ವಿದ್ಯುತ್ ಚಾಲಿತ ಮಗ್ಗ ಕ್ಷೇತ್ರದಲ್ಲಿ ಒಟ್ಟು 5 ಲಕ್ಷ ನೇಕಾರರು ದುಡಿಯುತ್ತಿದ್ದಾರೆ. ಅವರ ಕಸುಬು ರೇಷ್ಮೆಯನ್ನೇ ಹೆಚ್ಚಾಗಿ ಅವಲಂಬಿಸಿದೆ ಎಂದು ರೇಷ್ಮೆ ಉದ್ಯಮದ ಚಿತ್ರಣ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT