ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ: ಲೀ ಜತೆ ಆಂಟನಿ ಸಭೆ

Last Updated 5 ಜುಲೈ 2013, 19:59 IST
ಅಕ್ಷರ ಗಾತ್ರ

ಬೀಜಿಂಗ್ (ಪಿಟಿಐ): ರಕ್ಷಣಾ ಸಚಿವ ಎ.ಕೆ. ಆಂಟನಿ ಅವರು ಚೀನಾ ಪ್ರಧಾನಿ ಲೀ ಕೆಕಿಯಾಂಗ್ ಮತ್ತು ರಕ್ಷಣಾ ಸಚಿವ ಚಾಂಗ್ ವಾಂಕ್ವಾನ್ ಅವರ ಜತೆ ಮಾತುಕತೆ ನಡೆಸಿ ಗಡಿಯ ಭದ್ರತೆಗೆ ಹೊಸ ಕಾರ್ಯತಂತ್ರ ರೂಪಿಸುವುದು ಸೇರಿದಂತೆ ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಚರ್ಚಿಸಿದರು.

ಇತ್ತೀಚೆಗೆ ಚೀನಾ ಸೇನೆ ಲಡಾಖ್‌ನಲ್ಲಿ ಭಾರತದ ಗಡಿಯೊಳಗೆ ಅಕ್ರಮ ಪ್ರವೇಶ ಮಾಡಿದ್ದರ ಹಿನ್ನೆಲೆಯಲ್ಲಿ ವಿಶೇಷವಾಗಿ ಗಡಿಯುದ್ಧಕ್ಕೂ ಭದ್ರತಾ ವ್ಯವಸ್ಥೆಗೆ ಹೊಸ ಕ್ರಮ ಅಳವಡಿಸುವುದರ ಬಗ್ಗೆ ಆಂಟನಿ ಸಮಾಲೋಚಿಸಿದರು ಎನ್ನಲಾಗಿದೆ.

ಚೀನಾ ಮತ್ತು ಭಾರತ ಪ್ರಮುಖ ನೆರೆಯ ರಾಷ್ಟ್ರಗಳಾಗಿರುವುದರಿಂದ ಶಾಂತಿಯುತ ಸಹಬಾಳ್ವೆ ಉಭಯತ್ರರಿಗೆ ಹಾಗೂ ಏಷ್ಯಾ ಖಂಡಕ್ಕೆ ಒಳಿತು ಎಂದು ಕೆಕಿಯಾಂಗ್ ಹೇಳಿದ್ದಾರೆ.

ಶಾಂತಿ ಕಾಪಾಡಲು ಉಭಯ ರಾಷ್ಟ್ರಗಳ ನಡುವೆ `ಸೂಕ್ತ ಸಂವಹನ'ದ ಅವಶ್ಯಕತೆ ಇದೆ ಎಂಬುದನ್ನು ಆಂಟನಿ ಮತ್ತು ಚಾಂಗ್ ಒಪ್ಪಿಕೊಂಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT