ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ: ಸಾಮಾಜಿಕ ತಾಣಗಳ ಮೇಲೆ ಹದ್ದಿನ ಕಣ್ಣು

Last Updated 26 ಫೆಬ್ರುವರಿ 2011, 11:15 IST
ಅಕ್ಷರ ಗಾತ್ರ

ಬೀಜಿಂಗ್ (ಎಎಫ್‌ಪಿ): ಮಧ್ಯಪ್ರಾಚ್ಯದಲ್ಲಿ ಭುಗಿಲೆದ್ದಿರುವ ರಾಜಕೀಯ ಸಂಘರ್ಷ ಚೀನಾಕ್ಕೂ ವ್ಯಾಪಿಸಿದ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿದ್ದ ‘ಲಿಂಕ್ ಡಿಎಲ್‌ಎನ್’ ಅಂತರ್ಜಾಲ ಸೇವೆಯನ್ನು ಮತ್ತೆ ಆರಂಭಿಸಲಾಗಿದೆ.

 ಜಾಗತಿಕಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಲಿಂಕ್ ಡಿಎಲ್‌ಎನ್‌ನ  ‘ಜಸ್ಟ್‌ಪಿನ್.ಕಾಮ್’ ತಾಲತಾಣವನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿತ್ತು.

ಮೂರು ದಶಕಕ್ಕೂ ಹೆಚ್ಚು ಕಾಲ ಆಡಳಿತ ನಡೆಸುತ್ತಿದ್ದ ಈಜಿಪ್ಟ್ ಹಾಗೂ ಉತ್ತರ ಆಫ್ರಿಕಾದ ಅಧ್ಯಕ್ಷರ ವಿರುದ್ಧ ಅಲ್ಲಿನ ಜನತೆ ನಡೆಸಿದ ಸಂಘಟಿತ ಹೋರಾಟದಿಂದ ಪ್ರೇರೇಪಿತರಾದ ಚೀನಾ ನಾಗರಿಕರು, ದೀರ್ಘಕಾಲದಿಂದ ಅಧಿಕಾರ ನಡೆಸುತ್ತಿರುವ ಕಮ್ಯುನಿಸ್ಟ್ ಸರ್ಕಾರವನ್ನು ಕಿತ್ತೊಗೆಯಲು ಸಂಕಲ್ಪ ಮಾಡಿದ್ದರು. ಅದಕ್ಕಾಗಿ ‘ಜಾಸ್ಮಿನ್ ರ್ಯಾಲಿ’ ಎಂಬ ಜಾಥಾ ಚೀನಾದ ಹಲವು ನಗರಗಳಲ್ಲಿ ಆರಂಭಗೊಂಡಿತ್ತು.

ಸಾಮಾಜಿಕ ತಾಣಗಳ ಸ್ಥಗಿತ: ಇದಕ್ಕೆ ಪುಷ್ಠಿ ನೀಡುವಂತೆ ಜಾಗತಿಕಮಟ್ಟದ ಸಾಮಾಜಿಕ ತಾಣಗಳಾದ ಫೇಸ್‌ಬುಕ್ ಹಾಗೂ ಟ್ವಿಟರ್ ಸಹಕರಿಸಿದ್ದವು. ಹೀಗಾಗಿ ಈ ತಾಣಗಳ ಮೇಲೆ ಅಲ್ಲಿನ ಸರ್ಕಾರ ಹದ್ದಿನ ಕಣ್ಣು ನೆಟ್ಟಿದೆ.

ವಿಶ್ವದಲ್ಲೇ ಅತಿ ಹೆಚ್ಚು ಅಂದರೆ 457 ದಶಲಕ್ಷ ಅಂತರ್ಜಾಲ ಬಳಕೆದಾರರು ಇರುವ ಚೀನಾದಲ್ಲಿ ಸಾಮಾಜಿಕ ತಾಣಗಳನ್ನು ಸ್ಥಗಿತಗೊಳಿಸಲಾಗಿದೆ. ಅಸ್ತಿತ್ವದಲ್ಲಿರುವ ತಾಣಗಳಿಗೆ ಅರಬ್ ರಾಷ್ಟ್ರಗಳಿಂದ ಬರುವ ಹಾಗೂ ಹೋಗುವ ಪ್ರತಿಯೊಂದು ಮಾಹಿತಿ ಕುರಿತು ಅಲ್ಲಿನ ಸೆನ್ಸಾರ್ ಸಮಿತಿ ಸೂಕ್ಷ್ಮವಾಗಿ ಗಮನಿಸುತ್ತಿದೆ.

ವಿದೇಶಿ ಪತ್ರಕರ್ತರಿಗೆ ಎಚ್ಚರಿಕೆ: ಚೀನಾದಲ್ಲಿ ಭುಗಿಲೆದ್ದಿರುವ ಸಂಘರ್ಷವನ್ನು ವರದಿ ಮಾಡುವ ಮುನ್ನ, ದೇಶದಲ್ಲಿನ ಮಾಧ್ಯಮ ಕುರಿತ ಕಾನೂನುಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಚೀನಾ ಪೊಲೀಸರು ವಿದೇಶಿ ಮಾಧ್ಯಮದವರನ್ನು ಎಚ್ಚರಿಸಿದ್ದಾರೆ. ಅದರಲ್ಲೂ ಸ್ಥಳೀಯ ನಾಗರಿಕರ ಸಂದರ್ಶನ ಪಡೆದು ಬಿತ್ತರಿಸುವ ಮುನ್ನ ತುಸು ಎಚ್ಚರದಿಂದಿರುವುದು ಉಚಿತ ಎಂದು ಸೂಕ್ಷ್ಮವಾಗಿ ತಿಳಿಸಿದ್ದಾರೆ.

ವಿದೇಶಿ ಸುದ್ದಿ ಸಂಸ್ಥೆ ಕಚೇರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿರುವ ಚೀನಾ ಪೊಲೀಸ್ ಇಲಾಖೆಯ ಸಾರ್ವಜನಿಕ ಸುರಕ್ಷಾ ಸಂಸ್ಥೆ (ಪಿಎಸ್‌ಬಿ)ಯ ಅಧಿಕಾರಿಗಳು, ‘ದೇಶದ ವ್ಯಕ್ತಿಗಳ ಸಂದರ್ಶನ ಪಡೆಯುವ ಹಾಗೂ ಬಿತ್ತರಿಸುವ ಮುನ್ನ ಅನುಮತಿ ಪಡೆಯುವುದು ಅತ್ಯಗತ್ಯ. ಜತೆಗೆ ದೇಶದ ಯಾವುದೇ ಸುದ್ದಿಯನ್ನು ಪ್ರಕಟಿಸುವ ಮೊದಲು ಕಾನೂನು ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕೆಂದು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT