ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ: ಹಕ್ಕಿಜ್ವರಕ್ಕೆ 10 ಜನರು ಬಲಿ

Last Updated 12 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೀಜಿಂಗ್(ಐಎಎನ್‌ಎಸ್/ಇಎಫ್‌ಒ): ಇಲ್ಲಿನ ಶಾಂಘೈ ಪ್ರದೇಶದಲ್ಲಿ ಕಳೆದ ತಿಂಗಳು ಕಾಣಿಸಿಕೊಂಡ ಹೊಸ ರೀತಿಯ ಹಕ್ಕಿಜ್ವರದಿಂದಾಗಿ ಮೃತಪಟ್ಟವರ ಸಂಖ್ಯೆ 10ಕ್ಕೆ ಏರಿದೆ.

ಶಾಂಘೈನಲ್ಲಿ ಕಾಣಿಸಿಕೊಂಡ ಈ ಸೋಂಕು 38 ಜನರಿಗೆ ತಗುಲಿತ್ತು. ಇವರಲ್ಲಿ 28 ಜನರು ಬದುಕುಳಿದಿದ್ದಾರೆ. ಆದರೆ, ಇವರ ಪೈಕಿ ಪೂರ್ಣ ಗುಣಮುಖ ಆಗಿರುವುದು ನಾಲ್ಕು ವರ್ಷದ ಒಬ್ಬ ಬಾಲಕ ಮಾತ್ರ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ರೋಗಕ್ಕೆ ತುತ್ತಾದವರು ಶಾಂಘೈ, ಜಿಯಾಂಗ್‌ಸು, ಝೀಜಿಯಾಂಗ್ ಮತ್ತು ಆನ್‌ಹುಯಿ ಪ್ರದೇಶದ ಪೂರ್ವ ಭಾಗದವರು.

ಸೋಂಕು ತಗುಲಿದವರ ಜತೆ ಸಂಪರ್ಕ ಹೊಂದಿರುವವರಿಗೆ ಯಾವುದೇ ಸಮಸ್ಯೆಯಾಗಿಲ್ಲ ಎಂದು ಚೀನಾದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಹೊಸ ಬಗೆಯ ಹಕ್ಕಿಜ್ವರ ಹರಡದಂತೆ ಎಚ್ಚರ ವಹಿಸಿ ಪೂರ್ವ ಚೀನಾದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಹಕ್ಕಿಗಳನ್ನು ಕೊಲ್ಲಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT