ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ ಹಿಂದಿಕ್ಕಿದ ಅಮೆರಿಕ

Last Updated 13 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಲಂಡನ್: ಕ್ರೀಡಾಜಗತ್ತಿನ ದೈತ್ಯ ಶಕ್ತಿಯಾಗಿರುವ ಚೀನಾವನ್ನು ಈ ಸಲದ ಒಲಿಂಪಿಕ್ಸ್ ಪದಕ ಗಳಿಕೆಯಲ್ಲಿ ಹಿಂದಿಕ್ಕಿ ಅಮೆರಿಕಾ ಅಗ್ರಸ್ಥಾನ ಪಡೆದಿದೆ.

ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಒಟ್ಟು ಪದಕ ಜಯಿಸುವಲ್ಲಿ ಅಮೆರಿಕಾವೇ ಮುಂದಿತ್ತು. ಆದರೆ ಚೀನಾ 51 ಬಂಗಾರದ ಪದಕ ಜಯಿಸಿದ್ದ ಕಾರಣ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಿತು. ಚೀನಾ ಒಟ್ಟು 100 ಪದಕ ಗಳಿಸಿದ್ದರೆ, ಅಮೆರಿಕಾ 36 ಚಿನ್ನ, 38 ಬೆಳ್ಳಿ ಹಾಗೂ 36ಕಂಚು ಸೇರಿದಂತೆ ಒಟ್ಟು 110 ಪದಕ ಗೆದ್ದು ಎರಡನೆಯ ಸ್ಥಾನ ಪಡೆದಿತ್ತು.

ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಮೂರು ಪದಕ ಜಯಿಸಿ 50ನೇ ಸ್ಥಾನ ಗಳಿಸಿದ್ದ ಭಾರತ, ಈ ಸಲದ ಒಲಿಂಪಿಕ್ಸ್‌ನಲ್ಲಿ ಆರು ಪದಕಗಳೊಂದಿಗೆ 55ನೇ ಪಡೆದಿದೆ.

2008ರಲ್ಲಿ ರಷ್ಯಾ (73) ಹಾಗೂ ಬ್ರಿಟನ್ (47) ಕ್ರಮವಾಗಿ ಮೂರು ಹಾಗೂ ನಾಲ್ಕನೇ ಸ್ಥಾನ ಪಡೆದಿದ್ದವು. ಆದರೆ, ಈ ಸಲ ಸ್ಥಾನ ಅದಲು ಬದಲಾಗಿವೆ. ಬ್ರಿಟನ್ (29 ಚಿನ್ನ ಸೇರಿದಂತೆ 65) ಹಾಗೂ ರಷ್ಯಾ (24 ಚಿನ್ನ ಸೇರಿದಂತೆ 82) ಪದಕ ಗೆದ್ದುಕೊಂಡಿವೆ.

ಪಾಕ್‌ಗೆ ನಿರಾಸೆ (ಇಸ್ಲಾಮಾಬಾದ್ ವರದಿ): ಲಂಡನ್‌ನಲ್ಲಿ ಒಂದೂ ಪದಕ ಗೆಲ್ಲಲಾಗದೇ ಬರಿಗೈಯಲ್ಲಿ ವಾಪಸ್ಸಾಗಿರುವ ಕಾರಣ ಪಾಕಿಸ್ತಾನಕ್ಕೆ ಈ ಒಲಿಂಪಿಕ್ಸ್ ನಿರಾಸೆ ಮೂಡಿಸಿದೆ.

`ಪಾಕ್‌ಗೆ ಕೇವಲ ಒಂದು ಪದಕ ಜಯಿಸಲು ಸಾಧ್ಯವಾಗದೇ ಇದ್ದದ್ದು ಬೇಸರದ ಸಂಗತಿ. ಇದೊಂದು ದುರಂತ~ ಎಂದು `ಡಾನ್~ ಪತ್ರಿಕೆ ಅಗ್ರ ಲೇಖನ ಬರೆದಿದೆ.

ಒಲಿಂಪಿಕ್ಸ್‌ನಲ್ಲಿ 16 ಹಾಕಿ ಆಟಗಾರರು ಸೇರಿದಂತೆ ಒಟ್ಟು 20 ಕ್ರೀಡಾಳುಗಳು ಪಾಕಿಸ್ತಾನವನ್ನು ಪ್ರತಿನಿಧಿಸಿದ್ದರು. ಯಾವೊಬ್ಬ ಸ್ಪರ್ಧಿಯೂ ಫೈನಲ್ ತಲುಪಲಿಲ್ಲ. ಆದ್ದರಿಂದ ದೇಶದ ಕ್ರೀಡೆಗೆ ಇನ್ನಷ್ಟು ಸೌಲಭ್ಯಗಳನ್ನು ಒದಗಿಸುವ ಮೂಲಕ ಚೇತರಿಕೆ ನೀಡುವ ಕಾರ್ಯವಾಗಬೇಕು. ಅಥ್ಲೀಟ್‌ಗಳಿಗೆ ಪ್ರೋತ್ಸಾಹ ನೀಡಲು ಮುಂದಾಗಬೇಕು ಎಂದು ಪತ್ರಿಕೆ ಅಭಿಪ್ರಾಯಪಟ್ಟಿದೆ.

ಉಗಾಂಡಕ್ಕೆ 40 ವರ್ಷಗಳ ಬಳಿಕ ಚಿನ್ನ
ಲಂಡನ್ (ಪಿಟಿಐ):
ಈ ಸಲದ ಒಲಿಂಪಿಕ್ಸ್ ಹಲವು ವಿಶೇಷತೆಗಳ ಹೂರಣವನ್ನು ಒಳಗೊಂಡಿತ್ತು. ಅದರಲ್ಲಿ ಉಗಾಂಡಕ್ಕೆ ಇದು ಸ್ಮರಣೀಯ ಒಲಿಂಪಿಕ್ಸ್. 40 ವರ್ಷಗಳ ನಂತರ ಆ ದೇಶಕ್ಕೆ ಚಿನ್ನದ ಪದಕ ಬಂದಿದ್ದು ಇದಕ್ಕೆ ಕಾರಣ.

ಒಲಿಂಪಿಕ್ಸ್‌ನ ಕೊನೆಯ ದಿನವಾದ ಭಾನುವಾರ ಉಗಾಂಡದ ಸ್ಟೀಫನ್ ಕಿಪ್ರೊಟಿಚ್ ಪುರುಷರ ವಿಭಾಗದ ಮ್ಯಾರಾಥಾನ್‌ನಲ್ಲಿ ಚಿನ್ನದ ಪದಕ ಜಯಿಸಿದರು. 1972ರ ಮ್ಯೂನಿಕ್ ಒಲಿಂಪಿಕ್ಸ್‌ನ 400ಮೀ. ನಲ್ಲಿ ಜಾನ್ ಅಕಿ ಬುವಾ ಅವರು `ಬಂಗಾರ~ದ ಸಾಧನೆ ಮಾಡಿದ್ದರು. ಮತ್ತೆ ಈ ದೇಶಕ್ಕೆ ಚಿನ್ನದ ಪದಕ ಬರಲು 40 ವರ್ಷ ಕಾಯಬೇಕಾಯಿತು.

ಒಲಿಂಪಿಕ್ಸ್‌ನಲ್ಲಿ ಉಗಾಂಡದ 15 ಕ್ರೀಡಾಳುಗಳು ಪಾಲ್ಗೊಂಡಿದ್ದರು. ಬ್ಯಾಡ್ಮಿಂಟನ್, ಈಜು, ವೇಟ್‌ಲಿಫ್ಟಿಂಗ್ ಸ್ಪರ್ಧೆಗಳಲ್ಲಿ ಸ್ಪರ್ಧಿಸಿದ್ದರು. ಅಲ್ಲಿ ಯಾವ ಸ್ಪರ್ಧಿಗಳಿಗೂ ಚಿನ್ನದ ಪದಕ ಗೆಲ್ಲಲು ಸಾಧ್ಯವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT