ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾದಲ್ಲಿ ನೌಕೆ ಮುಳುಗಿ 400 ಮಂದಿ ಸಾವು?

Last Updated 2 ಜೂನ್ 2015, 5:20 IST
ಅಕ್ಷರ ಗಾತ್ರ

ಬೀಜಿಂಗ್‌ (ಪಿಟಿಐ): ದಕ್ಷಿಣ ಚೀನಾದ ಯಂಗ್ಟಿಜ್‌ ನದಿಯಲ್ಲಿ ಕುಂಭದ್ರೋಣ ಮಳೆ ಮತ್ತು ಬಿರುಗಾಳಿಗೆ ಸಿಲುಕಿ ಸೋಮವಾರ ರಾತ್ರಿ ಪ್ರವಾಸಿ ನೌಕೆಯೊಂದು ಮುಳುಗಿದ್ದು ಘಟನೆಯಲ್ಲಿ 400 ಮಂದಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಪ್ರವಾಸಿಗರಿಂದ ತುಂಬಿದ್ದ ಈ ನೌಕೆಯು ಪೂರ್ವ ಚೀನಾದ ನನ್‌ಜಿಂಗ್‌ ನಗರದಿಂದ ಆಗ್ನೇಯ ಚೀನಾದ ಚಾಂಗ್‌ಜಿಂಗ್‌ ನಗರಕ್ಕೆ   ಹೊರಟಿತ್ತು. ಹುಬೈ ಪ್ರಾಂತ್ಯದ ಜಿಯನ್ಲಿ ಸಮೀಪ ಬಂದಾಗ ಭಾರಿ ಮಳೆ  ಮತ್ತು ಗಾಳಿ ಪ್ರಾರಂಭವಾಯಿತು. 

ನಿಯಂತ್ರಣ  ಕಳೆದುಕೊಂಡ ನೌಕೆ ತಲೆಕೆಳಗಾಗಿ ನದಿಯಲ್ಲಿ ಮುಳುಗಿತು ಎಂದು  ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿ ತಿಳಿಸಿರುವುದಾಗಿ ಕ್ಸಿನುವಾ ಸುದ್ದಿಸಂಸ್ಥೆ ವರದಿ ಮಾಡಿದೆ.

ನೌಕೆಯಲ್ಲಿದ್ದ  ಒಟ್ಟು 458 ಪ್ರಯಾಣಿಕರಿದ್ದರು.  ಇವರಲ್ಲಿ ಹೆಚ್ಚಿನವರು 50 ರಿಂದ 80 ವರ್ಷದೊಳಗಿನವರು. ನೀರಿನಲ್ಲಿ ಮುಳುಗಿದ್ದವರಲ್ಲಿ 10 ಮಂದಿಯನ್ನು ರಕ್ಷಿಸಲಾಗಿದೆ. ಇನ್ನು ಬದುಕುಳಿದಿರುವವರ ಸಂಖ್ಯೆ ತುಂಬಾ ಕಡಿಮೆ ಎಂದು  ಸಿಬ್ಬಂದಿ ಹೇಳಿರುವುದಾಗಿ ಸುದ್ದಿಸಂಸ್ಥೆ ಹೇಳಿದೆ.  ಇನ್ನೊಂದು ಮೂಲಗಳ ಪ್ರಕಾರ ನದಿಯಲ್ಲಿ ಮುಳುಗಿದ್ದವರಲ್ಲಿ ಒಟ್ಟು 35 ಮಂದಿಯನ್ನು ರಕ್ಷಿಸಲಾಗಿದೆ.

ಗಂಟೆಗೆ 130 ಕಿ.ಮೀ ವೇಗದಲ್ಲಿ ಬಂದು ಅಪ್ಪಳಿಸಿದ ಗಾಳಿಯು ನೌಕೆಯನ್ನು ಬೋರಲಾಗಿಸಿತು ಎಂದು ಹವಾಮಾನ ಇಲಾಖೆ ಹೇಳಿದೆ. ಸದ್ಯ  30 ಬೋಟುಗಳಲ್ಲಿ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT