ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುಂಗಡಿಪುರ-ಪರಿಶಿಷ್ಟರ ಬಡಾವಣೆ: ಕುಡಿಯುವ ನೀರಿಗೆ ತತ್ವಾರ

Last Updated 15 ಫೆಬ್ರುವರಿ 2012, 8:00 IST
ಅಕ್ಷರ ಗಾತ್ರ

ಸಂತೇಮರಹಳ್ಳಿ: ಚರಂಡಿ ಅವ್ಯವಸ್ಥೆ, ಬೀದಿಯಲ್ಲೇ ಹರಿಯುವ ಕೊಳಚೆ ನೀರು, ಭೂಮಿಯಲ್ಲಿ ಹೂತುಕೊಂಡಿ ರುವ ಕೈಪಂಪು, ನೈರ್ಮಲ್ಯದ ಕೊರತೆ... ಇವು ಸಮೀಪದ ಚುಂಗಡಿಪುರ ಗ್ರಾಮದ ಪರಿಶಿಷ್ಟರ ಬಡಾವಣೆಯ ಸಮಸ್ಯೆಗಳ ಅನಾವರಣ. 

 ಈ ಗ್ರಾಮದ ಇನ್ನೊಂದು ಬಡಾವಣೆಯಿಂದ ತ್ಯಾಜ ನೀರು ಹೊರಹೋಗಲು ಸೂಕ್ತ ವ್ಯವಸ್ಥೆ ಕಲ್ಪಿಸಿದೇ ಇರುವುದರಿಂದ ಈ ಕೊಳಚೆ ನೀರು ಪರಿಶಿಷ್ಟರ ಬಡಾವಣೆ ಯನ್ನು ಸುತ್ತುವರಿಯುತ್ತದೆ. ನೈರ್ಮಲ್ಯದ ಕೊರತೆ ಯಿಂದಾಗಿ ಈ ಬಡವಾಣೆ ಸೊಳ್ಳೆಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿದೆ. ಬಡಾವಣೆ ಸುತ್ತುಲೂ ಗಿಡ ಗಂಟಿಗಳು, ಪೊದೆಗಳು ಬೆಳೆದು ವಿಷಜಂತುಗಳು ಹೆಚ್ಚಾಗಿವೆ. ಜನತೆ ಸಂಕಷ್ಟದಲ್ಲೇ ಬದುಕು ಸಾಗಿಸುವ ಸ್ಥಿತಿ ಇದೆ.

ಈ ಬಡವಾಣೆಯಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದಿ ರುವುದರಿಂದ ಮಳೆಗಾಲದಲ್ಲಿ ಮನೆಗಳ ಮುಂಭಾಗವೇ ನೀರು ಜಮಾಯಿಸುತ್ತದೆ. ಇದರಿಂದಾಗಿ ಮನೆಗಳ ಗೋಡೆಗಳು ಶೀತ ಹೆಚ್ಚಾಗಿ ಬಿರುಕು ಬಿಟ್ಟಿವೆ.

ಈ ಗ್ರಾಮದಲ್ಲಿ ಎರಡು ಬಡಾವಣೆಗಳು ಇವೆ. ಜನ ಸಂಖ್ಯೆ 900 ಇದೆ. ಒಂದು ಬಡಾವಣೆಗೆ ಸಮರ್ಪಕ ಚರಂಡಿ ವ್ಯವಸ್ಥೆ ಕಲ್ಪಿಸಲಾಗಿದೆ. ಮತ್ತೊಂದು ಬಡಾವ ಣೆಗೆ ಚರಂಡಿ ವ್ಯವಸ್ಥೆ ಕಲ್ಪಿಸದೇ ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಎಂಬಂತಾಗಿದೆ ಎಂದು ನಿವಾಸಿಗಳು ದೂರುತ್ತಾರೆ. ಗ್ರಾಮದ ಮುಖ್ಯ ರಸ್ತೆಯಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ವೇಳೆ ಕುಸಿದಿದ್ದ ಚರಂಡಿ ದುರಸ್ತಿಗೆ ಈವರೆಗೆ ಕ್ರಮ ಕೈಗೊಂಡಿಲ್ಲ.

 ಒಂದೇ ಒವರ್ ಹೆಡ್ ಟ್ಯಾಂಕ್‌ನಿಂದ ಇಡೀ ಗ್ರಾಮಕ್ಕೆ ಕುಡಿಯುವ ನೀರು ಪೂರೈಸಲಾಗುತ್ತಿದೆ. ಪರಿಶಿಷ್ಟರ ಬಡಾ ವಣೆಗೆ ಒಂದು ಗಂಟೆ ಮಾತ್ರ ನೀರು ಬರುವುದರಿಂದ ಬಡಾ ವಣೆಯ ಜನರಿಗೆ ಪೂರ್ಣ ಪ್ರಮಾಣದಲ್ಲಿ ಕುಡಿ ಯುವ ನೀರು ದೊರಕುತ್ತಿಲ್ಲ.
 
ಇರುವ ಒಂದೇ ಒಂದು ಕೈಪಂಪು ದುರಸ್ತಿ ಕಾಣದೆ ನೆಲದಲ್ಲಿ ಮುಚ್ಚಿ ಹೋಗುವ ಹಂತಕ್ಕೆ ಬಂದಿದೆ. ಈ ಬಡಾವಣೆಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಕಿರು ನೀರು ಸರಬರಾಜು ಘಟಕದಿಂದ ತೊಂಬೆ ಗಳನ್ನು ನಿರ್ಮಿಸಲು ಸ್ಥಳ ಗುರುತಿಸಿ ತಿಂಗಳುಗಳೇ ಕಳೆದಿವೆ. ಪೈಪ್‌ಲೈನ್ ನಿರ್ಮಾಣ ಕಾಮಗಾರಿ ಆರಂಭವಾಗಿಲ್ಲ. ಜನ ಪ್ರತಿನಿಧಿಗಳು ನಿವಾಸಿಗಳ ಕಣ್ಣೊರೆ ಸುವ ಕೆಲಸ ಮಾಡು ತ್ತಿದ್ದಾರೆ ಎನ್ನುತ್ತಾರೆ ಬಡಾವಣೆ ಮುಖಂಡ ಮಹದೇವ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT