ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುಂಚಶ್ರೀಗಳ ಸಾಧನೆ ಅನನ್ಯ: ಸಾಹಿತಿ ಎಸ್.ಎಲ್. ಭೈರಪ್ಪ ಶ್ಲಾಘನೆ

Last Updated 26 ಸೆಪ್ಟೆಂಬರ್ 2013, 8:28 IST
ಅಕ್ಷರ ಗಾತ್ರ

ಮಂಡ್ಯ: ಶಾಲಾ–ಕಾಲೇಜು, ಅನಾಥಾಲಯ, ಆಸ್ಪತ್ರೆಗಳನ್ನು ನಿರ್ಮಿಸುವ ಮೂಲಕ ಶಿವೈಕ್ಯ ಬಾಲಗಂಗಾಧರನಾಥ ಸ್ವಾಮೀಜಿಗಳು ಪವಾಡ ಪುರುಷರಾಗಿದ್ದಾರೆ ಎಂದು ಸರಸ್ವತಿ ಸಮ್ಮಾನ್‌ ಪ್ರಶಸ್ತಿ ಪುರಸ್ಕೃತ, ಸಾಹಿತಿ ಎಸ್‌.ಎಲ್‌. ಭೈರಪ್ಪ ಅಭಿಪ್ರಾಯಪಟ್ಟರು.

ಮಂಡ್ಯ ಜಿಲ್ಲೆಯ ಆದಿಚುಂಚನಗಿರಿಯಲ್ಲಿ ಬುಧವಾರ ನಡೆದ ರಾಜ್ಯಮಟ್ಟದ 35ನೇ ಶ್ರೀಕಾಲಭೈರವೇಶ್ವರ ಜಾನಪದ ಕಲಾಮೇಳದಲ್ಲಿ ಚುಂಚಶ್ರೀ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ಪವಾಡದಲ್ಲಿ ನನಗೆ ನಂಬಿಕೆ ಇಲ್ಲ. ಶ್ರೀಗಳು ಪವಾಡದ ರೀತಿಯಲ್ಲಿ ಸಾಧನೆ ಮಾಡಿ ಹೋಗಿದ್ದಾರೆ. ಅವರ ಸಾಧನೆ ಅನನ್ಯ. ವೇದದ ಅಧ್ಯಯನ ಮಾಡಲು ಎಲ್ಲರಿಗೂ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ನಮ್ಮ ಮನೆ ದೇವರಾದ ಕಾಲಭೈರವನ ಸನ್ನಿಧಿಯಲ್ಲಿ ಪ್ರಶಸ್ತಿ ಸ್ವೀಕರಿಸುತ್ತಿರು­ವುದು ಸಂತಸ ತಂದಿದೆ ಎಂದರು.

ನಮ್ಮ ಪರಂಪರೆ ಬಹಳ ದೊಡ್ಡದು, ಬೇರೆಯವರ ಸಂಸ್ಕೃತಿಯಲ್ಲಿ ಇಲ್ಲದ ಮೌಲ್ಯಗಳು ಇಲ್ಲಿವೆ. ಕೆಲವು ಕೆಟ್ಟವೂ ಇವೆ. ಜಾತಿ ಪದ್ಧತಿಯನ್ನು ಹಂತ, ಹಂತವಾಗಿ ತೆಗೆದು ಹಾಕಬೇಕು. ಆ ಕೆಲಸವನ್ನು ಮಾಡುವ ನಿಟ್ಟಿನಲ್ಲಿ ಸ್ವಾಮೀಜಿ ಮುಂದಾಗಿದ್ದರು ಎಂದು ಹೇಳಿದರು.

ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಶ್ರೀಮಠವು ಜನಸಾಮಾನ್ಯರ ಮಠವಾಗಿದೆ. ಜನಪದ ಪರಂಪರೆ ಉಳಿಸಿ, ಬೆಳೆಸುವ ಕೆಲಸ ಆಗಬೇಕು ಎಂದರು.

ಜನಪದ ಕಲೆ ಹಾಗೂ ಜಾನಪದ ಸಾಹಿತ್ಯವಿಲ್ಲದೇ ಸುಂದರ, ಸುವ್ಯವಸ್ಥಿತವಾದ ಸಮಾಜ ನಿರ್ಮಾಣ ಮಾಡಿಕೊಳ್ಳಲು ಅಸಾಧ್ಯ. ನಾಡಿನ ಸಂಸ್ಕ್ರತಿಯ ಮೂಲ ಬೇರುಗಳು ಜನಪದ ಸಾಹಿತ್ಯ. ಯಾವ ಆಧುನಿಕ ಸಾಹಿತ್ಯವೂ ಮನುಷ್ಯನ ಭಾವನೆಗಳನ್ನು ಜನಪದ ಸಾಹಿತ್ಯದಷ್ಟು ಅರ್ಥವತ್ತಾಗಿ ತುಂಬಿ­ಕೊಡಲು ಸಾಧ್ಯವಾಗಿಲ್ಲ ಎಂದು ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ಜಾನಪದ ವಿದ್ವಾಂಸ ದಿ.ಎಚ್‌.ಎಲ್‌.. ನಾಗೇಗೌಡರ ಹೆಸರಿನಲ್ಲಿ ಡಿ.ಬಿ. ಭೀಮಯ್ಯ, ಗಂಗಹುಚ್ಚಮ್ಮ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಚಿವ ಎಸ್‌. .ಆರ್‌. ಪಾಟೀಲ, ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌, ಶಾಸಕರಾದ ಎನ್‌.ಚಲುವರಾಯಸ್ವಾಮಿ, ವೆಂಕಟರಮಣಪ್ಪ, ವಿಧಾನಪರಿಷತ್‌್ ಸದಸ್ಯರಾದ ಬಿ.ರಾಮಕೃಷ್ಣ, ಮರಿತಿಬ್ಬೇಗೌಡ ಮುಂತಾದವರು ಇದ್ದರು.

ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮಾನಂನಾಥ ಸ್ವಾಮೀಜಿ ಸ್ವಾಗತಿಸಿದರು. ಶಿವಕುಮಾರನಾಥ ಸ್ವಾಮೀಜಿ ವಂದಿಸಿದರು. ಮಠದ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT