ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುಟುಕು ಗುಟುಕು

Last Updated 2 ಜುಲೈ 2012, 19:30 IST
ಅಕ್ಷರ ಗಾತ್ರ

200ಮೀ. ಓಟದಲ್ಲೂ ಬೋಲ್ಟ್‌ಗೆ ಆಘಾತ
ಕಿಂಗ್ಸ್‌ಟನ್ (ಐಎಎನ್‌ಎಸ್):
100 ಮೀ. ಓಟದಲ್ಲಿ ಯೊಹಾನ್ ಬ್ಲೇಕ್ ಎದುರು ಆಘಾತ ಅನುಭವಿಸಿದ್ದ ಉಸೇನ್ ಬೋಲ್ಟ್ ಇಲ್ಲಿ ನಡೆಯುತ್ತಿರುವ ಜಮೈಕಾ ಒಲಿಂಪಿಕ್ಸ್ ಟ್ರಯಲ್ಸ್‌ನ 200 ಮೀ.ನ್ಲ್ಲಲೂ ಹಿನ್ನಡೆ ಕಂಡಿದ್ದಾರೆ.
ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆದ ಈ ಓಟದ ಫೈನಲ್‌ನಲ್ಲಿ ಒಲಿಂಪಿಕ್ಸ್ ಪದಕ ವಿಜೇತ ಬೋಲ್ಟ್ ಅವರನ್ನು ಹಿಂದಿಕ್ಕಿದ ಬ್ಲೇಕ್ 19.80 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿದರು. ಬೋಲ್ಟ್ 19.83 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಎರಡನೇ ಸ್ಥಾನ ಪಡೆದರು.

ಕ್ರಿಕೆಟ್: ಮಿಂಚಿದ ಬೋಪಾರ; ಇಂಗ್ಲೆಂಡ್‌ಗೆ ಜಯ
ಲಂಡನ್ (ಪಿಟಿಐ):
ರವಿ ಬೋಪಾರ (85 ಎಸೆತಗಳಲ್ಲಿ 82) ಅವರ ಮಿಂಚಿನ ಆಟದ ನೆರವಿನಿಂದ ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯ ಎರಡನೇ ಪಂದ್ಯದಲ್ಲಿ 6 ವಿಕೆಟ್‌ಗಳ ಜಯ ಸಾಧಿಸಿದೆ. ಇದರೊಂದಿಗೆ ಇಂಗ್ಲೆಂಡ್ ಈ ಸರಣಿಯಲ್ಲಿ 2-0 ಮುನ್ನಡೆ ಪಡೆದಿದೆ.

ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯಾ: 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 251 (ಶೇನ್ ವಾಟ್ಸನ್ 66, ಬ್ರೆಟ್ ಲೀ ಔಟಾಗದೆ 20; ಟಿಮ್ ಬ್ರೆಸ್ನಾನ್ 50ಕ್ಕೆ2); ಇಂಗ್ಲೆಂಡ್: 45.4 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 252 (ಅಲಸ್ಟರ್ ಕುಕ್ 18, ಇಯಾನ್ ಬೆಲ್ 75, ರವಿ ಬೋಪಾರ 82, ಎಯೋನ್ ಮಾರ್ಗನ್ ಅಜೇಯ 43; ಕ್ಲಿಂಟ್ ಮೆಕ್‌ಕೇ 42ಕ್ಕೆ1): ಫಲಿತಾಂಶ: ಇಂಗ್ಲೆಂಡ್‌ಗೆ 6 ವಿಕೆಟ್ ಜಯ ಹಾಗೂ 5 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ. ಪಂದ್ಯ ಶ್ರೇಷ್ಠ: ರವಿ ಬೋಪಾರ.

ಸುನಿಲ್ ಪ್ರಭಾವಿ ಬೌಲಿಂಗ್; ಸರಣಿ ಗೆದ್ದ ವಿಂಡೀಸ್
ಫ್ಲಾರಿಡಾ (ಎಪಿ):
ವೆಸ್ಟ್‌ಇಂಡೀಸ್ ತಂಡದವರು ಇಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಟ್ವೆಂಟಿ-20 ಕ್ರಿಕೆಟ್ ಸರಣಿಯ ಎರಡನೇ ಪಂದ್ಯದಲ್ಲಿ 61 ರನ್‌ಗಳ ಗೆಲುವು ಸಾಧಿಸಿದ್ದಾರೆ. ಇದರೊಂದಿಗೆ ಸರಣಿಯನ್ನು ಕೆರಿಬಿಯನ್ ಬಳಗ 2-1ರಲ್ಲಿ ಜಯಿಸಿತು.


ಸಂಕ್ಷಿಪ್ತ ಸ್ಕೋರ್:
ವೆಸ್ಟ್‌ಇಂಡೀಸ್: 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 177 (ಕ್ರಿಸ್ ಗೇಲ್ 53, ಜಾನ್ಸನ್ ಚಾರ್ಲ್ಸ್ 36, ಡ್ವೇನ್ ಬ್ರಾವೊ ಔಟಾಗದೆ 35; ನೇಥನ್ ಮೆಕ್ಲಮ್ 19ಕ್ಕೆ2); ನ್ಯೂಜಿಲೆಂಡ್: 18.4 ಓವರ್‌ಗಳಲ್ಲಿ 116 (ಮಾರ್ಟಿನ್ ಗುಪ್ಟಿಲ್ 18, ಡೇನಿಯಲ್ ಫ್ಲಿನ್ 22, ಟಾಮ್ ಲಾಥಮ್ 19, ಡಗ್ ಬ್ರೇಸ್‌ವೆಲ್ 20; ಸುನಿಲ್ ನಾರಾಯಣ 12ಕ್ಕೆ4, ಡ್ವೇನ್ ಬ್ರಾವೊ 23ಕ್ಕೆ2, ಮಾರ್ಲೊನ್ ಸ್ಯಾಮೂಯೆಲ್ಸ್ 25ಕ್ಕೆ2):  ಫಲಿತಾಂಶ: ವಿಂಡೀಸ್‌ಗೆ 61 ರನ್ ಹಾಗೂ 2-0ರಲ್ಲಿ ಸರಣಿ ಜಯ. ಪಂದ್ಯ ಶ್ರೇಷ್ಠ: ಸುನಿಲ್ ನಾರಾಯಣ, ಸರಣಿ ಶ್ರೇಷ್ಠ: ಕ್ರಿಸ್ ಗೇಲ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT