ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುಟುಕು - ಗುಟುಕು

Last Updated 30 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬಿಸಿವೈಎ `ಬಿ~, ನವೀನ್ ಕ್ಲಬ್‌ಗೆ ಜಯ
ಬೆಂಗಳೂರು: ಮನೋಜ್ ಪೋಲೆ ತಂದಿತ್ತ ಏಕೈಕ ಗೋಲಿನ ನೆರವಿನಿಂದ ಬಿಸಿವೈಎ `ಬಿ~ ತಂಡದವರು ಇಲ್ಲಿ ಆರಂಭವಾದ ಬಿಇಎಲ್ ಕಾಲೊನಿ ಯೂತ್ ಸಂಸ್ಥೆ ಆಶ್ರಯದ ಆರ್.ಎಂ. ರಾಜಣ್ಣ ಸ್ಮಾರಕ 16ನೇ ರಾಜ್ಯಮಟ್ಟದ ಹಾಕಿ ಟೂರ್ನಿಯ ಪಂದ್ಯದಲ್ಲಿ ಜಯ ಸಾಧಿಸಿದರು.

ಬಿಇಎಲ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಬಿಸಿವೈಎ `ಬಿ~ ತಂಡ 1-0 ರಲ್ಲಿ ಈಸ್ಟ್ ಇಂಡಿಯಾ ಕ್ಲಬ್ ವಿರುದ್ಧ ಗೆಲುವು ಪಡೆಯಿತು. ಮತ್ತೊಂದು ಪಂದ್ಯದಲ್ಲಿ ನವೀನ್ ಹಾಕಿ ಕ್ಲಬ್ 6-0 ಗೋಲುಗಳಿಂದ ಕೆಜಿಎಫ್‌ನ ಐಡಿಯಲ್ ಸ್ಪೋರ್ಟ್ಸ್ ಕ್ಲಬ್ ತಂಡವನ್ನು ಮಣಿಸಿತು.


ಕ್ರಿಕೆಟ್: ತುಮಕೂರು ಚಾಂಪಿಯನ್
ಚಿಕ್ಕಮಗಳೂರು: ತುಮಕೂರು ಜಿಲ್ಲಾ ಪತ್ರಕರ್ತರ ತಂಡ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ನಡೆದ ಪತ್ರಕರ್ತರ ರಾಜ್ಯ ಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ.

ನಗರದ ನೇತಾಜಿ ಸುಭಾಷಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ತುಮಕೂರು ತಂಡ 18 ರನ್‌ಗಳಿಂದ ಮಂಡ್ಯವನ್ನು ಮಣಿಸಿ, 25 ಸಾವಿರ ರೂಪಾಯಿ ನಗದು ಬಹುಮಾನ ಜೇಬಿಗಿಳಿಸಿಕೊಂಡಿತು.

ಸೆಮಿಫೈನಲ್‌ಗೆ ಡ್ಯಾನ್ಸರ್ ಇಲೆವನ್
ಹುಬ್ಬಳ್ಳಿ:
ನಟ ಸುದೀಪ್ ನೇತೃತ್ವದ ಡ್ಯಾನ್ಸರ್ಸ್‌ ಇಲೆವನ್ ತಂಡ ಭಾನುವಾರ ಇಲ್ಲಿಯ ನೆಹರೂ ಕ್ರೀಡಾಂಗಣದಲ್ಲಿ ರಾಜ್ಯ ಚಲನಚಿತ್ರ ನಿರ್ದೇಶಕರ ಸಂಘ ಆರಂಭಿಸಿದ `ಡಾ. ರಾಜ್ ಕಪ್~ ಸಿನಿಮಾ ತಾರೆಯರ ಕ್ರಿಕೆಟ್ ಟೂರ್ನಿಯಲ್ಲಿ ಏಳು ವಿಕೆಟ್ ಅಂತರದಿಂದ ಎಡಿಟಿಂಗ್ ಬುಲ್ಸ್ ತಂಡವನ್ನು ಪರಾಭವಗೊಳಿಸುವ ಮೂಲಕ ಸೆಮಿಫೈನಲ್ ಪ್ರವೇಶಿಸಿತು.

ಇನ್ನೊಂದು ಪಂದ್ಯದಲ್ಲಿ ಮೀಡಿಯಾ ಮಾಸ್ಟರ್ಸ್‌ ತಂಡವನ್ನು ಪರಾಭವಗೊಳಿಸಿದ ಲೆನ್ಸ್ ಕಿಂಗ್ಸ್ ತಂಡ ಸಹ ಸೆಮಿಫೈನಲ್‌ಗೆ ಮುನ್ನಡೆಯಿತು.

ಸಂಕ್ಷಿಪ್ತ ಸ್ಕೋರ್: ಎಡಿಟಿಂಗ್ ಬುಲ್ಸ್: 15 ಓವರ್‌ಗಳಲ್ಲಿ 123 (ರಾಜೀವ್ 25, ಅರುಣ್ ರೆಡ್ಡಿ 25, ಬಾಬುರೆಡ್ಡಿ 13, ಸಂತೋಷ್ 11, ಭಾಸ್ಕರ್ 35ಕ್ಕೆ2, ಮಯೂರ್ ಚಂದ್ರ 10ಕ್ಕೆ2) ಡ್ಯಾನ್ಸರ್ಸ್‌ ಇಲೆವನ್: 14.3 ಓವರ್‌ಗಳಲ್ಲಿ 124 (ಪ್ರದೀಪ್ 31, ಸೌರವ್ 28, ಭಾಸ್ಕರ್ 20, ಧ್ರುವ 16, ಸುದೀಪ್ 13)

ಲೆನ್ಸ್ ಕಿಂಗ್ಸ್: 15 ಓವರ್‌ಗಳಲ್ಲಿ 9 ವಿಕೆಟ್‌ಗೆ 132 (ಸುಧೀರ್ 37, ಚೇತನ್ 25, ಲೋಕೇಶ್ 23, ವಿನಯ್ 23ಕ್ಕೆ2,  ಮನು ಅಯ್ಯಪ್ಪ 20ಕ್ಕೆ2) ಮೀಡಿಯಾ ಮಾಸ್ಟರ್ಸ್‌: 15 ಓವರ್‌ಗಳಲ್ಲಿ ಐದು ವಿಕೆಟ್‌ಗೆ 118 (ವಿನಯ್ 41, ಕಾರ್ತಿಕ್ 25, ಗಂಗಾಧರ 16, ಸುಧೀರ್ 7ಕ್ಕೆ2).

ಬಿಲಿಯರ್ಡ್ಸ್: ಪಂಕಜ್ ಪರಾಭವ
ಲೀಡ್ಸ್(ಇಂಗ್ಲೆಂಡ್):
ಪಂಕಜ್ ಅಡ್ವಾಣಿ ವಿಶ್ವ ವೃತ್ತಿಪರ ಬಿಲಿಯರ್ಡ್ಸ್ ಚಾಂಪಿಯನ್‌ಶಿಪ್‌ನ ಸೆಮಿಫೈನಲ್‌ನಲ್ಲಿ ಸೋಲು ಅನುಭವಿಸಿದರು. ಭಾನುವಾರ ಇಲ್ಲಿ ನಡೆದ ನಾಲ್ಕರಘಟ್ಟದ ಪಂದ್ಯದಲ್ಲಿ ಇಂಗ್ಲೆಂಡ್‌ನ ಮೈಕ್ ರಸೆಲ್ 1250-1012 ರಲ್ಲಿ ಭಾರತದ ಆಟಗಾರನ ವಿರುದ್ಧ ಜಯ ಸಾಧಿಸಿ ಫೈನಲ್ ಪ್ರವೇಶಿಸಿದರು.

ಚೆಸ್: ಅಲೆಕ್ಸ್‌ಗೆ ಆಘಾತ
ಮೈಸೂರು:
ಒಡಿಶಾದ ಹತ್ತು ವರ್ಷದ ಹುಡುಗ ರಾಕೇಶಕುಮಾರ್ ಜೆನಾ ಭಾನುವಾರ ಅಖಿಲ ಭಾರತ ಫಿಡೆ ರೇಟಿಂಗ್ ಚೆಸ್ (2200ರೇಟಿಂಗ್‌ನೊಳಗಿನವರು) ಟೂರ್ನಿಯ ಮೂರನೇ ಸುತ್ತಿನಲ್ಲಿ ಅಗ್ರಶ್ರೇಯಾಂಕದ ಆಟಗಾರ ಕೇರಳದ ಅಲೆಕ್ಸ್ ಕೆ ಥಾಮಸ್ ಅವರನ್ನು ಸೋಲಿಸಿ ಅಚ್ಚರಿ ಮೂಡಿಸಿದರು.

ಮೈಸೂರು ಜಿಲ್ಲಾ ಚೆಸ್ ಸಂಸ್ಥೆಯ ಆಶ್ರಯದಲ್ಲಿ ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೂರನೇ ಸುತ್ತಿನಲ್ಲಿ ರಾಕೇಶಕುಮಾರ್ ಜೆನಾ (ರೇಟಿಂಗ್: 1840) ಅವರು ಅಲೆಕ್ಸ್ ಥಾಮಸ್ (ರೇಟಿಂಗ್ 2180) ಅವರನ್ನು ಸೋಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT