ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುಟುಕು ಗುಟುಕು

Last Updated 12 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಅನ್ನಾ ಚಕ್ವೆತಾಜ್‌ ನಿವೃತ್ತಿ
ಮಾಸ್ಕೊ (ಎಎಫ್‌ಪಿ): ರ
ಷ್ಯಾದ ಟೆನಿಸ್‌ ಆಟಗಾರ್ತಿ ಅನ್ನಾ ಚಕ್ವೆತಾಜ್‌ ಗುರುವಾರ ನಿವೃತ್ತಿ ನಿರ್ಧಾರ ಪ್ರಕಟಿಸಿದರು. 26ರ ಹರೆಯದ ಅನ್ನಾ ಕಳೆದ ಕೆಲ ಸಮಯಗಳಿಂದ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮತ್ತೆ ಕಣಕ್ಕಿಳಿಯಲು ಅಸಾಧ್ಯ ಎಂಬ ಕಾರಣ ಅವರು ಈ ನಿರ್ಧಾರ ಕೈಗೊಂಡಿದ್ದಾರೆ.
‘ನನಗೆ ಮತ್ತೆ ವೃತ್ತಿಪರ ಟೆನಿಸ್‌ನಲ್ಲಿ ಆಡಲು ಸಾಧ್ಯವಿಲ್ಲ. ಆದ್ದರಿಂದ ನನ್ನ ಟೆನಿಸ್‌ ಜೀವನ ಕೊನೆಗೊಂಡಿರುವುದಾಗಿ ಪ್ರಕಟಿಸುತ್ತೇನೆ’ ಎಂದು ಅವರು ಹೇಳಿದ್ದಾರೆ.

‘ಬೆನ್ನು ನೋವಿನ ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದೇನೆ. ಆದ್ದರಿಂದ ಟೆನಿಸ್‌ನಿಂದ ದೂರ ಸರಿಯಲು ನಿರ್ಧರಿಸಿದ್ದೇನೆ. ಹೊಸ ಜೀವನ ಆರಂಭಿಸುವುದು ನನ್ನ ಉದ್ದೇಶ’ ಎಂದಿದ್ದಾರೆ. ಅನ್ನಾ 2007 ರಲ್ಲಿ ವಿಶ್ವ ರ್‍್ಯಾಂಕ್‌ನಲ್ಲಿ ಆರನೇ ಸ್ಥಾನಕ್ಕೇರಿದ್ದರು. 10 ವರ್ಷಗಳ ವೃತ್ತಿ ಜೀವನದಲ್ಲಿ ಅವರು ಎಂಟು ಡಬ್ಲ್ಯುಟಿಎ ಸಿಂಗಲ್ಸ್‌ ಪ್ರಶಸ್ತಿಗಳನ್ನು ಜಯಿಸಿದ್ದಾರೆ. ಫೆಡ್‌ ಕಪ್‌ ಟೆನಿಸ್‌ ಟೂರ್ನಿಯಲ್ಲಿ ಚಾಂಪಿಯನ್‌ ಆದ ರಷ್ಯಾ ತಂಡದಲ್ಲಿ ಎರಡು ಸಲ ಸ್ಥಾನ ಪಡೆದಿದ್ದರು. 2007ರ ಅಮೆರಿಕ ಓಪನ್‌ ಗ್ರ್ಯಾಂಡ್‌ ಸ್ಲಾಮ್‌ ಟೂರ್ನಿಯಲ್ಲಿ ಅವರು ಸೆಮಿಫೈನಲ್‌ ಪ್ರವೇಶಿಸಿದ್ದರು.

ಕಶ್ಯಪ್‌ಗೆ 13ನೇ ಸ್ಥಾನ
ನವದೆಹಲಿ (ಐಎಎನ್‌ಎಸ್‌): ಭಾರತದ ಭರವಸೆಯ ಆಟಗಾರ ಪರುಪಳ್ಳಿ ಕಶ್ಯಪ್‌ ವಿಶ್ವ ಬ್ಯಾಡ್ಮಿಂಡನ್‌ ಫೆಡರೇಷನ್‌ ಪ್ರಕಟಿಸಿರುವ ರಾ್ಯಾಂಕಿಂಗ್‌ ಪಟ್ಟಿಯ ಸಿಂಗಲ್ಸ್‌ನಲ್ಲಿ 13ನೇ ಸ್ಥಾನ ಪಡೆದಿದ್ದಾರೆ. ಮೊದಲ 25 ಸ್ಥಾನಗಳಲ್ಲಿ ಭಾರತದ ಮೂವರು ಆಟಗಾರರು ಕಾಣಿಸಿಕೊಂಡಿದ್ದಾರೆ.

ಪುರುಷರ ವಿಭಾಗದ ಸಿಂಗಲ್ಸ್‌ನಲ್ಲಿ ಅಜಯ್‌ ಜಯರಾಮ್‌ 20ನೇ ಸ್ಥಾನ ಮತ್ತು ಆರ್‌ಎಂವಿ ಗುರುಸಾಯಿದತ್‌ 23ನೇ ಸ್ಥಾನ ಹೊಂದಿದ್ದಾರೆ. ಮಹಿಳಾ ವಿಭಾಗದ ಸಿಂಗಲ್ಸ್‌ನಲ್ಲಿ ಸೈನಾ ನೆಹ್ವಾಲ್‌ (4) ಮತ್ತು ಪಿ.ವಿ. ಸಿಂಧು (10) ಹಿಂದಿನ ಸ್ಥಾನ ಉಳಿಸಿಕೊಂಡಿದ್ದಾರೆ.

ಮುಂಬೈ ಇಂಡಿಯನ್ಸ್ ಇಂದಿನಿಂದ ಅಭ್ಯಾಸ
ಅಹಮದಾಬಾದ್‌ (ಐಎಎನ್‌ಎಸ್‌)
: ಐಪಿಎಲ್‌ ಆರನೇ ಆವೃತ್ತಿಯ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ತಂಡ ಚಾಂಪಿಯನ್ಸ್‌ ಲೀಗ್‌ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಗೆ ಸಜ್ಜಾಗಲು ಶುಕ್ರವಾರ ಅಭ್ಯಾಸ ಆರಂಭಿಸಲಿದೆ.

ಸರ್ದಾರ್‌ ಪಟೇಲ್‌ ಕ್ರೀಡಾಂಗಣದಲ್ಲಿ ಇಂಡಿಯನ್ಸ್ ತಂಡದ ಅಭ್ಯಾಸ ಮತ್ತು ತರಬೇತಿ ಶಿಬಿರ ಶುರುವಾಗಲಿದೆ. ‘ಐಪಿಎಲ್‌ ಆರನೇ ಆವೃತ್ತಿಯಲ್ಲಿ ನಮ್ಮ ತಂಡ ಅಮೋಘ ಪ್ರದರ್ಶನ ತೋರಿದೆ. ಚಾಂಪಿಯನ್ಸ್‌ ಲೀಗ್‌ನಲ್ಲಿ ಅದೇ ರೀತಿ ಪ್ರದರ್ಶನ ಮುಂದುವರಿಸುವ ವಿಶ್ವಾಸವಿದೆ’ ಎಂದು ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಹಾಗೂ ಇಂಡಿಯನ್ಸ್ ತಂಡದ ಸಲಹೆಗಾರ ಅನಿಲ್‌ ಕುಂಬ್ಳೆ ಹೇಳಿದ್ದಾರೆ.

‘ಎ’ ಗುಂಪಿನಲ್ಲಿ ಸ್ಥಾನ ಪಡೆದಿರುವ ಇಂಡಿಯನ್ಸ್‌ ತಂಡ ತನ್ನ ಮೊದಲ ಪಂದ್ಯದಲ್ಲಿ ಸೆಪ್ಟೆಂಬರ್‌ 21ರಂದು ಜೈಪುರದಲ್ಲಿ ರಾಜಸ್ತಾನ ರಾಯಲ್ಸ್‌ ಎದುರು ಆಡಲಿದೆ. ಇಂಡಿಯನ್ಸ್ ತಂಡದ ಕೋಚ್‌ ಜಾನ್‌ ರೈಟ್‌, ರಾಬಿನ್‌ ಸಿಂಗ್‌, ಜಾಂಟಿ ರೋಡ್ಸ್‌, ನಿತಿನ್‌ ಪಟೇಲ್‌ ಮತ್ತು ಪಾಲ್‌ ಕ್ಯಾಂಪನ್‌ ತಂಡವನ್ನು ಸೇರಿಕೊಂಡಿದ್ದಾರೆ.

ಇಂಡಿಯನ್ಸ್‌ ತಂಡ ಇಂತಿದೆ: ರೋಹಿತ್‌ ಶರ್ಮ (ನಾಯಕ), ಸಚಿನ್‌ ತೆಂಡೂಲ್ಕರ್‌, ದಿನೇಶ್‌ ಕಾರ್ತಿಕ್‌, ಹರಭಜನ್‌ ಸಿಂಗ್‌, ಪ್ರಗ್ಯಾನ್‌ ಓಜಾ, ಅಂಬಟಿ ರಾಯುಡು, ಆದಿತ್ಯ ತಾರೆ, ರಿಷಿ ಧವನ್‌, ಅಬು ನೇಚಿಮ್‌, ಅಕ್ಷರ್‌ ಪಟೇಲ್‌, ಕೀರನ್‌ ಪೊಲಾರ್ಡ್‌, ಡ್ವೇನ್‌ ಸ್ಮಿತ್‌, ನಥಾನ್‌ ನೈಲ್‌, ಮಿಷೆಲ್‌ ಜಾನ್ಸನ್‌ ಮತ್ತು ಗ್ಲೇನ್‌ ಮ್ಯಾಕ್ಸ್‌ವೆಲ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT