ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುಟುಕು ಗುಟುಕು ಕ್ರೀಡಾ ಸುದ್ದಿಗಳು

Last Updated 2 ಜನವರಿ 2014, 19:30 IST
ಅಕ್ಷರ ಗಾತ್ರ

ಇನ್ನೂ ಚೇತರಿಸಿಕೊಳ್ಳದ ಶುಮಾಕರ್
ಗ್ರೆನೋಬಲ್‌, ಫ್ರಾನ್ಸ್ (ಎಎಫ್‌ಪಿ):
ಸ್ಕೀಯಿಂಗ್ ವೇಳೆ ನಿಯಂತ್ರಣ ತಪ್ಪಿ ಬಿದ್ದು ಇಲ್ಲಿನ ಸಿಎಚ್‌ಯು ಆಸ್ಪತ್ರೆ ಸೇರಿರುವ  ಮಾಜಿ ಫಾರ್ಮುಲಾ ಒನ್‌ ರೇಸ್ ಚಾಲಕ ಜರ್ಮನಿಯ ಮೈಕಲ್ ಶುಮಾಕರ್ ಆರೋಗ್ಯದಲ್ಲಿ ಯಾವುದೇ ಬದಲಾವಣೆಗಳು ಕಂಡು ಬಂದಿಲ್ಲ.

ಕಳೆದ ನಾಲ್ಕು ದಿನಗಳಿಂದಲೂ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿಯೇ ಇದ್ದು, ಮೆದುಳಿಗೆ ಗಂಭೀರ ಗಾಯಗೊಂಡು ಸಾವು–ಬದುಕಿನ ನಡುವೆ ಹೋರಾಡುತ್ತಿರುವ ಅವರನ್ನು ಬದುಕುಳಿಸುವ ಪ್ರಯತ್ನವನ್ನು ವೈದ್ಯರು ಮುಂದುವರೆಸಿದ್ದಾರೆ.

‘ಅವರಿಗೆ ನಿರಂತರವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಮುಂದೇನಾಗಲಿದೆ ಎಂಬುದನ್ನು ಈಗಲೇ ನಿರ್ಧರಿಸುವುದು ಅಸಾಧ್ಯ.ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲೂ ಆಗುವುದಿಲ್ಲ. ಎಂದು ಆಸ್ಪತ್ರೆಯ ತೀವ್ರ ನಿಗಾ ಘಟಕದ ಮುಖ್ಯಸ್ಥ ಜೀನ್‌ ಫ್ರಾನ್ಸೋಯಿಸ್ ಪೇನ್ ತಿಳಿಸಿದ್ದಾರೆ.

ಟೆನಿಸ್‌: ಸೆಮಿಫೈನಲ್‌ಗೆ ಶರ್ಪೋವಾ
ಬ್ರಿಸ್ಬೇನ್‌ (ರಾಯಿಟರ್ಸ್‌):
ಎದುರಾದ ಅಲ್ಪ ಪ್ರತಿರೋಧವನ್ನು ಸಮರ್ಥವಾಗಿ ಮೆಟ್ಟಿನಿಂತ ಮರಿಯಾ ಶರ್ಪೋವಾ ಇಲ್ಲಿ ನಡೆಯುತ್ತಿರುವ ಬ್ರಿಸ್ಬೇನ್‌ ಅಂತರರಾಷ್ಟ್ರೀಯ ಟೆನಿಸ್‌ ಟೂರ್ನಿಯ ಸಿಂಗಲ್ಸ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದರು.

ಗುರುವಾರ ನಡೆದ ಕ್ವಾರ್ಟರ್‌ ಫೈನಲ್‌ ಸೆಣಸಾಟದಲ್ಲಿ ಶರ್ಪೋವಾ 4–6, 6–3, 6–2ರಲ್ಲಿ ಕಾಯಿ ಕನೆಪಿ ಎದುರು ಗೆಲುವು ಸಾಧಿಸಿದರು. ನಾಲ್ಕರ ಘಟ್ಟದ ಹೋರಾಟದಲ್ಲಿ ಶರ್ಪೋವಾ ವಿಶ್ವ ರ್‍್ಯಾಂಕ್‌ನಲ್ಲಿ ಅಗ್ರಸ್ಥಾನ ಹೊಂದಿರುವ ಸೆರೆನಾ ವಿಲಿ ಯಮ್ಸ್‌ ಎದುರು ಪೈಪೋಟಿ ನಡೆಸಲಿದ್ದಾರೆ. ಇನ್ನೊಂದು ಎಂಟರ ಘಟ್ಟದ ಪಂದ್ಯದಲ್ಲಿ ಸೆರೆನಾ 6–3, 6–3ರಲ್ಲಿ ಸ್ಲೋವಾಕಿಯಾದ ಡೊಮಿನಿಕಾ ಕಿಡೊಕೊವಾ ಅವರನ್ನು ಮಣಿಸಿದರು. ಈ ಹೋರಾಟ 61 ನಿಮಿಷ ನಡೆಯಿತು.

2012ರಲ್ಲಿ ಕನೆಪಿ ಇಲ್ಲಿ ಚಾಂಪಿಯನ್‌ ಆಗಿದ್ದರು. ರಷ್ಯಾದ ಆಟಗಾರ್ತಿಯ ಎದುರು ಎಂಟರ ಘಟ್ಟದ ಮೊದಲ ಸೆಟ್‌ನಲ್ಲಿ ಉತ್ತಮ ಹೋರಾಟ ತೋರಿದ ರಾ ದರೂ, ನಂತರದ ಸೆಟ್‌ಗಳಲ್ಲಿ ಸುಲಭವಾಗಿ ಶರಣಾದರು.

ಭಾರತದಲ್ಲಿ ಜೂನಿಯರ್‌ ವಿಂಬಲ್ಡನ್
ನವದೆಹಲಿ (ಪಿಟಿಐ):
ಜೂನಿಯರ್ ವಿಂಬಲ್ಡನ್ ಟೆನಿಸ್‌ ಟೂರ್ನಿಯನ್ನು ಈ ಬಾರಿ ಬ್ರಿಟನ್‌ನಿಂದ ಹೊರಗೆ ನಡೆಸಲು ನಿರ್ಧರಿಸಿದ್ದು, ಇದೇ ಮೊದಲ ಬಾರಿಗೆ ಭಾರತ ಈ ಪ್ರತಿಷ್ಠಿತ ಟೂರ್ನಿಯ ಆತಿಥ್ಯ ವಹಿಸಲಿದೆ.

ಈ ಹಿನ್ನೆಲೆಯಲ್ಲಿ ಮಾಜಿ ಅಗ್ರರ್‍್ಯಾಂಕ್‌ ಆಟಗಾರ ಬ್ರಿಟನ್‌ನ ಟಿಮ್‌ ಹೆನ್‌ಮಾನ್ ಜನವರಿ ಅಂತ್ಯದಲ್ಲಿ ದೆಹಲಿ ಹಾಗೂ ಮುಂಬೈಗೆ ಭೇಟಿ ನೀಡಿ ‘ದಿ ರೋಡ್‌ ಟು ವಿಂಬಲ್ಡನ್’ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಆಗಸ್ಟ್‌ನಲ್ಲಿ ನಡೆಯಲಿರುವ ಟೂರ್ನಿಗೆ ಸ್ಥಳೀಯ ಮಕ್ಕಳನ್ನು ಸೆಳೆಯುವ ಉದ್ದೇಶದಿಂದ ಹಲವು ಕೋಚಿಂಗ್‌ ಕ್ಲಿನಿಕ್‌ಗಳನ್ನು ನಡೆಸಲಿದ್ದಾರೆ. ಈ ಕ್ಲಿನಿಕ್‌ಗಳು ದೆಹಲಿ ಮತ್ತು ಮುಂಬೈನಲ್ಲಿ ನಡೆಯಲಿರುವ 14 ವರ್ಷದೊಳಗಿನವರ ಸಿಂಗಲ್ಸ್‌ ಟೂರ್ನಿಯ ಭಾಗವಾಗಿರುತ್ತವೆ.

ಈ ಎರಡು ಟೂರ್ನಿಗಳಲ್ಲಿ ಆಯ್ಕೆಯಾದ ಅಗ್ರ 16 ಬಾಲಕ ಮತ್ತು ಬಾಲಕಿಯರನ್ನು ಏಪ್ರಿಲ್‌ನಲ್ಲಿ ದೆಹಲಿ ಯಲ್ಲಿ ನಡೆಯುವ ವಿಂಬಲ್ಡನ್‌ ಸಂಸ್ಥೆಯ ಜೂನಿಯರ್‌ ಮಾಸ್ಟರ್‌ ಟೂರ್ನಿಗೆ ಆಹ್ವಾನಿಸಲಿದ್ದು, ಇದರಲ್ಲಿ ಆಯ್ಕೆಯಾಗುವ ಇಬ್ಬರು ಬಾಲಕ ಹಾಗೂ ಬಾಲಕಿಯರು ಬ್ರಿಟನ್‌ನಲ್ಲಿ ನಡೆಯುವ ಎಚ್‌ಎಸ್‌ಬಿಸಿ ರಾಷ್ಟ್ರೀಯ ಫೈನಲ್ಸ್‌ನಲ್ಲಿ ಆಡುವ ಅವಕಾಶ ಪಡೆಯಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT