ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುಟುಕು ಚುರುಕು

Last Updated 12 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಅಪಘಾತ ನಡೆದ ಸ್ಥಳದಲ್ಲಿ ಧೂಮಪಾನ ಮಾಡಲು ಯಾರಿಗೂ ಅವಕಾಶ ಮಾಡಬೇಡಿ. ಸ್ಥಳದಲ್ಲಿ ಚೆಲ್ಲಾಡಿರಬಹುದಾದ ಪೆಟ್ರೋಲ್, ಇತರ ತೈಲ ಅಥವಾ ರಾಸಾಯನಿಕಗಳಿಗೆ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆ ಇರುತ್ತದೆ.
                   ***
ದೇಹದ ತೂಕ ಇಳಿಸಲು ವಿರೇಚನಗಳನ್ನು (ಮಲ ವಿಸರ್ಜಿಸುವ ಔಷಧ) ಬಳಸಬೇಡಿ. ಅವು ಚಯಾಪಚಯ ಕಾರ್ಯಕ್ಕೆ ನೆರವಾಗುವುದಿಲ್ಲ. ಬದಲಿಗೆ ದೇಹವು ಪೋಷಕಾಂಶ ಮತ್ತು ಕ್ಯಾಲೊರಿ ಅಂಶ ಹೀರಿಕೊಳ್ಳುವುದಕ್ಕೆ ಅಡ್ಡಿ ಉಂಟು ಮಾಡುತ್ತವೆ.
                   ***
ದೀರ್ಘಾವಧಿ ಉತ್ತಮ ಆರೋಗ್ಯಕ್ಕೆ ಮೀನಿನ ಆಹಾರ ಒಳ್ಳೆಯದು. ನಿಯಮಿತವಾಗಿ ಮೀನು ಸೇವಿಸುವವರಲ್ಲಿ, ಅದನ್ನು ಅಪರೂಪಕ್ಕೆ ತಿನ್ನುವವರಿಗಿಂತ ಹೃದ್ರೋಗ ಸಾಧ್ಯತೆ ಕಡಿವೆು.
          ***
ನಡಿಗೆಗಿಂತ ಉತ್ತಮವಾದ ಆರೋಗ್ಯ ವರ್ಧಕ ಯಾವುದೂ ಇಲ್ಲ. ದಿನಕ್ಕೆ ಕನಿಷ್ಠ ಒಂದು ಮೈಲಿಯಷ್ಟಾದರೂ ನಡೆಯಿರಿ.

                          ***
ಬೆನ್ನುನೋವಿದ್ದಾಗ ಸಂಪೂರ್ಣ ವಿಶ್ರಾಂತಿ ಪಡೆಯುವುದು ಒಳ್ಳೆಯದಲ್ಲ. `ಬೆಡ್ ರೆಸ್ಟ್~ ಬೆನ್ನು ನೋವನ್ನು ಇನ್ನಷ್ಟು ಹೆಚ್ಚಿಸುತ್ತದೆ ಹೊರತು ಅದರ ತ್ವರಿತ ಉಪಶಮನಕ್ಕೆ ನೆರವಾಗುವುದಿಲ್ಲ. ಆದ್ದರಿಂದ ಬೆನ್ನುನೋವಿನ ನಡುವೆಯೂ ದಿನನಿತ್ಯದ ಚಟುವಟಿಕೆಗಳಲ್ಲಿ ಎಷ್ಟು ಸಾಧ್ಯವೋ ಅಷ್ಟು ಭಾಗವಹಿಸಿ. ಇದು ನೋವು ನಿವಾರಣೆಗೆ ಸಹಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT