ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುಟುಕು ಸಾಹಿತ್ಯ ಅರ್ಥಪೂರ್ಣ: ಡುಂಡಿರಾಜ್

Last Updated 24 ಜನವರಿ 2012, 9:30 IST
ಅಕ್ಷರ ಗಾತ್ರ

ಶೃಂಗೇರಿ (ಕೊಪ್ಪ): ಸಾಹಿತ್ಯ ಲೋಕದಲ್ಲಿ ಚುಟುಕು ಸಾಹಿತ್ಯ ಚುಟುಕಾಗಿದ್ದರೂ ಅರ್ಥಪೂರ್ಣ ವಿಷಯವನ್ನು ಹೊಂದಿರುತ್ತದೆ ಎಂದು ಕವಿ ಡುಂಡಿರಾಜ್ ಹೇಳಿದರು.

ಮೆಣಸೆಯಲ್ಲಿ ನಡೆಯುತ್ತಿರುವ ತಾಲ್ಲೂಕು ಐದನೇ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ಚುಟುಕು ಸಾಹಿತ್ಯ ಲೋಕ ಗೋಷ್ಠಿಯಲ್ಲಿ ಚುಟುಕಿನಲ್ಲಿ ಹಾಸ್ಯ ಕುರಿತು ಅವರು ಭಾನುವಾರ ಮಾತನಾಡಿದರು.

ಚುಟುಕುಗಳಲ್ಲಿ ಹಾಸ್ಯ ಹಿಂದಿನಿಂದಲೂ ಇದ್ದು ಅದು ಪರಿಣಾಮಕಾರಿಯೂ ಆಗಿದೆ. ದಿನಪತ್ರಿಕೆ, ವಾರ, ಮಾಸಿಕ ಪತ್ರಿಕೆಗಳಲ್ಲಿ ಚುಟುಕಿಗೆ ಮೊದಲಿಂದಲೂ ಸ್ಥಾನ ಕಲ್ಪಿಸಲಾಗಿದ್ದು ಅದು ತನ್ನದೇ ಆದ ಓದುಗರನ್ನು ಹೊಂದಿದೆ.
 
ಹವ್ಯಾಸಕ್ಕಾಗಿ ರಚಿಸುವ ಚುಟುಕುಗಳು ಓದುಗರನ್ನು ಸಾಹಿತ್ಯದೆಡೆ ಆಕರ್ಷಿಸುತ್ತದೆ, ಸಾಹಿತ್ಯದ ಬೆಳವಣಿಗೆಯಲ್ಲಿ ಚುಟುಕು ಸಾಹಿತ್ಯವೂ ಮುಖ್ಯವಾಗಿದೆ ಎಂದ ಅವರು ಹಾಸ್ಯ ನಿರೂಪಿಸಿರುವ ಚುಟುಕುಗಳನ್ನು ವಾಚಿಸಿದರು. ಜೆಸಿಬಿಎಂ ಕಾಲೇಜಿನ ನಿವೃತ್ತ ಪ್ರಾಚಾರ್ಯ ಟಿ.ಎಸ್.ವೆಂಕಣ್ಣಯ್ಯ ಗೋಷ್ಠಿ ಉದ್ಘಾಟಿಸಿದರು. 
 

 ಕಲಾವಿದ ರಮೇಶ್ ಬೇಗಾರ್ ಚುಟುಕಿನ ನೆಲೆ ಬೆಲೆ ಬಗ್ಗೆ ಉಪನ್ಯಾಸ ನೀಡಿದರು. ಕಸಾಪ ಅಧ್ಯಕ್ಷ ಬಿ.ಬಿ.ಕಾಡಪ್ಪಗೌಡ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ  ಶಾರದಾ ರೋಟರಿ ಸಮುದಾಯದಳದ ಅಧ್ಯಕ್ಷ ಜೆ.ಗಿರಿಧರ್, ಹೊಸ್ಕೆರೆ ವೆಂಕಟೇಶ್, ಗಿರಿಜಾಲಕ್ಷ್ಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT