ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಕಣಕ್ಕೆ ಬೌದ್ಧ ಸನ್ಯಾಸಿಗಳು

Last Updated 6 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಗ್ಯಾಂಗ್ಟಕ್‌ (ಪಿಟಿಐ): ಸಿಕ್ಕಿಂನ ಬೌದ್ಧ ಮಂದಿರಗಳಲ್ಲಿ ಧಾರ್ಮಿಕ ಉಪದೇಶಕ್ಕೆ ತಮ್ಮನ್ನು ಸೀಮಿತಗೊಳಿಸಿದ್ದ ಬೌದ್ಧ ಸನ್ಯಾಸಿಗಳು ಚುನಾವಣೆ ಕಣಕ್ಕೆ ಇಳಿಯುವ ಮೂಲಕ ರಾಜಕಾರಣಕ್ಕೆ ಧುಮುಕಿದ್ದಾರೆ. ಈ ಮೂವರು ಬೇರೆ ಬೇರೆ ರಾಜಕೀಯ ಪಕ್ಷಗಳನ್ನು ಪ್ರತಿನಿಧಿಸುತ್ತಿದ್ದಾರೆ.

ಸಿಕ್ಕಿಂ  ವಿಧಾನಸಭೆಯ ‘ಸಂಘ’ ಕ್ಷೇತ್ರದಿಂದ ಮೂವರು ಲಾಮಾಗಳು ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಇಲ್ಲಿನ 100 ಬೌದ್ಧ ಕೇಂದ್ರಗಳ 2,900ಕ್ಕೂ ಅಧಿಕ ಬಿಕ್ಕುಗಳು ಇವರಲ್ಲಿ ಒಬ್ಬರನ್ನು ಆಯ್ಕೆ ಮಾಡಬೇಕಿದೆ.

ಈ  ಮೂವರು ಅಭ್ಯರ್ಥಿಗಳು ಗುಡ್ಡಗಾಡು ಪ್ರದೇಶದಲ್ಲಿ­ರುವ ಬೌದ್ಧ ಕೇಂದ್ರಗಳಿಗೆ ತೆರಳಿ ಮತಯಾಚಿಸುತ್ತಿದ್ದಾರೆ. ಆದರೆ, ಉಳಿದೆಡೆಗಿಂತ ಇವರ ಪ್ರಚಾರ ವೈಖರಿ ಸಂಪೂರ್ಣ­ವಾಗಿ ಭಿನ್ನವಾಗಿದೆ. ಎಲ್ಲೂ ಯಾವುದೇ ಪಕ್ಷದ ಅಭ್ಯರ್ಥಿ ಪರ ಘೋಷಣೆಗಳು ಕಿವಿಗೆ ಬೀಳುವುದಿಲ್ಲ. ಪಕ್ಷಗಳ ಪೋಸ್ಟರ್‌ ಮತ್ತು ಧ್ವಜಗಳು ಕೂಡ ಇಲ್ಲಿ ಕಣ್ಣಿಗೆ ಬೀಳುವುದಿಲ್ಲ. ಪ್ರಚಾರ ಸಂಪೂರ್ಣ ಶಾಂತವಾಗಿದ್ದು, ಮತದಾರರನ್ನು ಮುಖತಃ ಭೇಟಿಯಾಗಿ ಅವರು ಮತ ಯಾಚಿಸುತ್ತಿದ್ದಾರೆ. 

‘ಸಂಘ’ ಕ್ಷೇತ್ರ ಬೌದ್ಧ ಬಿಕ್ಕುಗಳ ಮೀಸಲು ಕ್ಷೇತ್ರವಾಗಿದ್ದು ಇಲ್ಲಿ ಅವರಿಗೆ ಮಾತ್ರ ಮತ ಹಾಕುವ ಹಕ್ಕು ಇದೆ. ದೇಶದಲ್ಲಿಯೇ ಇಂತಹ ಬೇರೆ ಕ್ಷೇತ್ರ ಇಲ್ಲ.

‘ಚುನಾವಣೆಯಲ್ಲಿ ಜಯ ಗಳಿಸಿದ ಬಳಿಕ ಸಿಕ್ಕಿಮನ್ನು ಅಂತರರಾಷ್ಟ್ರೀಯ ಬೌದ್ಧ ತರಬೇತಿ ಕೇಂದ್ರ ಮಾಡುವುದಕ್ಕೆ ನನ್ನ ಮೊದಲ ಆದ್ಯತೆ’ ಎಂದು ಆಡಳಿತಾರೂಢ ಸಿಕ್ಕಿಂ ಡೆಮೊಕ್ರಟಿಕ್‌ ಫ್ರಂಟ್‌­ನಿಂದ (ಎಸ್‌ಡಿಎಫ್‌) ಸ್ಪರ್ಧಿಸುತ್ತಿ­ರುವ ಪಲ್ಡೆನ್‌ ಲಚುಂಗ್‌ಪಾ ಹೇಳಿದರು. ರಾಜ್ಯದಲ್ಲಿ ಏಪ್ರಿಲ್‌ 12ರಂದು ಚುನಾವಣೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT