ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಪ್ರಚಾರದ ವೇಳೆ ರಾಹುಲ್‌ರತ್ತ ಬೂಟು ಎಸೆತ

Last Updated 23 ಜನವರಿ 2012, 19:30 IST
ಅಕ್ಷರ ಗಾತ್ರ

ಡೆಹ್ರಾಡೂನ್ (ಪಿಟಿಐ): ಚುನಾವಣಾ ಪ್ರಚಾರದ ವೇಳೆ ಮಾತನಾಡುತ್ತಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರತ್ತ ಯುವಕನೊಬ್ಬ ಬೂಟು ಎಸೆದ ಘಟನೆ ಸೋಮವಾರ ವರದಿಯಾಗಿದೆ.

ಕೇವಲ ಎರಡು ದಿನಗಳ ಹಿಂದೆ ಇದೇ ಪ್ರದೇಶದಲ್ಲಿ ಅರವಿಂದ್ ಕೇಜ್ರಿವಾಲ್ ಮತ್ತು ಕಿರಣ್ ಬೇಡಿ ಅವರನ್ನು ಒಳಗೊಂಡ ಅಣ್ಣಾ ತಂಡದ ಮೇಲೆ ಕಿಶನ್‌ಲಾಲ್ ಎಂಬಾತ ಬೂಟು ಎಸೆದು ಅವಮಾನಗೊಳಿಸಿದ ಘಟನೆ ಬೆನ್ನಹಿಂದೆಯೇ ಈ ಅನಿರೀಕ್ಷಿತ ಘಟನೆ ಮರುಕಳಿಸಿದೆ.

`ಯುವಕ ಕುಲ್‌ದೀಪ್ ಎಸೆದ ಬೂಟು ರಾಹುಲ್ ಅವರು ನಿಂತಿದ್ದ ಸ್ಥಳದಿಂದ 10 ಮೀಟರ್ ದೂರದಲ್ಲಿ ಬಿತ್ತು. ಆತನನ್ನು ತಕ್ಷಣವೇ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಭದ್ರತಾ ಸಿಬ್ಬಂದಿ ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದು, ವಿಚಾರಣೆಗೆ ಒಳಪಡಿಸಲಾಗಿದೆ~ ಎಂದು ಡೆಹ್ರಾಡೂನ್ ಪೊಲೀಸ್ ವರಿಷ್ಠಾಧಿಕಾರಿ ಜಿ.ಎನ್.ಗೋಸ್ವಾಮಿ ತಿಳಿಸಿದ್ದಾರೆ.

ಕುಲ್‌ದೀಪ್‌ನನ್ನು ಕಾರ್ಯಕರ್ತರು ಸುತ್ತುವರಿದ ವೇಳೆ `ಆತನನ್ನು ಹೊಡೆಯಬೇಡಿ~ ಎಂದು ರಾಹುಲ್ ಏರುದನಿಯಲ್ಲಿ ಕೂಗಿ ಹೇಳುತ್ತಿದ್ದರು ಎನ್ನಲಾಗಿದೆ. ಇದಕ್ಕೆ ಮುನ್ನ ರಿಶಿಕೇಶದಲ್ಲಿ ಚುನಾವಣಾ ರ‌್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್, ಬಿಜೆಪಿ ವಿರುದ್ಧ ತೀವ್ರ ಕಿಡಿಕಾರಿದರು.

`ಭ್ರಷ್ಟಾಚಾರವನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಬಿಜೆಪಿ ಆರೋಪಿಸುತ್ತಿದೆ. ಆದರೆ ಬಿಜೆಪಿ ಸರ್ಕಾರಗಳೇ ಭ್ರಷ್ಟಾಚಾರ ಹಗರಣಗಳಲ್ಲಿ ಭಾಗಿಯಾಗಿರುವುದು ಆ ಪಕ್ಷದ ಮುಖಂಡರ ಗಮನಕ್ಕೆ ಏಕೆ ಬಂದಿಲ್ಲ? ಉತ್ತರ ಪ್ರದೇಶದ ಮಾಯಾವತಿ ಅವರ ಸರ್ಕಾರದಲ್ಲಿದ್ದ ಕಳಕಿಂತ ಸಚಿವ ಬಾಬುರಾಮ್ ಕುಶಾವ ಅವರು ಇತ್ತೀಚೆಗೆ ಸೇರಿದ್ದೂ ಬಿಜೆಪಿಯನ್ನೇ~ ಎಂದು ವ್ಯಂಗ್ಯವಾಡಿದರು.

`ಕಾಂಗ್ರೆಸ್ ನೇತೃತ್ವದ ಸರ್ಕಾರ ಮಾತ್ರ ಭ್ರಷ್ಟಾಚಾರಿಗಳ ವಿರುದ್ಧ ತಕ್ಷಣ ಕೈಗೊಂಡು ಅವರನ್ನು ಸೆರೆಮನೆಗೆ ಕಳುಹಿಸಿದೆ. ಕೇಂದ್ರ ಸರ್ಕಾರ ಲೋಕಪಾಲ ಮಸೂದೆಯನ್ನು ಜಾರಿಗೆ ತರಲು ಪ್ರಯತ್ನಿಸಿದರೂ ಬಿಜೆಪಿ ಅದಕ್ಕೆ ಅನುಮತಿ ನೀಡಲಿಲ್ಲ~ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT