ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ ಅಂತಿಮ ಯುದ್ಧ: ಆಂಜನೇಯ

Last Updated 4 ಏಪ್ರಿಲ್ 2013, 9:17 IST
ಅಕ್ಷರ ಗಾತ್ರ

ಭರಮಸಾಗರ: ಈ ಬಾರಿಯ ಚುನಾವಣೆ ತಮ್ಮ ಪಾಲಿಗೆ ಅಂತಿಮ ಯುದ್ಧದಂತೆ. ಹಾಗಾಗಿ, ಗೆಲ್ಲಲೇಬೇಕಾದ ಅನಿವಾರ್ಯತೆಯನ್ನು ಕಾರ್ಯಕರ್ತರು ಅರ್ಥ ಮಾಡಿಕೊಳ್ಳಿ ಎಂದು ಮಾಜಿ ಶಾಸಕ ಎಚ್. ಆಂಜನೇಯ ಮನವಿ ಮಾಡಿದರು. ಗ್ರಾಮದಲ್ಲಿ ಬುಧವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. 

ಸಿರಿಗೆರೆ ಮಠದ ಭಕ್ತನಾಗಿದ್ದು, ಜನರ ಹೃದಯ ಗೆಲ್ಲುವ ಮೂಲಕ ಚುನಾವಣೆಯಲ್ಲಿ ವಿಜಯಶಾಲಿ ಆಗುವಂತೆ ಸ್ವಾಮೀಜಿ ಆಶೀರ್ವದಿಸಿದ್ದಾರೆ ಎಂದು ಹೇಳಿದರು. ಮಾಜಿ ಶಾಸಕ ಎಂ. ಚಂದ್ರಪ್ಪನಿಗೆ ಯಾವುದೇ ರೀತಿ ಪಕ್ಷ ನಿಷ್ಠೆ, ರಾಜಕೀಯ ಮೌಲ್ಯ, ಸಿದ್ಧಾಂತಗಳು ಇಲ್ಲ ಎಂದು ದೂರಿದರು.

ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಎಚ್.ಎನ್. ತಿಪ್ಪೇಸ್ವಾಮಿ, ಸದಸ್ಯರಾದ ಭಾರತೀ ಕಲ್ಲೇಶ್, ರಂಗಸ್ವಾಮಿ, ಮಾಜಿ ಸದಸ್ಯ ಕೃಷ್ಣಮೂರ್ತಿ, ಕುಕ್ಕಟ ಮಂಡಳಿ ಅಧ್ಯಕ್ಷ ಡಿ.ಎಸ್. ರುದ್ರಮುನಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾರಪ್ಪ, ಮುಖಂಡರಾದ ಸಕ್ಲೇನ್‌ಪಾಷ, ಕೊಳಹಾಳ್ ಶರಣಪ್ಪ, ಶಿವಣ್ಣ, ಶಿವಗಂಗ ಲೋಕೇಶ್, ತೀರ್ಥಪ್ಪ, ಗ್ರಾಮ ಪಂಚಾಯ್ತಿ ಉಪಾಧ್ಯಕ ಓ. ತಿಪ್ಪೇಶ್, ಸದಸ್ಯರಾದ ಶಿವಶಂಕರ್, ಅಶೋಕ್, ಶಿವಪ್ಪ, ರವೀಂದ್ರಲಾಲ್‌ನಾಯ್ಕ, ರಾಜಪ್ಪ, ಒ.ಎಸ್. ರವಿಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT