ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ: ಎರಡು ನಾಮಪತ್ರ ಸಲ್ಲಿಕೆ

Last Updated 13 ಏಪ್ರಿಲ್ 2013, 5:10 IST
ಅಕ್ಷರ ಗಾತ್ರ

ಚಿತ್ರದುರ್ಗ: ರಾಜ್ಯ ವಿಧಾನಸಭೆಗೆ ಚುನಾವಣೆ ಶುಕ್ರವಾರ ಎರಡು ನಾಮಪತ್ರಗಳು ಸಲ್ಲಿಕೆಯಾಗಿದ್ದು, ನಿಧಾನವಾಗಿ ಚುನಾವಣಾ ಕಾವು ಏರತೊಡಗಿದೆ.

ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಒಂದು ಮತ್ತು ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಿಂದ ಒಂದು ನಾಮಪತ್ರ ಸಲ್ಲಿಕೆಯಾಗಿದೆ. ಮೊಳಕಾಲ್ಮುರಿನಲ್ಲಿ ಪಕ್ಷೇತರ ಅಭ್ಯರ್ಥಿ ಎಚ್. ತಿಮ್ಮಯ್ಯ ನಾಮಪತ್ರ ಸಲ್ಲಿಸಿದರು.

ಎಸ್ಕೆಬಿ ನಾಮಪತ್ರ ಸಲ್ಲಿಕೆ: ನಗರದ ಹೊಸ ನಗರಸಭೆ ಕಟ್ಟಡದಲ್ಲಿ ಜೆಡಿಎಸ್‌ನಿಂದ ಹಾಲಿ ಶಾಸಕ ಎಸ್.ಕೆ. ಬಸವರಾಜನ್ ಪುನಾರಾಯ್ಕೆ ಬಯಸಿ ನಾಮಪತ್ರ ಸಲ್ಲಿಸಿದರು. `ಶುಭ ಶುಕ್ರವಾರ' ಎಂದು ಪರಿಗಣಿಸಿ ಶುಕ್ರವಾರ ಬಸವರಾಜನ್ ಚುನಾವಣಾಧಿಕಾರಿ ನಾಗರಾಜ್ ಅವರಿಗೆ ನಾಮಪತ್ರ ಸಲ್ಲಿಸಿದರು.

ಶುಕ್ರವಾರ ಸಲ್ಲಿಸಿದ ನಾಮಪತ್ರದ ಜತೆ `ಎ' ಮತ್ತು `ಬಿ' ಫಾರಂ ಹಾಗೂ ಆಸ್ತಿವಿವರಗಳ ಪ್ರಮಾಣಪತ್ರ ನೀಡಿಲ್ಲ. ಕೊನೆಯ ದಿನದವರೆಗೆ ಈ ದಾಖಲೆಗಳನ್ನು ಸಲ್ಲಿಸುವ ಅವಕಾಶವಿದೆ. ಬಸವರಾಜನ್ ಇನ್ನೊಮ್ಮೆ ನಾಮಪತ್ರ ಸಲ್ಲಿಸುವುದು ಖಚಿತ. ಒಬ್ಬರು ನಾಲ್ಕು ನಾಮಪತ್ರ ಸಲ್ಲಿಸಲು ಅವಕಾಶವಿದೆ.

ಗೆಲ್ಲುವ ವಿಶ್ವಾಸ: ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸದೊಂದಿಗೆ ನಾಮಪತ್ರ ಸಲ್ಲಿಸಿದ್ದೇನೆ. ಈ ಕ್ಷೇತ್ರದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪುನಾರಾಯ್ಕೆ ಬಯಸಿದ್ದೇನೆ. ಜನರ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳೇ ಈ ಬಾರಿ ಸ್ಪರ್ಧಿಸುತ್ತಿರುವುದು ಖಚಿತ. ಆದರೆ, ಪಕ್ಷ ಮಾತ್ರ ಬದಲಾಗಿದೆ. ಆದ್ದರಿಂದ ಮತ್ತೊಮ್ಮೆ ಗೆಲ್ಲುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಸವರಾಜನ್ ನಾಮಪತ್ರಕ್ಕೆ ನಗರಸಭೆ ಸದಸ್ಯ ಖಾದರ್‌ಖಾನ್ ಸೂಚಕರಾಗಿ ಸಹಿ ಹಾಕಿದರು.
ಜೆಡಿಎಸ್ ಮುಖಂಡರಾದ ಎಂ. ಜಯಣ್ಣ, ತಾಜಪೀರ್, ಬಿ.ಟಿ. ಸಿದ್ದೇಶ್, ಖಾದರ್‌ಖಾನ್ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಹಾಜರಿದ್ದರು.

ಸೌಭಾಗ್ಯಾ ಬಸವರಾಜನ್ ಗೇಟ್ ಹೊರಗೆ ಕಾಯುತ್ತಿದ್ದರು. ನಗರಸಭೆ ಸದಸ್ಯ ಕಾಂತರಾಜ್, ಸೈಟ್‌ಬಾಬು, ಜಿ.ಪಂ. ಸದಸ್ಯರಾದ ರವಿಕುಮಾರ್, ಅನಿಲ್ ಮತ್ತಿತರರು ಹಾಜರಿದ್ದರು.

ನೀತಿ ಸಂಹಿತೆ ಉಲ್ಲಂಘನೆ!
ಶಾಸಕ ಎಸ್.ಕೆ. ಬಸವರಾಜನ್ ನಾಮಪತ್ರ ಸಲ್ಲಿಸಿದ ನಂತರ ನೀತಿಸಂಹಿತೆ ಉಲ್ಲಂಘಿಸಿದ ಪ್ರಸಂಗವೂ ನಡೆಯಿತು.
ನಗರಸಭೆ ಹೊಸ ಕಟ್ಟಡದ ಕಾಂಪೌಂಡ್ ಹೊರಗೆ ಸಾರ್ವಜನಿಕರಿಗೆ ನಿರ್ಬಂಧ ಹೇರಿ ಬ್ಯಾರಿಕೇಡ್ ಹಾಕಲಾಗಿತ್ತು. ಈ ಬ್ಯಾರಿಕೇಡ್ ಒಳಗೆ ಜೆಡಿಎಸ್ ಕಾರ್ಯಕರ್ತರು, ಮುಖಂಡರು ಸೇರಿದ್ದರು.

ಈ ಬ್ಯಾರಿಕೇಡ್ ಒಳಗೆ ಯಾವುದೇ ರೀತಿಯ ಚುನಾವಣಾ ಪ್ರಚಾರದ ಚಟುವಟಿಕೆಗೆ ಅವಕಾಶವಿಲ್ಲ. ಆದರೆ, ಶಾಸಕ ಬಸವರಾಜನ್ ನಾಮಪತ್ರ ಸಲ್ಲಿಸಿ ಹೊರಗೆ ಬಂದ ನಂತರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ನಂತರ, ಬಸವರಾಜನ್ ಬೆಂಬಲಿಗರು ಒನಕೆ ಓಬವ್ವ ವೃತ್ತದಲ್ಲಿ ಪಟಾಕಿ ಸಹ ಸಿಡಿಸಿದರು.  ಪ್ರತಿಕ್ರಿಯಿಸಿದ ಚುನಾವಣಾಧಿಕಾರಿ, ದೂರು ನೀಡಿದರೆ ಪರಿಶೀಲಿಸುತ್ತೇವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT