ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಚುನಾವಣೆ ಪ್ರತಿಯೊಂದು ದೃಶ್ಯವೂ ಚಿತ್ರೀಕರಣ'

Last Updated 13 ಏಪ್ರಿಲ್ 2013, 6:28 IST
ಅಕ್ಷರ ಗಾತ್ರ

ನರಗುಂದ: ಈಗಾಗಲೇ ಚುನಾವಣೆ ನೀತಿ ಸಂಹಿತೆ ಜಾರಿಯಾಗಿದೆ. ಅಧಿಸೂಚನೆ ಪ್ರಕಟವಾಗಿದೆ. ಆದ್ದರಿಂದ  ಈ ಸಲದ ಚುನಾವಣೆಗೆ ಸಂಬಂಧ ಪಟ್ಟಂತೆ ಪ್ರತಿಯೊಂದು ದೃಶ್ಯವೂ ವಿಡಿಯೋ ಚಿತ್ರೀಕರಣ ಮಾಡಲಾಗುತ್ತಿದೆ. ಇದಕ್ಕೆ ಹೆಚ್ಚು ಒತ್ತು ನೀಡಲಾಗಿದೆ ಎಂದು ಚುನಾವಣಾಧಿಕಾರಿ ಶಶಿಧರ ಕುರೇರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ  ಅವರು ಈಗಾಗಲೇ  ಸೆಕ್ಟರ್ ಅಧಿಕಾರಿಗಳಿಗೆ ವಿದ್ಯುನ್ಮಾನ ಮತ ಯಂತ್ರಗಳ ಕುರಿತು ತರಬೇತಿ ನೀಡಲಾಗಿದೆ. ಎಲ್ಲ ಸಿದ್ದತೆ ಮಾಡಿಕೊಳ್ಳಲಾಗಿದೆ. ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳ ಅಭ್ಯರ್ಥಿಗಳು ಕೇವಲ ಒಂದು ಸೂಚರೊಂದಿಗೆ  ನಾಮಪತ್ರ ಸಲ್ಲಿಸ ಬಹುದು. ಆದರೆ, ಕೇವಲ ನೊಂದಣಿ ಯಾಗಿ  ಚುನಾ ವಣೆ ಆಯೋಗದಿಂದ ಮಾನ್ಯತೆ ಪಡೆಯದ ಪಕ್ಷಗಳ ಅಭ್ಯರ್ಥಿಗಳು ಹಾಗೂ ಪಕ್ಷೇತರ ಅಭ್ಯರ್ಥಿಗಳು  10 ಸೂಚಕರೊಂದಿಗೆ ನಾಮಪತ್ರ ಸಲ್ಲಿಸಬೇಕು. ಜೊತೆಗೆ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಇರಬೇಕು ಎಂದು ಶಶಿಧರ ಸ್ಪಷ್ಟಪಡಿಸಿದರು.

ಚುನಾವಣಾ ನೀತಿ ಸಂಹಿತೆಯನ್ನು ಕಟ್ಟು ನಿಟ್ಟಾಗಿ ಜಾರಿ ತರಲಾಗುತ್ತಿದೆ. ಇದಕ್ಕೆ ಸಂಬಂಧಪಟ್ಟಂತೆ  ನರಗುಂದ ಮತಕ್ಷೇತ್ರದಲ್ಲಿ ಮೂರು ಸಮಿತಿಗಳನ್ನು ರಚಿಸಲಾಗಿದೆ.

ನರಗುಂದ ತಾಲ್ಲೂಕಿನ ಗ್ರಾಮ ಗಳಿಗೆ, ರೋಣ ತಾಲ್ಲೂಕಿನ ಗ್ರಾಮ ಗಳಿಗೆ ಹಾಗೂ ಗದಗ ತಾಲ್ಲೂಕಿನ ಗ್ರಾಮಗಳಿಗೆ ಪ್ರತ್ಯೇಕ ಸಮಿತಿ ರಚಿಸಿ  ಅಲ್ಲಿ ಮೇಲ್ವಿ ಚಾರಣೆಗೆ ಸಂಬಂಧ ಪಟ್ಟಂತೆ ಅಧಿಕಾರಿ ಗಳನ್ನು ನೇಮಿಸಲಾಗಿದೆ. ಮೂರು ಫ್ಲೈಯಿಂಗ್ ಸ್ಕ್ವಾಡ್‌ಗಳನ್ನು  ನೇಮಿಸ ಲಾಗಿದೆ.  ಇವರು ಹಣ  ಹಂಚು ವುದು, ಮದ್ಯ ಹಂಚುವುದು ಸೇರಿದಂತೆ ವಿವಿಧ ಅಕ್ರಮ ಚುಟವಟಿಕೆಗಳನ್ನು ಪತ್ತೆ ಹಚ್ಚವುದು ಇವರ ಕರ್ತವ್ಯವಾಗಿದೆ.

ಕೊಣ್ಣೂರುನ ಶಿರೋಳ ರಸ್ತೆಯಲ್ಲಿ  ಹಾಗೂ ನರಗುಂದ ಆಯಿಲ್ ಮಿಲ್ ಕ್ರಾಸ್‌ನಲ್ಲಿ ವಾಹನ ತಪಾಸಣೆಗಾಗಿ ವಿಶೇಷ ತಂಡ ರಚಿಸಲಾಗಿದೆ. ಅಲ್ಲಿ ಪೊಲೀಸ್, ಅಬಕಾರಿ, ತೆರಿಗೆ ಅಧಿಕಾರಿಗಳು ಇರುತ್ತಾರೆ ಎಂದರು.  ಒಟ್ಟು 193 ಮತಗಟ್ಟೆಗಳಿದ್ದು, 42 ಅತಿ ಸೂಕ್ಷ್ಮ, 60 ಸೂಕ್ಷ್ಮ ಹಾಗೂ 91 ಸಾಮಾನ್ಯ ಮತಗಟ್ಟೆಗಳಿವೆ, ಒಟ್ಟು 946 ಸಿಬ್ಬಂದಿ ಹಾಗೂ ವಿಶೇಷ ಭದ್ರತಾ ತಂಡ ಇರುತ್ತಾರೆ ಎಂದು ಕುರೇರ ತಿಳಿಸಿದರು.   

ಖರ್ಚು ವೆಚ್ಚ ಸಲ್ಲಿಕೆ ಕಡ್ಡಾಯ: ಪ್ರತಿ ಅಭ್ಯರ್ಥಿಯು ಚುನಾವಣಾ ವೆಚ್ಚವನ್ನು 16 ಲಕ್ಷ ರೂಪಾಯಗಳಿಗೆ ನಿಗದಿ ಪಡಿಸಲಾಗಿದೆ. ಆದ್ದರಿಂದ ಅಭ್ಯರ್ಥಿಗಳು ಕಡ್ಡಾಯವಾಗಿ ತಮ್ಮ ಖರ್ಚು ವೆಚ್ಚದ ವಿವರವನ್ನು ಸಲ್ಲಿಸಬೇಕು ಅದರ ಉಸ್ತುವಾರಿಯಾಗಿ  ನರಗುಂದ ಮತಕ್ಷೇತ್ರಕ್ಕೆ ವಿಶೇಷ ಅಧಿಕಾರಿಯಾಗಿ ಗಿರೀಶ ಯಾದವ ಅವರನ್ನು ನೇಮಿಸಲಾಗಿದೆ. ದೂರುಗಳಿದ್ದರೆ ಮೊಬೈಲ್ ಸಂಖ್ಯೆ 03990224144ಗೆ ಸಂಪರ್ಕಿಸಬಹುದೆಂದು ತಿಳಿಸಿದರು. 

ಒಟ್ಟು 1,64,899 ಮತದಾರರಿದ್ದು, ಹೊಸ ದಾಗಿ 6964 ಮತದಾರರ ಪಟ್ಟಿಗೆ ಅರ್ಜಿಗಳು ಬಂದಿವೆ. 1151 ರದ್ದಾಗಲಿವೆ. 242 ಮತದಾ ರರು ಸ್ಥಳಾಂತರಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇದೇ14ರಂದು ಅಂತಿಮ ಒಟ್ಟು ಮತದಾರರ ಪಟ್ಟಿ ಹೊರಬೀಳಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT