ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ ಬಹಿಷ್ಕರಿಸಲು ನಿರ್ಧಾರ

Last Updated 5 ಏಪ್ರಿಲ್ 2013, 6:28 IST
ಅಕ್ಷರ ಗಾತ್ರ

ಅಂಕೋಲಾ: ತಾಲ್ಲೂಕಿನಲ್ಲಿ ಬೇಸಿಗೆಯ ದಗೆಯೊಂದಿಗೆ ಚುನಾವಣೆಯ ಕಾವು ಸೇರಿಕೊಂಡಿದ್ದು, ಇದೀಗ ಎಚ್ಚೆತ್ತ ಸಮುದಾಯಗಳು ತಮ್ಮ ನಾಗರಿಕ ಹಕ್ಕುಗಳನ್ನು ನಿರ್ಲಕ್ಷಿಸಿದ ಜನಪ್ರತಿನಿಧಿಗಳು ಮತ್ತು  ಅಧಿಕಾರಿಗಳ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸುತ್ತಿರುವುದು ಗಮನಾರ್ಹವಾಗಿದೆ.

ಅದರಲ್ಲಿ ಸ್ವಾತಂತ್ರ್ಯ ಚಳವಳಿಯಲ್ಲಿ ಹೆಸರು ಮಾಡಿದ ಗಂಗಾವಳಿ ತೀರದ ಕರಬಂಧಿ ಗ್ರಾಮಗಳಲ್ಲಿ ಶೆಟಗೇರಿಯ ಹೆಸರು ಮುಂಚೂಣಿಯಲ್ಲಿದೆ. ಆದರೆ ಈ ಸ್ವಾತಂತ್ರ್ಯದ ಸವಿ ಇಲ್ಲಿನ ಕೆಲವರಿಗೆ  ಮಾತ್ರ ದೊರೆತಂತಾಗಿದ್ದು, ಇಲ್ಲಿ ನೆಲೆಸಿರುವ 40ಕ್ಕೂ ಹೆಚ್ಚು ದಲಿತ ಕುಟುಂಬಗಳಿಗೆ ಸೇರಿದ ನೂರಾರು ಜನರು ಮೂಲಸೌಕರ್ಯಗಳಿಂದ ವಂಚಿತರಾಗಿದ್ದಾರೆ.

ಆಗೇರ ಸಮುದಾಯ ವಾಸಿಸುವ ಕೇರಿಯಲ್ಲಿನ ಕೂಡು ರಸ್ತೆಗಳನ್ನು ಆಳವಾದ ಹೊಂಡಗಳಲ್ಲಿ ಹುಡುಕಬೇಕಾಗಿದೆ. ವಿದ್ಯುತ್ ಕಂಬಗಳಿದ್ದರೂ ದೀಪಗಳು ಬೆಳಗುತ್ತಿಲ್ಲ.  ರಾತ್ರಿ ವೇಳೆ ಮಕ್ಕಳು, ಮಹಿಳೆಯರು, ವೃದ್ಧರು ಅಂಗೈಯಲ್ಲಿ ಜೀವ ಹಿಡಿದುಕೊಂಡು ಸಂಚರಿಸಬೇಕಾಗಿದೆ. ಮುಖ್ಯವಾಗಿ ಕುಡಿಯುವ ನೀರಿಗೆ ತತ್ವಾರವಾಗಿದ್ದು, ಸಮಸ್ಯೆ ಉಲ್ಭಣಗೊಂಡಿದೆ. ಇದುವರೆಗೆ ದಲಿತ ಕೇರಿಯ ಅಭಿವೃದ್ಧಿಯ ಹೆಸರಿನಲ್ಲಿ ಮಂಜೂರಿಯಾದ ಯಾವುದೇ ಕಾಮಗಾರಿಗಳು ಸಾಕಾರಗೊಳ್ಳದಂತೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಯಶಸ್ವಿಯಾಗಿ ನೋಡಿಕೊಂಡಿರುವುದು, ಇಲ್ಲಿ ಅಪೂರ್ಣಗೊಂಡು ಹಾಳು ಸುರಿಯುತ್ತಿರುವ  ಎರಡು ತೆರೆದ ಬಾವಿಗಳು ಸ್ಪಷ್ಟಪಡಿಸುತ್ತಿವೆ.

ಇಂತಹ ಹಲವಾರು ಅನ್ಯಾಯಗಳನ್ನು ಮಾಧ್ಯಮಗಳ ಎದುರು ತೋಡಿಕೊಂಡಿರುವ ಇಲ್ಲಿನ ನಿವಾಸಿಗಳಾಗಿರುವ ನಿವೃತ್ತ ಎಎಸ್‌ಐ ನಾರಾಯಣ ಆಗೇರ, ತಮ್ಮ ಕಾಲೊನಿಗೆ ಮೂಲ ಸೌಕರ್ಯಗಳನ್ನು ತ್ವರಿತವಾಗಿ ಒದಗಿಸದಿದ್ದರೆ ಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಕೇರಿಯ ಎಲ್ಲ ದಲಿತರು ಮತದಾನ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಜ್ಯೋತಿ ಮಂಜುನಾಥ ಆಗೇರ, ಗಿರಿಜಾ ಎನ್ ಆಗೇರ, ಲತಾ ಪ್ರಕಾಶ ಆಗೇರ, ಸಂಧ್ಯಾ ಎನ್ ಆಗೇರ, ಮಂಜುನಾಥ ಎನ್. ಆಗೇರ, ಶಾಂತಾರಾಮ ಆಗೇರ, ಪೊಕ್ಕಾ ಆಗೇರ, ಪ್ರಕಾಶ ಆಗೇರ, ನಾಗರಾಜ ಎಂ. ಆಗೇರ ಸೇರಿದಂತೆ ನೂರಾರು ಜನರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT