ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ ಭಂಗ ಭೀತಿ: ಆಯೋಗಕ್ಕೆ ಬಿಜೆಪಿ ದೂರು

Last Updated 11 ಮೇ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ಉತ್ತರ ಪ್ರದೇಶದಲ್ಲಿ ಆಡಳಿತಾ­­ರೂಢ ಸಮಾಜವಾದಿ ಪಕ್ಷವು ಸೋಮವಾರದ ಚುನಾವಣೆಗೆ ಭಂಗ ಉಂಟುಮಾಡುವ ಸಾಧ್ಯತೆಗಳಿವೆ ಎಂದು ಆತಂಕ ವ್ಯಕ್ತಪಡಿಸಿ ಬಿಜೆಪಿಯು ಚುನಾ­ವಣೆ ಆಯೋಗಕ್ಕೆ ದೂರು ಬರೆದಿದೆ.

ಹಾಗೆಯೇ, ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ ಪಕ್ಷದಿಂದ ಚುನಾವಣೆಗೆ ಅಡ್ಡಿ ಎದುರಾಗ­ಬಹು­ದೆಂದು ಸಿಪಿಐ ಆಯೋಗಕ್ಕೆ ದೂರು ನೀಡಿದೆ.  ಈ ಎರಡೂ ಪಕ್ಷಗಳು ನಕಲಿ ಮತ ಚಲಾವಣೆ, ಮತಗಟ್ಟೆ ವಶ ಹಾಗೂ ಇನ್ನಿತರ ಅಕ್ರಮಗಳು ನಡೆಯ­ಬಹು­ದೆಂದು ಭೀತಿ ವ್ಯಕ್ತಪಡಿಸಿವೆ.

ಸಂಭವನೀಯ ಚುನಾವಣಾ ಅಕ್ರಮ ತಡೆಗಟ್ಟುವ ಸಲುವಾಗಿ ವಿಶೇಷ ವೀಕ್ಷಕರನ್ನು ನಿಯೋಜಿಸುವ ಜತೆಗೆ ಹೆಚ್ಚಿನ ಬಿಗಿ ಭದ್ರತೆ ಒದಗಿಸಬೇಕು ಎಂದೂ ಆಯೋಗವನ್ನು ಒತ್ತಾಯಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT