ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ ವ್ಯವಸ್ಥೆಯಲ್ಲೇ ದೋಷ

Last Updated 18 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಇಂದು ಜೈಲಿನಲ್ಲಿರುವವರು ಮುಂದಿನ ವಿಚಾರಣೆಯಲ್ಲಾದರೂ ಹೊರಬರಬಹುದು. ಅಷ್ಟೇಕೆ? ಮುಖ್ಯಮಂತ್ರಿಯೂ ಆಗಬಹುದು; ದ್ವಿಗುಣಗೊಂಡ ರೊಚ್ಚಿನಿಂದ ಸೇಡೂ ತೀರಿಸಿಕೊಳ್ಳಬಹುದು. ನಮ್ಮ ವ್ಯವಸ್ಥೆಯಲ್ಲಿ ಇದಕ್ಕೆಲ್ಲ ಹೇರಳ ಅವಕಾಶವಿದೆ.
 
ಇಂಥಾ ಜನತಂತ್ರ, ಒಬ್ಬ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅಥವಾ ನ್ಯಾಯಾಧೀಶ   ಎನ್. ಕೆ ಸುಧೀಂದ್ರ ರಾವ್ ಇಲ್ಲವೇ, ಗುಜರಾತ್ ಐಪಿಎಸ್ ಅಧಿಕಾರಿ, ಸಂಜೀವ ಭಟ್‌ಗೆ ಜಾಮೀನುಕೊಟ್ಟು ಕಳಿಸುವ ಧೈರ‌್ಯ ತೋರಿಸಿದ ನ್ಯಾಯಾಧೀಶ ವಿ. ಕೆ. ವ್ಯಾಸ್ ಇತ್ಯಾದಿ ಅಪರೂಪದವರ ಕರ್ತವ್ಯ ನಿಷ್ಠೆಯಿಂದಲೇ ಎಷ್ಟುಕಾಲ ಬದುಕಿ ಉಳಿದೀತು?!

ಒಬ್ಬ ರಾಜಕಾರಣಿ ಜೈಲಿನ ಒಳಹೋದರೆಂದ ಮಾತ್ರಕ್ಕೆ ಹೊರಗುಳಿದವರೆಲ್ಲಾ ಸಭ್ಯ-ಸಾಚಾಗಳೆಂದೇನೂ ಅಲ್ಲ.

ದೋಷವಿರುವುದು ವ್ಯಕ್ತಿಗಳಲ್ಲ; ಯೋಗ್ಯರಲ್ಲದವರ ಪೈಕಿ ಮಾತ್ರವೇ ಒಬ್ಬರನ್ನು ಆರಿಸಲು ಅವಕಾಶ ಇರುವ ನಮ್ಮ ಚುನಾವಣಾ ವ್ಯವಸ್ಥೆಯಲ್ಲಿ. ಜ್ಞಾನವುಳ್ಳವರು ಇನ್ನಾದರೂ ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕಲ್ಲವೇ?

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT