ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆಗೆ ತೀವ್ರಗೊಂಡ ಸಿದ್ಧತೆ

Last Updated 24 ಏಪ್ರಿಲ್ 2013, 6:38 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ವಿಧಾನಸಭಾ ಚುನಾವಣೆಯ ಮತದಾನಕ್ಕೆ ಕಂದಾಯ ಇಲಾಖೆ ನೌಕರರು ಭರದ ಸಿದ್ಧತೆ ನಡೆಸಿದ್ದಾರೆ. ಪ್ರತಿ ಗ್ರಾಮ ಮತ್ತು ಪಟ್ಟಣಗಳಲ್ಲಿ ಮತಗಟ್ಟೆಗಳನ್ನು ಗುರುತಿಸಿ ಅಗತ್ಯವಿರುವ ಪೀಠೋಪಕರಣಗಳನ್ನು ಒದಗಿಸುತ್ತಿದ್ದಾರೆ.

ಚುನಾವಣೆ ನಿಯಮದಂತೆ ಮತಗಟ್ಟೆಯ ವ್ಯಾಪ್ತಿಯನ್ನು ಗುರುತಿಸುವ ಕೆಲಸ ನಡೆದಿದೆ. ಮತಗಟ್ಟೆಯಿಂದ 200 ಮೀಟರ್ ವ್ಯಾಪ್ತಿಯ ಒಳಗೆ ಪ್ರಚಾರ ಮಾಡುವುದನ್ನು ತಡೆಯಲು ವ್ಯಾಪ್ತಿ ಗುರುತಿಸಿ ಬಿಳಿ ಪಟ್ಟೆ ಹಾಕಲಾಗುತ್ತಿದೆ. ಜತೆಗೆ ಮತಗಟ್ಟೆಯ ಕೇಂದ್ರಗಳಲ್ಲಿನ ಕೊಠಡಿ, ಅವುಗಳ ಭದ್ರತೆ, ವಿದ್ಯುತ್, ಶೌಚಾಲಯ ಮುಂತಾದವುಗಳನ್ನು ಪರೀಶಿಲಿಸುತ್ತಿದ್ದಾರೆ.

ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ ನೀಡುತ್ತಿದ್ದು, ಈಗಾಗಲೇ ಒಂದು ಸುತ್ತಿನ ತರಬೇತಿ ಮುಗಿದಿದೆ. ಎರಡನೇ ಸುತ್ತಿನ ತರಬೇತಿ ಏಪ್ರಿಲ್ 29 ಅಥವಾ 30ರಂದು ನಡೆಯಲಿದೆ. ಮತಗಟ್ಟೆ ಅಧಿಕಾರಿಗಳಿಗೆ ತಾಲ್ಲೂಕು ಬದಲಾವಣೆ ಮಾಡುತಿದ್ದು  ನಿಯೋಜನೆ ಗೊಳ್ಳುವ ಮತಗಟ್ಟೆಯ  ಮಾಹಿತಿಯನ್ನು ಗೌಪ್ಯವಾಗಿ ಇಡಲಾಗಿದೆ.  ಉಳಿದಂತೆ ಚುನಾವಣೆ   ಶಾಂತಿ ಹಾಗೂ ನ್ಯಾಯಸಮ್ಮತವಾಗಿ ನಡೆಸುವ ಬಗ್ಗೆ ಎಲ್ಲ ರೀತಿಯ ತರಬೇತಿ ನೀಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT