ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಕುಗೊಂಡ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ

Last Updated 23 ಫೆಬ್ರುವರಿ 2013, 6:48 IST
ಅಕ್ಷರ ಗಾತ್ರ

ಮಂಡ್ಯ: ನಗರಸಭೆ ಚುನಾವಣೆಯ ನಾಮಪತ್ರ ಸಲ್ಲಿಕೆಯು ಶುಕ್ರವಾರ ಚುರುಕು ಪಡೆದುಕೊಂಡಿತ್ತು. ನಗರಸಭೆಯ ಮಾಜಿ ಅಧ್ಯಕ್ಷ ಸೇರಿದಂತೆ ಹಲವು ಹಾಲಿ, ಮಾಜಿ ಸದಸ್ಯರು ನಾಮಪತ್ರ ಸಲ್ಲಿಸಿದರು. 35 ವಾರ್ಡ್‌ಗಳ ಪೈಕಿ 33 ವಾರ್ಡ್‌ಗಳಿಂದ 72 ಅಭ್ಯರ್ಥಿಗಳು 88 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

ಕಾಂಗ್ರೆಸ್‌ನಿಂದ 23, ಬಿಜೆಪಿಯಿಂದ 10, ಜೆಡಿಎಸ್‌ನಿಂದ 17, ಕೆಜೆಪಿಯಿಂದ ಇಬ್ಬರು, ಬಿಎಸ್‌ಆರ್ ಕಾಂಗ್ರೆಸ್‌ನಿಂದ ಇಬ್ಬರು, ಎಸ್‌ಡಿಪಿಐ (ಸೋಷಿಯಲ್ ಡೆಮಾಕ್ರಟಿಕ್ ಫ್ರಂಟ್ ಆಫ್ ಇಂಡಿಯಾ) ವತಿಯಿಂದ ಒಬ್ಬರು ಹಾಗೂ ಪಕ್ಷೇತರರಾಗಿ 34 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ನಗರಸಭೆ ಮಾಜಿ ಮೇಯರ್ ಪಕ್ಷೇತರರಾಗಿ ಎಂ.ಪಿ. ಅರುಣ್‌ಕುಮಾರ್, ಸದಸ್ಯರಾಗಿದ್ದ ಹೊಸಹಳ್ಳಿ ಬೋರೇಗೌಡ, ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಸದಸ್ಯ ಎಸ್.ಕೆ.ಶಿವಪ್ರಕಾಶ್‌ಬಾಬು ನಾಮಪತ್ರ ಸಲ್ಲಿಸಿದದಾರೆ.
ಬೆಳಿಗ್ಗೆಯಿಂದಲೇ ನಾಮಪತ್ರ ಕೇಂದ್ರಗಳ ಮುಂದೆ ಬೆಂಬಲಿಗರೊಂದಿಗೆ ಜಮಾಯಿಸಿದ್ದರು. ಸಂಜೆಯವರೆಗೂ ಅದೇ ದೃಶ್ಯ ಮುಂದುವರೆದಿತ್ತು.

ಶನಿವಾರ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಶುಕ್ರವಾರ ರಾತ್ರಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಟಿಕೆಟ್ ಹಂಚಿಕೆ ಮಾಡುವುದರಿಂದ ನಾಮಪತ್ರ ಸಲ್ಲಿಕೆಯ ಸಂಖ್ಯೆ ಹೆಚ್ಚಾಗಲಿದೆ.

ಶ್ರೀರಂಗಪಟ್ಟಣ ಪುರಸಭೆ: 37 ನಾಪತ್ರ ಸಲ್ಲಿಕೆ
ಶ್ರೀರಂಗಪಟ್ಟಣ: ಮಾ.7ರಂದು ನಡೆಯುವ ಶ್ರೀರಂಗಪಟ್ಟಣ ಪುರಸಭೆ ಚುನಾಣೆಗೆ ಶುಕ್ರವಾರ ಒಟ್ಟು 37 ನಾಮಪತ್ರಗಳು ಸಲ್ಲಿಕೆಯಾಗಿವೆ. ಒಂದನೇ ವಾರ್ಡ್ (ಸಮಾನ್ಯ) ನಿಂದ ಎಂ.ಶ್ರೀನಿವಾಸ್, ಲಕ್ಷ್ಮಮ್ಮ; 2ನೇ ವಾರ್ಡ್ (ಪರಿಶಿಷ್ಟ ಪಂಗಡ ಮಹಿಳೆ) ವೆಂಕಟಲಕ್ಷ್ಮಮ್ಮ; 3ನೇ ವಾರ್ಡ್ (ಬಿಸಿಎಂ-ಎ) ರಂಗಶೆಟ್ಟಿ, ಸಿದ್ದರಾಜು; 4ನೇ ವಾರ್ಡ್ (ಬಿಸಿಎಂ-ಎ ಮಹಿಳೆ) ಇಂದ್ರಮ್ಮ, ಆಶಾ, ಭಾಗ್ಯ ಸುಂದರ್‌ರಾಜು; 6ನೇ ವಾರ್ಡ್(ಸಾಮಾನ್ಯ ಮಹಿಳೆ) ಕಾವೇರಮ್ಮ ಶೇಷಾದ್ರಿ, ವಿದ್ಯಾ ಉಮೇಶ್, ರೇವತಿ ಹಾಗೂ 7ನೇ ವಾರ್ಡ್ (ಸಾಮಾನ್ಯ)ನಿಂದ ಎಸ್.ನಂದೀಶ್ ನಾಮಪತ್ರ ಸಲ್ಲಿಸಿದ್ದಾರೆ.

10ನೇ ವಾರ್ಡ್(ಪರಿಶಿಷ್ಟ ಜಾತಿ) ಎಸ್.ಕೆ.ಆರ‌್ಮುಗಂ ಅಲಿಯಾಸ್ ಕಿಶೋರ್; 11ನೇ ವಾರ್ಡ್ (ಸಾಮಾನ್ಯ ಮಹಿಳೆ) ಜಯಲಕ್ಷ್ಮಿ ಮರಿಯಪ್ಪ, 12ನೇ ವಾರ್ಡ್ (ಸಾಮಾನ್ಯ) ಬಿ.ಜಗನ್ನಾಥ್; 13ನೇ ವಾರ್ಡ್ (ಸಾಮಾನ್ಯ ಮಹಿಳೆ) ರಾಧಾ ಶ್ರೀಕಂಠು; 14ನೇ ವಾರ್ಡ್ (ಸಾಮಾನ್ಯ) ಎಂ.ಗಿರೀಶ್, ಎಂ.ಸುರೇಶ್, ಎಂ.ಎಲ್.ದಿನೇಶ್ ಹಾಗೂ 15ನೇ ವಾರ್ಡ್‌ನಿಂದ ಕೆ.ರಮೇಶ್ ನಾಮಪತ್ರ ಸಲ್ಲಿಸಿದರು.
18ನೇ ವಾರ್ಡ್ (ಬಿಸಿಎಂ-ಎ ಮಹಿಳೆ)ನಿಂದ ಭಾಗ್ಯಶ್ರೀ, ಅಮೀನಾ, ಸಮೀನಾ ಬೇಗಂ; 19ನೇ ವಾರ್ಡ್ (ಸಾಮಾನ್ಯ) ಪುಟ್ಟರಾಮು, ಸೋಮಶೇಖರ್, ಸಿ.ಶಿವಕುಮಾರ್, ಅಶೋಕ್; 20ನೇ ವಾರ್ಡ್ (ಬಿಸಿಎಂ-ಎ) ರವಿ; 21ನೇ ವಾರ್ಡ್ (ಸಾಮಾನ್ಯ) ಈ.ಕುಮಾರ್; 22ನೇ ವಾರ್ಡ್ (ಬಿಸಿಎಂ-ಎ) ಈ.ಲೋಕೇಶ್, ಈ.ಪ್ರಕಾಶ್ ಹಾಗೂ 23ನೇ ವಾರ್ಡ್ (ಪರಿಶಿಷ್ಟ ಜಾತಿ ಮಹಿಳೆ)ನಿಂದ ರುಕ್ಮಿಣಿ, ಎನ್.ಸಾವಿತ್ರಿ, ಶೈಲೇಂದ್ರಮ್ಮ ಮತ್ತು ಸೌಭಾಗ್ಯ ನಾಮಪತ್ರ ಸಲ್ಲಿಸಿದ್ದಾರೆ. ಗುರುವಾರ 7 ನಾಮಪತ್ರ ಸಲ್ಲಿಕೆಯಾಗಿದ್ದವು.
59 ನಾಮಪತ್ರ ಸ್ವೀಕೃತ

ಮಳವಳ್ಳಿ: ಪಟ್ಟಣದ ಪುರಸಭೆಯ 23ವಾರ್ಡ್‌ಗಳಿಗೆ ಮಾ.7 ರಂದು ಚುನಾವಣೆ ನಡೆಯಲಿದ್ದು ಶುಕ್ರವಾರ ಒಟ್ಟು 48 ಮಂದಿ 59 ನಾಮಪತ್ರಗಳು ಸ್ವೀಕೃತವಾಗಿವೆ. ನಾಮಪತ್ರ ಸಲ್ಲಿಸಲು ಫೆ. 23 ರಂದು(ಇಂದು) ಕೊನೆಯ ದಿನವಾಗಿದೆ.

ಮದ್ದೂರು ಪುರಸಭೆ: 20 ನಾಮಪತ್ರ ಸಲ್ಲಿಕೆ
ಮದ್ದೂರು: ಪಟ್ಟಣ ಪುರಸಭಾ ಚುನಾವಣೆಗೆ ವಿವಿಧ ವಾರ್ಡುಗಳಿಂದ ಶುಕ್ರವಾರ 20 ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾಗಿ ಎನ್.ಸಿ.ರಘು (ವಾರ್ಡ್-4), ಜಿ.ಸಿ.ಮಹೇಶ್ (ವಾರ್ಡ್-5), ಎಂ.ಕೆ.ಮರೀಗೌಡ (ವಾರ್ಡ್-7), ಕೆ.ಪ್ರಸಾದ್ (ವಾರ್ಡ್-8), ಶೋಭ ತಮ್ಮೇಗೌಡ (ವಾರ್ಡ್-9), ಬಿ.ಕೃಷ್ಣ (ವಾರ್ಡ್-11), ಆರ್.ಶ್ರೀನಿವಾಸ್ (ವಾರ್ಡ್-12), ಎಂ.ಎಸ್.ಉಮೇಶ್ (ವಾರ್ಡ್-15), ಎಂ.ಸಿ.ಮುನ್ಸಿಫ್‌ಆಲಿಖಾನ್ (ವಾರ್ಡ್-18) ನಾಮಪತ್ರ ಸಲ್ಲಿಸಿದ್ದಾರೆ.

ಬಿಜೆಪಿಯಿಂದ ಎಂ.ಸಿ.ಸಿದ್ದು (ವಾರ್ಡ್-18) ಅರ್ಜಿ ಸ್ಲ್ಲಲಿಸಿದ್ದಾರೆ. ಇನ್ನುಳಿದಂತೆ ಶುಕ್ರವಾರ ಸಂಜೆಯಾದರೂ ಜೆಡಿಎಸ್ ಪಕ್ಷದಿಂದ ಯಾವುದೇ ಅಭ್ಯರ್ಥಿಗಳಿಗೆ ಬಿ.ಫಾರಂ ವಿತರಿಸದ ಕಾರಣ ಹಾಗೂ ಕೆಲವರು ಜೆಡಿಎಸ್ ಆಕಾಂಕ್ಷಿತರಾಗಿ ಪಕ್ಷೇತರ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದಾರೆ. ಪಕ್ಷೇತರ ಸದಸ್ಯರಾಗಿ ಜಯಮ್ಮ ಚಿಕ್ಕಪುಟ್ಟಯ್ಯ (ವಾರ್ಡ್-3), ಎಂ.ಪಿ.ಅಮರ್‌ಬಾಬು (ವಾರ್ಡ್-4), ಅರುಣ್‌ಕುಮಾರ್ ಹಾಗೂ ಚಂದ್ರಶೇಖರ್ (ವಾರ್ಡ್-5), ಅನಸೂಯ ಶಿವಪ್ಪ (ವಾರ್ಡ್-6), ರವಿ ಕುಂದೂರು (ವಾರ್ಡ್-7), ಅಜಿತ್‌ಕುಮಾರ್, ಮಹದೇವು (ವಾರ್ಡ್-15), ಪಾರ್ವತಮ್ಮ (ವಾರ್ಡ್-21), ಸೌದೆನಿಂಗಯ್ಯ (ವಾರ್ಡ್-23) ತಮ್ಮ ಅರ್ಜಿ ಸಲ್ಲಿಸಿದ್ದಾರೆ.

ಪ.ಪಂ: 45 ನಾಮಪತ್ರ ಸಲ್ಲಿಕೆ
ಪಾಂಡವಪುರ: ಮಾರ್ಚ್ 7ರಂದು ನಡೆಯಲಿರುವ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ದಿಸಲು ಸರ್ವೋದಯ ಕರ್ನಾಟಕ, ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಹಾಗೂ ಪಕ್ಷೇತರರು ಸೇರಿದಂತೆ ಒಟ್ಟು 45 ಮಂದಿ ಅಭ್ಯರ್ಥಿಗಳು ಶುಕ್ರವಾರ ನಾಮಪತ್ರ ಸಲ್ಲಿಸಿದರು.
1ನೇ ವಾರ್ಡ್‌ಗೆ ಜೆಡಿಎಸ್‌ನಿಂದ ಎಸ್.ಎನ್.ಸುನೀತ. 2ನೇ ವಾರ್ಡ್‌ಗೆ ಸರ್ವೋದಯ ಕರ್ನಾಟಕದಿಂದ ಎಂ.ಆರ್.ಶೋಭ, ಜೆಡಿಎಸ್‌ನಿಂದ ಅನ್ನಪೂರ್ಣ.

3ನೇ ವಾರ್ಡ್‌ಗೆ ಕಾಂಗ್ರೆಸ್‌ನಿಂದ ಸಿ.ಲವಕುಮಾರ್. 4ನೇ ವಾರ್ಡ್‌ಗೆ ಜೆಡಿಎಸ್‌ನಿಂದ ಏಜಾಜ್‌ಆಲಿಖಾನ್, ಬಿಜೆಪಿಯಿಂದ ಸೈಯದ್ ಇಲಾಯಾಸ್, ಸರ್ವೋದಯ ಕರ್ನಾಟಕದಿಂದ ಅತ್ತಿವುಲ್ಲಾಖಾನ್, ಜಮಾಲುದ್ದೀನ್. 5ನೇವಾರ್ಡ್‌ಗೆ ಜೆಡಿಎಸ್‌ನಿಂದ ಎಂ.ಭವಾನಿ. 6ನೇ ವಾರ್ಡ್‌ಗೆ ಜೆಡಿಎಸ್‌ನಿಂದ ಕೆ.ಎಸ್.ಸುನೀತ. 7ನೇ ವಾರ್ಡ್‌ಗೆ ಸರ್ವೋದಯ ಕರ್ನಾಟಕದಿಂದ ಬಿ.ಕೃಷ್ಣ. 8ನೇ ವಾರ್ಡ್‌ಗೆ ಸರ್ವೋದಯ ಕರ್ನಾಟಕದಿಂದ ಪಿ.ಸಂತೋಷ್, ಎಸ್.ಜಯರಾಮ್ ಬಿಜೆಪಿಯಿಂದ ಸೋಮಶೇಖರಚಾರಿ, ಪಕ್ಷೇತರರಾಗಿ ಚಂದ್ರು, ಲಕ್ಷ್ಮಮ್ಮ, ಬಿ.ರಮೇಶ್. 9ನೇ ವಾರ್ಡ್‌ಗೆ ಸರ್ವೋದಯ ಕರ್ನಾಟಕದಿಂದ ಪಾರ್ವತಿ, ಜೆಡಿಎಸ್‌ನಿಂದ ಲಕ್ಷ್ಮಿದೇವಿ, ಪಕ್ಷೇತರರಾಗಿ

ದೇವಿಕಾ. 10ನೇ ವಾರ್ಡ್‌ಗೆ ಜೆಡಿಎಸ್‌ನಿಂದ ಎ.ಆರ್.ನಾಸರ್, ಎಸ್.ಧನಂಜಯ, ಪಕ್ಷೇತರಾಗಿ ಎಸ್.ಧನಂಜಯ. 11ನೇ ವಾರ್ಡ್‌ಗೆ ಜೆಡಿಎಸ್‌ನಿಂದ ಎಚ್.ವಿ.ರಾಧಮಣಿ, ಬಿಜೆಪಿಯಿಂದ ಆರ್.ಅಂಬಿಕಾ. 12ನೇ ವಾರ್ಡ್‌ಗೆ ಬಿಜೆಪಿಯಿಂದ ಎಸ್.ಮಂಜುನಾಥ್, ಜೆಡಿಎಸ್‌ನಿಂದ ಎಂ.ಅನುಸೂಯ, ಪಕ್ಷೇತರಾಗಿ ಆರ್.ಚನ್ನಕೇಶವ. 13ನೇ ವಾರ್ಡ್‌ಗೆ ಸರ್ವೋದಯ ಕರ್ನಾಟಕದಿಂದ ಕೆ.ನಾಗರಾಜು, ಜೆಡಿಎಸ್‌ನಿಂದ ಎಸ್.ರಾಚಯ್ಯ ಪಕ್ಷೇತರಾಗಿ ಡಿ.ಗಣೇಶ್, ಸಿ.ಶಿವಯ್ಯ, ಪಿ.ಮಂಜುನಾಥ್, ಪಿ.ಎಸ್.ಮೋಹನ,

ಡಿ.ಚಂದ್ರಶೇಖರ್. 14ನೇ ವಾರ್ಡ್‌ಗೆ ಸರ್ವೋದಯ ಕರ್ನಾಟಕದಿಂದ ಲೀಲಮ್ಮ, ಜೆಡಿಎಸ್‌ನಿಂದ ಎಸ್.ರಾಜಮ್ಮ. 15ನೇ ವಾರ್ಡ್‌ಗೆ ಸರ್ವೋದಯ ಕರ್ನಾಟಕದಿಂದ ಎಸ್.ಸಿದ್ದೇಗೌಡ, ಜೆಡಿಎಸ್‌ನಿಂದ ಆರ್.ಸೋಮಶೇಖರ್, ಬಿಜೆಪಿಯಿಂದ ನಜೀರ್‌ಅಹಮ್ಮದ್. 16ನೇ ವಾರ್ಡ್‌ಗೆ ಸರ್ವೋದಯ ಕರ್ನಾಟಕದಿಂದ ಶಿವಕುಮಾರ್, ಜೆಡಿಎಸ್‌ನಿಂದ ಎಂ.ಸೋಮಶೇಖರ್. 17ನೇ ವಾರ್ಡ್‌ಗೆ ಕಾಂಗ್ರೆಸ್‌ನಿಂದ ಲಕ್ಷ್ಮಮ್ಮ, ಜೆಡಿಎಸ್‌ನಿಂದ ತಾಯಮ್ಮ. 18ನೇ ವಾರ್ಡ್‌ಗೆ ಸರ್ವೋದಯ ಕರ್ನಾಟಕದಿಂದ ಎಚ್.ಪಿ.ಸತೀಶ್‌ಕುಮಾರ್, ಜೆಡಿಎಸ್‌ನಿಂದ ಯೋಗೇಶ್ ಅವರುಗಳು ನಾಮಪತ್ರ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT