ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಲ್ಲಾಪಿಲ್ಲಿ

Last Updated 9 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಆರೋಗ್ಯ ಕಾಳಜಿಗೆ ಸಂಬಂಧಿಸಿದ ಉತ್ಪನ್ನಗಳ ತಯಾರಿಕೆಯಲ್ಲಿ ಜಾಗತಿಕ ಮುಂದಾಳು ಎನಿಸಿರುವ ಮೊನವಿಯ್ ತನ್ನ ಪ್ರೊಟೀನ್ ಪೂರಕ ಉತ್ಪನ್ನವಾಗಿರುವ `ಆರ್‌ವಿಎಲ್ ಪ್ರೊಟೀನ್ ಪೌಡರ್~ನ್ನು ಬಿಡುಗಡೆ ಮಾಡಿದೆ.

ತೂಕದ ಬಗ್ಗೆ ಹೆಚ್ಚು ಕಾಳಜಿ ಇರುವವರನ್ನು ಗುರಿಯಾಗಿರಿಸಿಕೊಂಡು ಆರ್‌ವಿಎಲ್ ಪ್ರೊಟೀನ್ ಪೌಡರ್ ಅನ್ನು ಬಿಡುಗಡೆಗೊಳಿಸಲಾಗಿದೆ. ಎಲ್ಲಾ ರೀತಿಯ ಪೌಷ್ಟಿಕಾಂಶಗಳನ್ನು ಹೊಂದಿರುವ ಇದು ಅಂದವಾದ ಟಿನ್‌ನಲ್ಲಿ ಬರಲಿದೆ. ಹಾಲು ಇಲ್ಲವೇ ನೀರಿನಲ್ಲಿ ಬೆರೆಸಿ ಸೇವಿಸಬೇಕು.

ಸೋಯಾ ಪ್ರೊಟೀನ್ ಹಾಗೂ ಕ್ಯಾಲ್ಸಿಯಂ ಅನ್ನು ಒಳಗೊಂಡಿರುವ ಈ ಪೌಡರ್ ಕ್ಯಾಲ್ಸಿಯಂ ಮತ್ತಿತರ ಖನಿಜಾಂಶದ ತೊಂದರೆಗಳಿಂದ ಮೂಳೆ ತೊಂದರೆ ಅನುಭವಿಸುತ್ತಿರುವವರಿಗೆ ಸಹಕಾರಿ ಆಗಲಿದೆ. 

ಇದು ನೈಸರ್ಗಿಕ ಉತ್ಪನ್ನವಾಗಿದ್ದು ಕೃತಕವಾದ ಫ್ಲೇವರ್ ಹಾಗೂ ಸಿಂಥಟಿಕ್ ಸಂರಕ್ಷಕಗಳನ್ನು ಬಳಸಲಾಗಿಲ್ಲ ಎಂದು ಮೊನವಿಯ್‌ನ ದಕ್ಷಿಣ ಏಷ್ಯಾ ವಿಭಾಗದ ಅಧ್ಯಕ್ಷ ರಾಜ್ ಲಿಂಗಮ್ ಹೇಳಿಕೊಂಡಿದ್ದಾರೆ.

ಸ್ವಾದಿಷ್ಟ ಗಟ್ಟಿ ಮೊಸರು
`ಸ್ವಾಸ್ಥ್ಯಮಯ ತಿನ್ನಿ, ಓಳಿತನ್ನೇ ಯೋಚಿಸಿ~ ಎಂಬ ಸಾಲಿನೊಂದಿಗೆ ಬ್ರಿಟಾನಿಯಾ ಸಂಸ್ಥೆ ಆರೋಗ್ಯಪೂರ್ಣ ತಿನಿಸಿನ ಸಾಲಿಗೆ ಗಟ್ಟಿ ಮೊಸರನ್ನು ಸೇರ್ಪಡೆಗೊಳಿಸಿದೆ.
ಸ್ಟ್ರಾಬೆರ‌್ರಿ, ಮಾವು ಹಾಗೂ ವೆನಿಲಾ ಸ್ವಾದಗಳಲ್ಲಿ ಮೂರು ಬಗೆಯ ಯೋಗರ್ಟ್ ಅನ್ನು ಪರಿಚಯಿಸಿದೆ.

ತಾಜಾ ಮೊಸರು ಹಾಗೂ ಹಣ್ಣಿನ ತಿರುಳಿನೊಂದಿಗೆ ಈ ಮೊಸರನ್ನು ಸಿದ್ಧಪಡಿಲಾಗಿದೆ. 15 ರೂಪಾಯಿಗೆ ಎಲ್ಲ ಮಳಿಗೆಗಳಲ್ಲಿಯೂ ಈ ಮೊಸರು ಲಭ್ಯ  ಇವೆ.

ಕಾಲಿದಾರ್ ಸಂಗ್ರಹ
ಬೀಬಾ ತನ್ನ ಹೊಸ ಮಳೆಗಾಲ ಹಾಗೂ ಚಳಿಗಾಲದ ಸಂಗ್ರಹವನ್ನು ಕಾಲಿದಾರ್‌ನ ಸ್ಫೂರ್ತಿಯೊಂದಿಗೆ ಆಚರಿಸುತ್ತಿದೆ.

ಸೌಂದರ್ಯ ಮತ್ತು ನೋಟದಿಂದ ಸ್ಫೂರ್ತಿಯನ್ನು ಪಡೆದಿರುವ ಭಾರತದ ಪ್ರಮುಖ ಬಟ್ಟೆಯ ಬ್ರಾಂಡ್-ಬೀಬಾ ತನ್ನ ಹೊಸ ಕಾಲಿದಾರ್ ಸಂಗ್ರಹವನ್ನು ಮುಂಬರುವ ಚಳಿಗಾಲದ ಅವಧಿಗೆ ಪರಿಚಯಿಸುತ್ತಿದೆ.

ಈ ಸಂಗ್ರಹವು ಸಾಂಪ್ರದಾಯಿಕ ಶೈಲಿಯೊಂದಿಗೆ ನೇಯಲಾದ ಬಟ್ಟೆಗಳಿಂದ ಕೂಡಿದೆ. ಬೀಬಾದ ಸಹಿಯು ಸಮಕಾಲೀನ ಶೈಲಿಯನ್ನು ಹೊಂದಿದ್ದು, ಇದು ಕಾಲಿದಾರ್‌ಗಳಿಗೆ ಆಧುನಿಕ ತಿರುವು ನೀಡಲಿದೆ.

ಮನಮೋಹಕ ಬಣ್ಣಗಳು, ಬೀಬಾ ಕಾಲಿದಾರ್ ಸಂಗ್ರಹದ ಲಕ್ಷಣವನ್ನು ಚಾಂದೇರಿ, ಜಾರ್ಜೆಟ್, ನೆಟ್, ಹತ್ತಿ ಮತ್ತು ರೇಷ್ಮೆಗಳಲ್ಲಿ ಹೊರತಂದಿದ್ದು ಎಲ್ಲವೂ ಕಾಲಿಯ (ಅಲಂಕಾರ) ಮಾಂತ್ರಿಕ ಬಳಕೆಯನ್ನು ಹೊಂದಿದೆ.

ಹೊಸ ಬೀಬಾ ಕಾಲಿದಾರ್ ಸಂಗ್ರಹವು ಮಹಿಳೆಯನ್ನು ಅತ್ಯಾಧುನಿಕವಾಗಿ ಕಾಣುವಂತೆ ಮಾಡಲಿದ್ದು, ಈ ದಿರಿಸು ಭಾರತದಾದ್ಯಂತ ಎಲ್ಲಾ ಬೀಬಾ ಮಳಿಗೆಗಳಲ್ಲಿ ಲಭ್ಯ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT