ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಲ್ಲಾಪಿಲ್ಲಿ

Last Updated 14 ಜೂನ್ 2012, 19:30 IST
ಅಕ್ಷರ ಗಾತ್ರ

ಮಾರ್ಬೋನೈಟ್ ಸ್ಲ್ಯಾಬ್‌ಟೈಲ್
ಟೈಲ್ ಉತ್ಪಾದಕ ಸಂಸ್ಥೆ ಎಚ್ ಅಂಡ್ ಆರ್ ಜಾನ್ಸನ್ ಕಂಪೆನಿಯು  ಸಿಲಿಕಾ ಘಟಕದಿಂದ ಮಾರ್ಬೋನೈಟ್ ಸ್ಲ್ಯಾಬ್‌ಗಳ ಉತ್ಪಾದನೆ ಆರಂಭಿಸಿದೆ. ರಾಜ್ಯದಲ್ಲೂ ಇವುಗಳು ಲಭ್ಯವಿವೆ.

ಜೂನ್ ಅಂತ್ಯದ ವೇಳೆಗೆ ರಾಜ್ಯದ ಪ್ರಮುಖ ರೀಟೇಲ್ ವ್ಯಾಪಾರ ಮಳಿಗೆಗಳಲ್ಲಿ ಇವು ದೊರೆಯಲಿವೆ ಸ್ಲ್ಯಾಬ್‌ಗಳನ್ನು ವಿಶಿಷ್ಟ ಕಲ್ಲುಗಳು, ಬಂಡೆ ಮತ್ತು ಇಟಲಿ ಮಾರ್ಬಲ್‌ಗಳಲ್ಲಿ ತಯಾರಿಸಲಾಗಿದೆ. ನೆಲದಲ್ಲಿ ಕಡಿಮೆ ಜಾಯಿಂಟ್‌ಗಳಿರುವಂತೆ ಇವನ್ನು ರೂಪಿಸಲಾಗಿದೆ ಎಂದು ಕಂಪೆನಿ ಹೇಳಿಕೊಂಡಿದೆ. ಒಂದು ಅಡಿ ಸ್ಲ್ಯಾಬ್‌ಗೆ 155 ರಿಂದ 190 ರೂಪಾಯಿವರೆಗಿದೆ. ಮಾಹಿತಿಗೆ: 95946 52255.

ನೂತನ ಹವಾನಿಯಂತ್ರಕ

ಉಷಾ ಇಂಟರ್‌ನ್ಯಾಷನಲ್ ಕಂಪೆನಿಯು ಉಷಾ ಹನಿವೆಲ್ ಬ್ರಾಂಡ್ ಹೆಸರಿನಡಿ ಬಾಷ್ಪೀಕರಣಗೊಳಿಸುವ ಕೊಠಡಿ ಹವಾನಿಯಂತ್ರಕವನ್ನು ಬಿಡುಗಡೆ ಮಾಡಿದೆ.
ಈ ಹವಾನಿಯಂತ್ರಕವು 15, 25, 40 ಹಾಗೂ 55 ಲೀಟರ್ ನೀರಿನ ಟ್ಯಾಂಕ್ ಸಾಮರ್ಥ್ಯದ ಶ್ರೇಣಿಗಳಲ್ಲಿ ನಿರ್ಮಿಸಲಾಗಿದೆ. ಮಿತ ವಿದ್ಯುತ್ ಬಳಸುವಂತೆ ರೂಪಿಸಲಾಗಿದೆ.

ಇವು ಇನ್ವರ್ಟರ್‌ಗಳಿಂದ ಕೆಲಸ ಮಾಡುತ್ತವೆ. ಕೆಲವು ಮಾಡಲ್‌ಗಳು ಎಲ್. ಸಿ. ಡಿ ಡಿಸ್‌ಪ್ಲೇ ಹಾಗೂ ರಿಮೋಟ್ ಕಂಟ್ರೋಲನ್ನು ಹೊಂದಿರುತ್ತವೆ ಎಂದು ಕಂಪೆನಿ ತಿಳಿಸಿದೆ.
ಇವು 8499 ರೂಪಾಯಿಯಿಂದ 10,999 ರೂಪಾಯಿವರೆಗೆ ಲಭ್ಯವಿದ್ದು, ಹೆವಿ ಡ್ಯೂಟಿ ಮಾಡಲ್‌ನ ಬೆಲೆ 24,999 ರೂ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT