ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಸ್: ಡ್ರಾಕ್ಕೆ ತೃಪ್ತಿಪಟ್ಟ ವಿಶಿ

Last Updated 18 ಜನವರಿ 2011, 19:30 IST
ಅಕ್ಷರ ಗಾತ್ರ

ವಿಕ್ ಆನ್ ಜೀ, ಹಾಲೆಂಡ್ (ಪಿಟಿಐ): ವಿಶ್ವನಾಥನ್ ಆನಂದ್ ಅವರು ಇಲ್ಲಿ ನಡೆಯುತ್ತಿರುವ ಟಾಟಾ ಸ್ಟೀಲ್ ಚೆಸ್ ಟೂರ್ನಿಯ ಮೂರನೇ ಸುತ್ತಿನ ಪಂದ್ಯದಲ್ಲಿ ಸ್ಥಳೀಯ ಆಟಗಾರ ಎರ್ವಿನ್ ಲಾ ಆಮಿ ಜೊತೆ ಡ್ರಾಕ್ಕೆ ತೃಪ್ತಿಪಟ್ಟುಕೊಂಡರು.

ಟೂರ್ನಿಯಲ್ಲಿ ಸತತ ಎರಡನೇ ಡ್ರಾ ಪಡೆದ ‘ವಿಶಿ’ ಒಟ್ಟು ಎರಡು ಪಾಯಿಂಟ್ ಹೊಂದಿದ್ದಾರೆ. ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಬಿಳಿ ಕಾಯಿಗಳೊಂದಿಗೆ ಆಡಲಿರುವ ಭಾರತದ ಗ್ರ್ಯಾಂಡ್‌ಮಾಸ್ಟರ್ ಚೀನಾದ ವಾಂಗ್ ಹಾವೊ ಅವರ ಸವಾಲನ್ನು ಎದುರಿಸಲಿರುವರು,

‘ಎ’ ಗುಂಪಿನ ಮೂರನೇ ಸುತ್ತಿನ ಪಂದ್ಯದಲ್ಲಿ ಅಚ್ಚರಿಯ ಫಲಿತಾಂಶವೊಂದು ಹೊರಹೊಮ್ಮಿತು. ಹಾಲೆಂಡ್‌ನ ಅನೀಶ್ ಗಿರಿ ಅವರು ವಿಶ್ವದ ಅಗ್ರ ರ್ಯಾಂಕಿಂಗ್‌ನ ಆಟಗಾರ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್‌ಗೆ ಆಘಾತ ನೀಡಿದರು. ನೇಪಾಳ ಮೂಲದ ಗಿರಿ ಕೇವಲ 22 ನಡೆಗಳಲ್ಲಿ ಗೆಲುವು ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT