ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಸ್‌: ಮೇರಿ ಆ್ಯನ್‌ಗೆ ಪ್ರಶಸ್ತಿ

Last Updated 5 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಕೋಲ್ಕತ್ತ (ಪಿಟಿಐ): ಸ್ಥಳೀಯ ಆಟಗಾರ್ತಿ ಮೇರಿ ಆ್ಯನ್‌ ಗೋಮ್ಸ್‌ ಇಲ್ಲಿ ನಡೆದ 40ನೇ ರಾಷ್ಟ್ರೀಯ ಪ್ರೀಮಿಯರ್‌ ಚೆಸ್‌ ಟೂರ್ನಿಯಲ್ಲಿ ಚಾಂಪಿಯನ್‌ ಆದರು. ಈ ಮೂಲಕ ಹ್ಯಾಟ್ರಿಕ್‌ ಪ್ರಶಸ್ತಿ ಜಯಿಸಿದ ಸಾಧನೆಗೆ ಪಾತ್ರರಾದರು.

ತಾನಿಯಾ ಸಚ್ಚದೇವ್‌ ಹಾಗೂ ಸೌಮ್ಯಾ ಸ್ವಾಮಿನಾಥನ್‌ ಅವರನ್ನು ಹಿಂದಿಕ್ಕಿ ಮೇರಿ ಈ ಸಾಧನೆ ಮಾಡಿದರು. ಅಗ್ರ ಶ್ರೇಯಾಂಕದ ತಾನಿಯಾ ಎರಡನೇ ಸ್ಥಾನ ಪಡೆದರು. ಬುಧವಾರದವರೆಗೆ ಮುನ್ನಡೆ ಸಾಧಿಸಿದ್ದ ಪುಣೆಯ ಸೌಮ್ಯಾ ಅಂತಿಮ ದಿನ ಪದ್ಮಿನಿ ರಾವತ್‌ಗೆ ಶರಣಾದರು.

ಮಹಿಳಾ ಗ್ರ್ಯಾಂಡ್‌ಮಾಸ್ಟರ್‌ ಮೇರಿ, ತಾನಿಯಾ ಹಾಗೂ ಸೌಮ್ಯಾ ತಲಾ 7.5 ಪಾಯಿಂಟ್‌ ಹೊಂದಿದ್ದರು. ಆದರೆ ಟೈ ಬ್ರೇಕರ್‌ ಸ್ಕೋರ್‌ ಆಧಾರದ ಮೇಲೆ ಮೇರಿ ಅಗ್ರಸ್ಥಾನ ಪಡೆದರು. ಅಷ್ಟು ಮಾತ್ರವಲ್ಲದೇ. 1.75 ಲಕ್ಷ ರೂಪಾಯಿ ಬಹುಮಾನ ಪಡೆದರು. ಅವರು ಅಂತಿಮ ದಿನ ಗೋವಾದ 11ರ ಹರೆಯದ ಇವಾನಾ ಮರಿಯಾ ಫರ್ಟಡೊ ಎದುರು ಡ್ರಾ ಸಾಧಿಸಿದರು.

ಎಸ್‌.ವಿಜಯಲಕ್ಷ್ಮಿ ಅವರು 1998ರಿಂದ 2002ರವರೆಗೆ ಸತತವಾಗಿ ಚಾಂಪಿಯನ್‌ ಆಗಿದ್ದರು. ಅವರ ಬಳಿಕ ಮೇರಿ ಸತತ ಮೂರು ಬಾರಿ ಪ್ರಶಸ್ತಿ ಗೆದ್ದ ಸಾಧನೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT