ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಛತ್ತೀಸಗಡ: ಬಿಜೆಪಿಗೆ ಹ್ಯಾಟ್ರಿಕ್‌ ಜಯ

Last Updated 8 ಡಿಸೆಂಬರ್ 2013, 20:00 IST
ಅಕ್ಷರ ಗಾತ್ರ

ರಾಯಪುರ (ಐಎಎನ್‌ಎಸ್‌): ಮತಗಳ ಎಣಿಕೆ ಕಾರ್ಯದ ಕೊನೆಯ ಕ್ಷಣದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ತೀವ್ರ ಸ್ಪರ್ಧೆ ಕಂಡುಬಂದರೂ ಕೊನೆಗೂ ಈ ಕದನದಲ್ಲಿ ಆಡಳಿತಾರೂಢ ಬಿಜೆಪಿಯೇ ಮೇಲುಗೈ ಸಾಧಿಸಿದ್ದು ಮೂರನೆಯ ಬಾರಿಗೂ ಅಧಿಕಾರದ ಗದ್ದುಗೆಗೆ ಏರಿದೆ.

90 ಸ್ಥಾನಗಳ ಛತ್ತೀಸಗಡ ವಿಧಾನ­ಸಭೆಗೆ 49 ಸ್ಥಾನಗಳನ್ನು ಗೆಲ್ಲುವ ಮೂಲಕ ಸರಳ ಬಹುಮತ ಸಾಧಿಸಿರುವ ಕಮಲ ಪಾಳಯ ಹ್ಯಾಟ್ರಿಕ್‌ ಜಯ ಸಾಧಿ­ಸಿ­ದ ಸಂತಸದಲ್ಲಿದ್ದರೆ ಅಧಿಕಾರಕ್ಕೆ ಬರಲು ಹೋರಾಟ ನಡೆಸಿದ ಕಾಂಗ್ರೆಸ್‌ 39 ಸ್ಥಾನ ಗೆದ್ದು ಮತ್ತೆ ವಿರೋಧ ಪಕ್ಷದಲ್ಲಿ ಕೂರಬೇಕಾಗಿದೆ.

ಕಳೆದ ಬಾರಿ ಎರಡು ಸ್ಥಾನಗಳನ್ನು ಗೆದ್ದಿದ್ದ ಬಿಎಸ್‌ಪಿ ಈ ಬಾರಿ ಒಂದೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಿದ್ದು ಮತ್ತೊಂದು ಸ್ಥಾನ ಬಿಜೆಪಿ ಬಂಡಾಯ ಅಭ್ಯರ್ಥಿಯ ಪಾಲಾಗಿದೆ.

2003 ಹಾಗೂ 2008ರ ವಿಧಾನ­ಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ವಿರುದ್ಧ ಜಯ ಗಳಿಸಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದ   ಬಿಜೆಪಿಯ ಡಾ. ರಮಣ ಸಿಂಗ್‌ ಇದೀಗ ಮೂರನೆಯ ಬಾರಿಗೂ ಮುಖ್ಯಮಂತ್ರಿ ಯಾಗುವುದು ಬಹುತೇಕ ಖಚಿತವಾಗಿದೆ.

ರಾಜನಂ ನಂದಗಾವ್‌ ಕ್ಷೇತ್ರದಲ್ಲಿ ರಮಣ ಸಿಂಗ್‌ ಕಾಂಗ್ರೆಸ್‌ನ ಅಲ್ಕಾ ಉದಯ್‌ ಮದ್ಲಿಯಾರ್‌ ಅವರನ್ನು ಭಾರಿ ಅಂತರದಿಂದ ಪರಾಭವ­ಗೊಳಿಸಿದ್ದಾರೆ.
ಆದರೆ ರಮಣ ಸಿಂಗ್‌ ಸಂಪುಟದ ಗೃಹ ಸಚಿವ ನನ್ಕರಂ ಕನ್ವಾರ್‌ ಸೇರಿದಂತೆ ಐವರು ಸಚಿವರು ಸೋಲುಂಡಿದ್ದರೆ ಕಾಂಗ್ರೆಸ್‌ನ ಹಿರಿಯ ನಾಯಕ ಅಜೀತ್‌ ಜೋಗಿ ಅವರ ಪುತ್ರ ಅಮಿತ್‌ ಮಾರ್ವಾದೆಯಲ್ಲಿ ಪತ್ನಿ ಡಾ, ರೇಣು ಜೋಗಿ ಕೋಟಾದಲ್ಲಿ ಗೆಲುವು ಸಾಧಿಸಿದ್ದಾರೆ.

ಬಸ್ತರ್‌: ಕಾಂಗ್ರೆಸ್‌ಗೆ ಬಲ
ಮಾವೊವಾದಿಗಳ ಉಪಟಳ, ಕಾನೂನು ಸುವ್ಯವಸ್ಥೆ ನಿಯತ್ರಿಸು­ವಲ್ಲಿ ರಮಣ ಸಿಂಗ್‌ ಸರ್ಕಾರ ಎಡವಿರುವ ಅಂಶಗಳು ಬಸ್ತರ್‌ ಭಾಗ­­ದಲ್ಲಿ ಬಿಜೆಪಿ ಹಿನ್ನಡೆಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದ್ದು ಇಲ್ಲಿ  ಕಾಂಗ್ರೆಸ್‌ ಶಕ್ತಿ ಬಲಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT