ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಛತ್ರಿಯ ಮೇಲೆ ಬರೆದ `ಪ್ರೀತಿ'ಯ ಮಳೆ

Last Updated 13 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಹೊನ್ನಾವರ: ನವಿರಾದ ಭಾವನೆ `ಪ್ರೀತಿ'ಗೆ ದಾಖಲೆ ಎಂಬ ರೋಮಾಂಚನದ ಸಿಂಚನಗೈಯ್ಯುವುದು ಕವಲಕ್ಕಿಯಲ್ಲಿ ಬಿಎಸ್‌ಎನ್‌ಎಲ್ ಉದ್ಯೋಗಿರುವ ಹರೀಶ ಕೊಂಡಾಕುಳಿ ಅವರ ಹವ್ಯಾಸ.

ದಾಖಲೆಗಾಗಿ ಪ್ರೇಮ ಪತ್ರ ಬರೆಯುವುದನ್ನು ರೂಢಿಸಿಕೊಂಡಿರುವ ಇವರು ಈ ಬಾರಿ ಛತ್ರಿಯ ಮೇಲೆ ಅಕ್ಷರದ ಮೂಲಕ ಪ್ರೀತಿಯ ಮಳೆಗರೆದಿದ್ದಾರೆ.

ಅಭಿಸಾರಿಕಾ ಎಂಬ ಕಲ್ಪನೆಯ ನೀರೆಗೆ ಬರೆದಿರುವ ಈ ಪತ್ರವು ಪ್ರೀತಿಯ ಹಲವು ಆಯಾಮಗಳನ್ನು ಸುತ್ತುತ್ತ ಮುಂದೆ ಸಾಗಿ ಕೊನೆಗೆ `ನಿನ್ನ ಹೃದಯದ ಹುಡುಗ' ಎಂಬ ಸಾಲಿನೊಂದಿಗೆ ಕೊನೆಗೊಳ್ಳುತ್ತದೆ. ಸರಿ ಸುಮಾರು 5,500 ಶಬ್ದಗಳನ್ನು ಒಳಗೊಂಡ ಒಟ್ಟು 62 ಸಾಲುಗಳಲ್ಲಿ ಪ್ರೇಮಿಯೊಬ್ಬನ ಪ್ರೀತಿಯ ಮಳೆ ಸುರಿಸಿದ್ದಾರೆ.

`ದಾಖಲೆಗಾಗಿ ಪ್ರೇಮಪತ್ರ ಬರೆಯುತ್ತೇನೆ' ಎನ್ನುವ ವಿವಾಹಿತ ಹರೀಶ ಹಿಂದೆಯೂ ಎರಡು ಬಾರಿ ಇಂಥ ಸಾಹಸ ಮಾಡಿದ್ದರು; ಕಾಗದದ ಮೇಲೆ 143 ಪುಟಗಳ ಒಂದು ಸುದೀರ್ಘ ಪ್ರೇಮಪತ್ರ ಹಾಗೂ ನಂತರದಲ್ಲಿ ಸೀರೆಯ ಮೇಲಿನ ಇವರ ಒಲವಿನ ಓಲೆ ಗಮನ ಸೆಳೆದಿತ್ತು.

`ಇಹ ಪರದ ಬದುಕಿನ ಅಗತ್ಯದ ಪ್ರತಿಬಿಂಬದಂತಿರುವ ಛತ್ರಿ, ಹುಡುಗಿಯರ ಆಪ್ತವಸ್ತುವಾಗಿದ್ದು ಅದರಲ್ಲಿರುವ 8 ಕಡ್ಡಿಗಳು 8 ದಿಕ್ಕುಗಳನ್ನು ಸೂಚಿಸುತ್ತ ಪ್ರೀತಿಯೆಂಬ ಭಾವನೆಯ ವಿಶ್ವರೂಪ  ಪ್ರತಿನಿಧಿಸುತ್ತವೆ. ಆಕಾಶದ ಅನಂತತೆ  ಸಾರುವ ನೀಲಿ ಬಣ್ಣದ ಛತ್ರಿಯನ್ನು ಪ್ರೇಮ ಪತ್ರ ಬರೆಯಲು ಆಯ್ದುಕೊಂಡ್ದ್ದಿದೇನೆ' ಎನ್ನುತ್ತಾರೆ ಈ `ಶೃಂಗಾರ' ಛತ್ರಿಯ ಇನಿಯ ಹರೀಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT