ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಛಲವಾದಿ ಸಮಾವೇಶಕ್ಕೆ ಬಸ್ ಸೌಲಭ್ಯ

Last Updated 8 ಜೂನ್ 2011, 9:35 IST
ಅಕ್ಷರ ಗಾತ್ರ

ಕೆ.ಆರ್.ನಗರ:ಬೆಂಗಳೂರಿನಲ್ಲಿ ಜೂನ್.10ರಂದು ನಡೆಯುವ ರಾಜ್ಯಮಟ್ಟದ ಛಲವಾದಿ 2ನೇ ಮಹಾ ಸಮಾವೇಶಕ್ಕೆ ಮೈಸೂರು ಜಿಲ್ಲೆಯಿಂದ 200 ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ~ ಎಂದು ಸಂಘದ ಜಿಲ್ಲಾಧ್ಯಕ್ಷ ಎಂ.ಹಂಸರಾಜು ಮಂಗಳವಾರ ಹೇಳಿದರು.

ತಾಲ್ಲೂಕಿನ ಸಮಾಜದ ಬಂಧುಗಳು ತೆರಳಲು ಅಚ್ಚುತಾ ಸ್ನೇಹ ಬಳಗದ ವತಿಯಿಂದ 25 ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಹಿಂದುಳಿದ ದಲಿತ ಬಲಗೈ ಜನಾಂಗವನ್ನು ಸಂಘಟನೆ ಮಾಡುವ ದೃಷ್ಠಿಯಿಂದ ಛಲವಾದಿ ಸಮಾವೇಶ ರೂಪಿಸಲಾಗಿದೆ  ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬೆಂಗಳೂರಿನ ಕಂಠೀರವ ಒಳ ಕ್ರೀಡಾಂಗಣದಲ್ಲಿ ಜೂನ್.10ರಂದು ಬೆಳಿಗ್ಗೆ 11.30ಕ್ಕೆ ಏರ್ಪಡಿಸಿರುವ 2ನೇ ಮಹಾ ಸಮಾವೇಶ ಮತ್ತು ಛಲವಾದಿ ಭವನ ಅಡಿಗಲ್ಲು ಸಮಾರಂಭಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ, ಕೇಂದ್ರ ಕಾರ್ಮಿಕ ಸಚಿವ ಡಾ.ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, ಕೇಂದ್ರ ರಾಜ್ಯ ರೈಲ್ವೆ ಸಚಿವ ಕೆ.ಎಚ್.ಮುನಿ ಯಪ್ಪ ಇತರರು ಭಾಗವಹಿಸುವರು. 

ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಾಜಯ್ಯ, ತಾಲ್ಲೂಕು ಅಧ್ಯಕ್ಷ ದಮ್ಮನಹಳ್ಳಿ ಕೃಷ್ಣಪ್ಪ, ತಾಲ್ಲೂಕು ಮಹಿಳಾ ಅಧ್ಯಕ್ಷೆ ಶಾಂತಿ, ಅಚ್ಚುತಾ ಸ್ನೇಹ ಬಳಗದ ಅಧ್ಯಕ್ಷ ತಮ್ಮಣ್ಣ, ನಂಜಯ್ಯ, ಸೀತಾರಾಮು ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

 ಸಮಾವೇಶದಲ್ಲಿ ಪಾಲ್ಗೊಳ್ಳಿ
ಪಿರಿಯಾಪಟ್ಟಣ: ರಾಜ್ಯಮಟ್ಟದ ಛಲವಾದಿ ಸಮಾವೇಶಕ್ಕೆ ಮೈಸೂರು ಜಿಲ್ಲೆಯಿಂದ ತೆರಳುವವರಿಗೆ ವಾಹನ ಸೌಲಭ್ಯ ಕಲ್ಪಿಸಲಾಗಿದೆ ಎಂದು ಜಿಲ್ಲಾ ಛಲವಾದಿ ಮಹಾ ಸಭಾದ ಘಟಕದ ಜಿಲ್ಲಾಧ್ಯಕ್ಷ ಹಂಸರಾಜ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು

ಈ ಸಂದರ್ಭದಲ್ಲಿ ಹುಣಸೂರು ಘಟಕದ ಅಧ್ಯಕ್ಷ ಗೋವಿಂದರಾಜ್, ಪಿರಿಯಾಪಟ್ಟಣ ಘಟಕದ ಅಧ್ಯಕ್ಷ ಪಿ.ಪಿ.ಮಹದೇವ್, ಪ್ರಧಾನ ಕಾರ್ಯದರ್ಶಿ ಎಚ್.ಡಿ.ರಮೇಶ್ ಹಾಜರಿದ್ದರು.  

ಸಮ್ಮೇಳನ ಯಶಸ್ಸಿಗೆ ಮನವಿ
ನಂಜನಗೂಡು: ಬೆಂಗಳೂರಿನಲ್ಲಿ ಶುಕ್ರವಾರ (ಜೂನ್ 10) ಹಮ್ಮಿ ಕೊಂಡಿರುವ ರಾಜ್ಯ ಛಲವಾದಿ ಜನಾಂಗದ ಎರಡನೇ ಮಹಾ ಸಮಾವೇಶಕ್ಕೆ ತಾಲ್ಲೂಕಿನಿಂದ 10 ಸಾವಿರ ಜನರನ್ನು ಕರೆತರುವ ಮೂಲಕ ಸಮಾವೇಶವನ್ನು ಯಶಸ್ವಿ ಗೊಳಿಸ ಬೇಕೆಂದು ಸಂಘಟನೆಯ ಜಿಲ್ಲಾ ಅಧ್ಯಕ್ಷ ಹಂಸರಾಜ ಮನವಿ ಮಾಡಿದ್ದಾರೆ.

ಸಂಘಟನೆಯ ತಾಲ್ಲೂಕು ಅಧ್ಯಕ್ಷ ನಾಗಭೂಷಣ, ಪುರಸಭೆ ಸದಸ್ಯ ದೊಡ್ಡಮಾದಯ್ಯ, ಜೆಡಿಎಸ್ ಮುಖಂಡ ಎನ್.ಕೇಶವಮೂರ್ತಿ, ಮರಿಸ್ವಾಮಿ, ಸ್ವಾಮಿ, ಯಶವಂತ, ಸಿದ್ದರಾಜು, ಉಮೇಶ್‌ರಾಜು, ಸಿದ್ದಪ್ಪ ಮತ್ತಿತರರು ಇದ್ದರು.

ಸಮಾವೇಶಕ್ಕೆ ಬನ್ನಿ...
ಎಚ್.ಡಿ.ಕೋಟೆ: ಬಲಗೈ ಜನಾಂಗ ವನ್ನು ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕವಾಗಿ ಉತ್ತಮಪಡಿಸುವ ಉದ್ದೇಶದಿಂದ ಜೂನ್ 10ರಂದು ಬೆಂಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಛಲವಾದಿ ಜನಾಂಗದ 2ನೇ ಮಹಾ ಸಮಾವೇಶದಲ್ಲಿ ಎಲ್ಲರೂ ಭಾಗವಹಿಸಬೇಕು ಎಂದು ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ಹಂಸರಾಜ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ  ತಿಳಿಸಿದರು.

 ರಾಜ್ಯದಲ್ಲಿ ಸ್ವಾತಂತ್ರ್ಯ ಬಂದಾಗಿನಿಂದಲೂ ಆಡಳಿತ ನಡೆಸಿದ ಯಾವ ಸರ್ಕಾರವೂ ನಮ್ಮ ಜನಾಂಗಕ್ಕೆ ಇಂತಹ ಉಪಯೋಗ ಮಾಡಿರಲಿಲ್ಲ ಎನ್ನುವುದನ್ನು ಮನಗಾಣಬೇಕು. ರಾಜ್ಯದಲ್ಲಿ ನಮ್ಮ ಜನಾಂಗದವರನ್ನು ಅನೇಕ ಹೆಸರುಗಳಿಂದ ಕರೆಯುತ್ತಿದ್ದು, ಇನ್ನು ಮುಂದೆ `ಛಲವಾದಿಗಳು~ ಎಂದು ಅನುಮೋದನೆ ಮಾಡಲಿ ಆಗ್ರಹಿಸಿದರು. ಬೆಂಗಳೂರಿಗೆ ತೆರಳಲು ತಾಲ್ಲೂಕಿನಿಂದ ಸುಮಾರು 25ಕ್ಕೂ ಹೆಚ್ಚು ಬಸ್ ಕಲ್ಪಿಸಲಾಗಿದ್ದು, ಛಲವಾದಿಗಳು ಈ ಸಮಾವೇಶದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಹಾಸಭಾದ ನಗರಾಧ್ಯಕ್ಷ ಡಿ. ಮಹೇಶ್, ತಾಲ್ಲೂಕು ಅಧ್ಯಕ್ಷ ನಟರಾಜು, ಪಧವೀದರರ ಸಂಘದ ಅಧ್ಯಕ್ಷ ಪರಶಿವಮೂರ್ತಿ, ನಾಗರತ್ನಮ್ಮ ನಾಗೇಶ್, ಮಹದೇವ ಸ್ವಾಮಿ ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT