ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ.14ರಿಂದ ಸಿದ್ದರಾಮೇಶ್ವರ ಜಯಂತಿ

Last Updated 22 ಅಕ್ಟೋಬರ್ 2012, 5:55 IST
ಅಕ್ಷರ ಗಾತ್ರ

ಬೇಲೂರು: `ಗುರು ಸಿದ್ದರಾಮೇಶ್ವರರ 840ನೇ ಜಯಂತಿ ಮಹೋತ್ಸವ ಹಳೇಬೀಡಿನ ಪುಷ್ಪಗಿರಿ ಮಠದಲ್ಲಿ 2013ರ ಜನವರಿ 14 ಮತ್ತು 15ರಂದು ಆಯೋಜಿಸಲಾಗಿದೆ~ ಎಂದು ಪುಷ್ಪಗಿರಿ ಸಂಸ್ಥಾನದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಶುಕ್ರವಾರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶರಣರ ಪರಂಪರೆ ಉಳಿಸುವ ನಿಟ್ಟಿನಲ್ಲಿ ಸಿದ್ದರಾಮೇಶ್ವರರ ಜಯಂತಿ ಆಚರಿಸಲಾಗುತ್ತಿದೆ. ಜಯಂತಿ ನೆನಪಿಗಾಗಿ ಪುಷ್ಪಗಿರಿಯಲ್ಲಿ 3 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಅನ್ನದಾಸೋಹ ಮಂಟಪದ ಉದ್ಘಾಟನೆ ನಡೆಯಲಿದೆ. ಯಾವುದೇ ಧರ್ಮ, ಜಾತಿ ಭೇದವಿಲ್ಲದೆ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದರು.

ಎರಡು ದಿನ ನಡೆಯುವ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧೆಡೆಗಳಿಂದ ಸುಮಾರು 3 ರಿಂದ 4 ಲಕ್ಷ ಜನರು ಭಾಗವಹಿಸಲಿದ್ದಾರೆ. ಅವರಿಗೆ ಊಟ ವಸತಿ ವ್ಯವಸ್ಥೆ ಕಲ್ಪಿಸ ಲಾಗುತ್ತಿದೆ. ಸಾಧಕರನ್ನು ಸನ್ಮಾನಿಸಲಾಗುತ್ತಿದೆ.

ವ್ಯವಸ್ಥೆ ನಿರ್ವಹಣೆಗಾಗಿ ನಾಲ್ಕು ಸಾವಿರ ಪುರುಷ ಮತ್ತು ಎರಡು ಸಾವಿರ ಮಹಿಳಾ ಸ್ವಯಂ ಸೇವಕರನ್ನು ಸಿದ್ಧಗೊಳಿಸಲಾ ಗುತ್ತಿದೆ. ಸಿದ್ದರಾಮೇಶ್ವರರ ಜಯಂತಿಯಲ್ಲಿ ರಾಜ್ಯದ ಸುಮಾರು 108 ವಿವಿಧ ಮಠಾಧೀಶರು ಭಾಗವಹಿಸು ತ್ತಿದ್ದಾರೆ. ಮೂರು ಕೋಟಿ ರೂಪಾಯಿ ವೆಚ್ಚ ಮಾಡಲಾ ಗುತ್ತಿದೆ. ರಾಜ್ಯ, ರಾಷ್ಟ್ರಮಟ್ಟದ ನಾಯಕರು, ಆಂಧ್ರ, ಮಹಾರಾಷ್ಟ್ರದಿಂದ ಗಣ್ಯರು ಭಾಗವಹಿಸುತ್ತಿದ್ದಾರೆ ಎಂದರು.

ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ತನು, ಮನ, ಧನ ಸಹಾಯ ನೀಡಬೇಕು. ಮುಸ್ಲಿಮ್‌ರು ಸಹ ಜಯಂತಿಗೆ ಸಹಕಾರ ನೀಡುತ್ತಿದ್ದಾರೆ ಎಂದರು.

ಸ್ವಾಗತ ಸಮಿತಿ ಅಧ್ಯಕ್ಷರನ್ನಾಗಿ ಬಿ. ಶಿವರುದ್ರಪ್ಪ ಅವರನ್ನು ನೇಮಿಸಲಾಗಿದೆ. ಕಾರ್ಯದರ್ಶಿಯಾಗಿ ಕೆ.ಎಸ್. ಲಿಂಗೇಶ್ ಕಾರ್ಯನಿರ್ವಹಿಸಲಿದ್ದಾರೆ ಎಂದರು.

ಬಿ. ಶಿವರುದ್ರಪ್ಪ, ಕೆ.ಎಸ್. ಲಿಂಗೇಶ್, ಕೊರಟಿಗೆರೆ ಪ್ರಕಾಶ್, ಕೆ.ಸಿ. ಮಹದೇವ್, ಬಿ.ಎಂ. ರವಿಕುಮಾರ್, ವಿಘ್ನೇಶಯ್ಯ, ಕೆ. ಸುದರ್ಶನ್ ಇದ್ದರು.

25ರಂದು ಸಾಂಸ್ಕೃತಿಕ ಕಾರ್ಯಕ್ರಮ
ಬೇಲೂರು: ಧರಣಿ ಯುವತಿ ಮಂಡಳಿ ವತಿಯಿಂದ ತಾಲ್ಲೂಕು ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮ ಅ.25ರಂದು ಬೆಳಿಗ್ಗೆ ಏರ್ಪಡಿಸಲಾಗಿದೆ.

ಜನಪದ ಗೀತೆ, ಭಾವಗೀತೆ, ರಾಷ್ಟ್ರಭಕ್ತಿ ಗೀತೆ, ಸೋಬಾನೆ ಪದ, ಗೀಗೀ ಪದ, ಭಜನೆ, ರಾಗಿ ಬೀಸೋ ಕಲ್ಲಿನ ಪದ, ತಮಟೆ ವಾದ್ಯ, ಹಗಲು ವೇಷ, ಭರತನಾಟ್ಯ ಸೇರಿದಂತೆ ಮುಂತಾದ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.

ಯುವಕ/ ಯುವತಿ ಮಂಡಳಿಗಳು ಹಾಗೂ ನೋಂದಾಯಿತ ಕಲಾ ತಂಡಗಳು ಭಾಗವಹಿಸಬಹುದು ಎಂದು ಜಿಲ್ಲಾ ಯುವ ಸಮನ್ವಯಾಧಿಕಾರಿ ಬರಗೂರು ಅನಂತಪ್ಪ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT