ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ18ರಿಂದ ಸಹಕಾರಿ ಮಹಾ ಅಧಿವೇಶನ

Last Updated 3 ಅಕ್ಟೋಬರ್ 2012, 5:00 IST
ಅಕ್ಷರ ಗಾತ್ರ

ಕಾರಟಗಿ: ರಾಷ್ಟ್ರೀಯ ಸಹಕಾರಿಯ ಮಹಾಧಿವೇಶನ ಜ. 18ರಿಂದ 3 ದಿನಗಳವರೆಗೆ ಬೆಂಗಳೂರಿನ ನ್ಯಾಷನಲ್ ಕಾಲೇಜ್ ಆವರಣದಲ್ಲಿ ನಡೆಯಲಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಚಾಲಕ ಮೋಹನ ಭಾಗವತ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಆಗಮಿಸಲಿದ್ದಾರೆ.

ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಅಧ್ಯಕ್ಷ ಮಂಜುನಾಥಗೌಡ, ಉಪಾಧ್ಯಕ್ಷ ಚೊಕ್ಕ ಬಸನಗೌಡ ಸೇರಿದಂತೆ ಅನೇಕ ಸಹಕಾರಿ ಧುರೀಣರು ಪಾಲ್ಗೊಳ್ಳಲಿದ್ದಾರೆ ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಉಪಾಧ್ಯಕ್ಷ ಗುರುನಾಥ ಜಾಂತಿಕರ್ ತಿಳಿಸಿದರು.

ಕೊಪ್ಪಳ ಜಿಲ್ಲೆಯ ಕಾರಟಗಿಯ ಎಲ್‌ವಿಟಿ ತಪೋವನದಲ್ಲಿ ಮಂಗಳವಾರ ನಡೆದ ವೃತ್ತಿಪರ ಆಡಳಿತ, ಗ್ರಾಹಕ ಸಂಬಂಧ ನಿರ್ವಹಣೆಯ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರವು ಸಹಕಾರ ಕಾಯ್ದೆಯ 97ನೇ ಕಲಂಗೆ ತಿದ್ದುಪಡಿ ತಂದಿದ್ದು, ಮುಂದಿನ ವರ್ಷದ ಫೆ. 13ರಿಂದ ಎಲ್ಲಾ ರಾಜ್ಯಗಳು ಅಳವಡಿಸಿಕೊಳ್ಳಬೇಕಿದೆ.

ಚುನಾವಣೆಗಳು ಸರ್ಕಾರದ ಆಧೀನದಲ್ಲಿ ನಡೆಯಲಿದ್ದು, ಇದಕ್ಕಾಗಿ ಪ್ರಾಧಿಕಾರ ಸ್ಥಾಪನೆಯಾಗಲಿದೆ.
ಸರ್ಕಾರದ ನೆರವಿಲ್ಲದೇ ನಡೆಯುವ ಸಹಕಾರಿಗಳನ್ನು ಸೌಹಾರ್ದ ಕಾಯ್ದೆಯಡಿ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಸಹಕಾರಿಯ ಸದಸ್ಯರಾಗುವವರು ಕ್ರಿಯಾಶೀಲವಾಗಿರಬೇಕು, ಸಹಕಾರಿಯಲ್ಲಿ ವ್ಯವಹಾರ ನಡೆಸಿರಬೇಕು ಅಂಥವರಿಗೆ ಸದಸ್ಯರಾಗಲು ನೂತನ ತಿದ್ದುಪಡಿಯಲ್ಲಿ ಅವಕಾಶ ದೊರೆಯಲಿದೆ ಎಂದರು.

ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕ ಕೆ. ಸಣ್ಣಸೂಗಪ್ಪ ಮೊದಲಾದವರು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT