ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ.5ಕ್ಕೆ ಜಿಎಸ್‌ಎಲ್‌ವಿಡಿ–5 ಉಡಾವಣೆಗೆ ಚಿಂತನೆ

Last Updated 22 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು (ಪಿಟಿಐ): ಸ್ವದೇಶಿ ನಿರ್ಮಿತ ಕ್ರಯೋಜನಿಕ್‌ ಎಂಜಿನ್‌ ಅಳವಡಿಸಿರುವ ಸುಧಾರಿತ ಜಿಎಸ್‌ಎಲ್‌ವಿಡಿ–5 ಉಪ­ಗ್ರಹ ಉಡಾವಣಾ ವಾಹನವನ್ನು ಜನವರಿ 5ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾ ಬಾಹ್ಯಾಕಾಶ ಕೇಂದ್ರ­ದಿಂದ ಉಡಾಯಿಸಲು ಯೋಚಿಸಿದ್ದು, ರಾಕೆಟ್‌ನ ಪರಿಶೀಲನೆ ನಂತರ ಅಂತಿಮ ತೀರ್ಮಾನಕ್ಕೆ ಬರಲಾಗುತ್ತದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ತಿಳಿಸಿದೆ.

ಜಿಎಸ್‌ಎಲ್‌ವಿಡಿ–5 ಉಡಾವಣೆ ಕುರಿತು ಅಂತಿಮ ತೀರ್ಮಾನ ಕೈ­ಗೊಳ್ಳಲು ಇಸ್ರೊದ ಯೋಜನಾ ಸಿದ್ಧತಾ ಪರಿಶೀಲನಾ (ಮಿಷನ್‌ ರೆಡಿನೆಸ್‌ ರಿವ್ಯೂವ್– ಎಂಆರ್‌ಆರ್) ತಂಡ ಡಿಸೆಂಬರ್‌ 27ಕ್ಕೆ ಸಭೆ ಸೇರಲಿದೆ. ಆಗಸ್ಟ್‌ 19ರಂದು ನಿಗದಿಯಾಗಿದ್ದ ಜಿಎಸ್‌ಎಲ್‌ವಿಡಿ–5 ರಾಕೆಟ್‌ ಉಡಾ­ವಣೆಯನ್ನು ಇಂಧನ ಸೋರಿಕೆ ಕಾರಣ­ದಿಂದ ದಿಢೀರನೆ ಮುಂದೂ­ಡಲಾಗಿತ್ತು. ಈ ರಾಕೆಟ್‌ ‘ಜಿಸ್ಯಾಟ್‌–14’ ಎಂಬ ಸಂವ­ಹನ ಉಪಗ್ರಹವನ್ನು ಹೊತ್ತೊ­ಯ್ಯಬೇಕಿತ್ತು.

‘ಜ.5ಕ್ಕೆ ಪರೀಕ್ಷಾರ್ಥ ಉಡ್ಡಯನ ನಡೆಸಲು ನಾವು ಯೋಚಿಸಿದ್ದೇವೆ. ಇದೇ 27ರಂದು ಸಭೆ ಸೇರುವ ಎಂಆರ್ಆರ್ ತಂಡವು ರಾಕೆಟ್‌ನ ಪರಿಶೀಲನೆ ನಡೆಸಿ ಅಂತಿಮ ತೀರ್ಮಾನಕ್ಕೆ ಬರಲಿದೆ. ಉಡ್ಡಯನದ ದಿನಾಂಕ ಮತ್ತು ಸಮಯ­ವನ್ನೂ ಈ ತಂಡವೇ ನಿರ್ಧರಿಸಲಿದೆ’ ಎಂದು ಇಸ್ರೊ ವಕ್ತಾರ ದೇವಿಪ್ರಸಾದ್‌ ಕಾರ್ಣಿಕ್‌ ತಿಳಿಸಿದ್ದಾರೆ. ‘ಮುಂದಿನ ವಾರ ಉಪಗ್ರಹವನ್ನು ರಾಕೆಟ್‌ಗೆ ಜೋಡಿಸಲಾಗುತ್ತದೆ. ಇದೇ 26ರ ವೇಳೆಗೆ ಎಲ್ಲವೂ ಸಿದ್ಧವಾಗಲಿದೆ. 27ಕ್ಕೆ ಪರಿಶೀಲನೆ ನಡೆಯಲಿದೆ. ಈ ಬಾರಿ ರಾಕೆಟ್‌ಗೆ ಹೊಸ ಇಂಧನ ಟ್ಯಾಂಕ್‌ ಅಳವಡಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT