ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಂಗಮ ಸಮುದಾಯ ಸಂಘಟಿತವಾಗಬೇಕು

Last Updated 16 ಅಕ್ಟೋಬರ್ 2012, 5:50 IST
ಅಕ್ಷರ ಗಾತ್ರ

ಬಳ್ಳಾರಿ: ಜಂಗಮ ಸಮುದಾಯದ ಜನತೆ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸೌಲಭ್ಯಗಳನ್ನು ಪಡೆದು ಕೊಳ್ಳುವ ನಿಟ್ಟಿನಲ್ಲಿ ಸಂಘಟಿತರಾಗಿ ಹೋರಾಟ ನಡೆಸುವ ಅಗತ್ಯವಿದೆ ಎಂದು ಸಿರುಗುಪ್ಪದ ಮಾಜಿ ಶಾಸಕ ಟಿ.ಎಂ. ಚಂದ್ರಶೇಖರಯ್ಯ ಸ್ವಾಮಿ ಅಭಿಪ್ರಾಯಪಟ್ಟರು.

ಅಖಿಲ ಕರ್ನಾಟಕ ಜಂಗಮ ಕ್ಷೇಮಾ ಭಿವೃದ್ಧಿ ಮಹಾಸಭಾದ ಆಶ್ರಯದಲ್ಲಿ ನಗರದ ಸಂಗಮೇಶ್ವರ ದೇವಸ್ಥಾನದಲ್ಲಿ ನಡೆದ ಜಂಗಮ ಸಮುದಾಯದ ಸಮಾವೇಶದಲ್ಲಿ ಅವರು ಮಾತನಾಡಿದರು.

ಆರ್ಥಿಕವಾಗಿ ಹಿಂದುಳಿದಿರುವ ಬೇಡ ಜಂಗಮ ಸಮುದಾಯ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೀಡುವ ಶೈಕ್ಷಣಿಕ ಮತ್ತು ಆರ್ಥಿಕಸೌಲಭ್ಯ   ಪಡೆಯುವಲ್ಲಿ ವಿಫಲವಾಗಿದೆ. ಸಮುದಾಯದ ಎಲ್ಲ ಮುಖಂಡರೂ ಒಂದಾಗಿ ಈ ಕುರಿತು ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸಿ, ಸಂಘಟನೆಗೆ ಮುಂದಾ ಗಬೇಕು ಎಂದು ಅವರು ತಿಳಿಸಿದರು.

ಸಾನ್ನಿಧ್ಯ ವಹಿಸಿದ್ದ ಕಮ್ಮರಚೇಡು ಕಲ್ಯಾಣ ಮಠದ ಕಲ್ಯಾಣ ಸ್ವಾಮೀಜಿ ಹಾಗೂ ಹರಗಿನಡೋಣಿಯ ಸಿದ್ಧಲಿಂಗ ಸ್ವಾಮೀಜಿ  ಆಶೀರ್ವಚನ ನೀಡಿ, ಬೇಡಜಂಗಮ ಸಮುದಾಯದ ಬಡವರ ಉದ್ಧಾರವೇ ಸಮುದಾಯದ ಗುರಿಯಾಗಬೇಕು. ಕೇವಲ ಸರ್ಕಾರಿ ಸೌಲಭ್ಯ ಪಡೆಯುವುದಕ್ಕೆ ಸೀಮಿತ ವಾಗದೆ, ಹಿಂದಿನಿಂದಲೂ ರೂಢಿ ಯಲ್ಲಿರುವ ಪರಂಪರೆಯನ್ನು ಉಳಿಸಿ ಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.

ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಎಸ್.ಆರ್. ನವಲಿಹಿರೇಮಠ, ಎಚ್.ಕೆ. ಮಲ್ಲಿಕಾರ್ಜುನಯ್ಯ, ಮಹಿಳಾ ಘಟಕದ ಗೌರವಾಧ್ಯಕ್ಷೆ ಶೈಲಜಾ ಹಿರೇಮಠ, ಯುವ ಘಟಕದ ಅಧ್ಯಕ್ಷ ಬಂಗಾರೇಶ ಹಿರೇಮಠ ಮಾತನಾಡಿದರು.

ಮಹಾಸಭಾದ ಜಿಲ್ಲಾ ಘಟಕದ ಮುಖಂಡರಾದ ಎಚ್.ಕೆ. ಗೌರಿಶಂಕರ, ವೀ.ವಿ. ಸಂಘದ ಉಪಾಧ್ಯಕ್ಷ ನಾಗೇಶ್ವರಸ್ವಾಮಿ, ಬಿ.ಎಂ. ಶಾಸ್ತ್ರಿಸ್ವಾಮಿ, ನಟರಾಜ, ಪ್ರಭುಸ್ವಾಮಿ, ತೆಕ್ಕಲಕೋಟೆಯ ಸಿದ್ದರಾಮ ಸ್ವಾಮಿ, ಕಪಗಲ್ ಸಿದ್ಧಲಿಂಗಸ್ವಾಮಿ, ಸಿರುಗುಪ್ಪದ ಬಸವರಾಜ ಸ್ವಾಮಿ ಮೊದಲಾದವರು  ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT