ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಂಟಿ ಸರ್ವೆ ಕಾರ್ಯ ಆರಂಭ

ಆನೇಕಲ್ ತಾಲ್ಲೂಕಿನ ರಕ್ಷಿತಾರಣ್ಯದ ಒತ್ತುವರಿ ಜಮೀನು ತೆರವು
Last Updated 11 ಜನವರಿ 2014, 10:57 IST
ಅಕ್ಷರ ಗಾತ್ರ

ಆನೇಕಲ್‌: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ಸೇರಿದ ಮಹದೇಶ್ವರ ರಕ್ಷಿತಾರಣ್ಯದ ಒತ್ತುವರಿ ಜಮೀನಿನ ತೆರವುಗೊಳಿಸುವ ಸಂಬಂಧ ಜಂಟಿ ಸರ್ವೆ ಕಾರ್ಯ ಶುಕ್ರವಾರ ಪ್ರಾರಂಭವಾಗಿದ್ದು ಎರಡು ಮೂರು ದಿನಗಳಲ್ಲಿ ಗ್ರಾಮ ಹಾಗೂ ಗ್ರಾಮದ ಜಮೀನುಗಳ ಗಡಿ ಗುರುತಿಸುವ ಕಾರ್ಯ ಪೂರ್ಣ ಗೊಳಿಸಲಾಗುವುದು ಎಂದು ವಲಯ ಅರಣ್ಯಾಧಿಕಾರಿ ನಾಗಭೂಷಣ್‌ ತಿಳಿಸಿದರು.

ತಮ್ಮನಾಯಕನಹಳ್ಳಿ ಗ್ರಾಮದ ಸರ್ವೆ ನಂ. 80, 81, 95, 96 ಜಮೀನಿನ ಜೊತೆಗೆ ಮಜರೆ ಗ್ರಾಮ ವಾದ ಚೂಡಹಳ್ಳಿ ಬಳಿಯ ಜಮೀನನ್ನು ಅಳತೆ ಮಾಡಲಾಗುತ್ತಿದೆ. ಬಗ್ಗನ ದೊಡ್ಡಿಯ ಸರ್ವೆ ನಂ. 96ರ ಜಮೀ ನನ್ನೂ ಅಳತೆ ಮಾಡಲಾಗುತ್ತಿದೆ. ಅರಣ್ಯ ಇಲಾಖೆ ಮೋಜಣಿ ದಾರರ ಜತೆ ಕಂದಾಯ ಇಲಾಖೆಯ ಮೋಜಣಿ ದಾರರು ಜಂಟಿಯಾಗಿ ಜಿಪಿಎಸ್‌ ಯಂತ್ರದ ಸಹಾಯದಿಂದ ಮೋಜಣಿ ಮಾಡಲಾಗುತ್ತಿದೆ. ಗ್ರಾಮದ ಗಡಿ ನಿಗದಿ ಮಾಡುವುದು ಹಾಗೂ ಗ್ರಾಮಸ್ಥರಿಗೆ ಸೇರಿದ ಪಟ್ಟಾ ಜಮೀನನ್ನು ಗುರುತಿಸುವ ಕಾರ್ಯಕ್ಕೆ ಆದ್ಯತೆ ನೀಡ ಲಾಗಿದ್ದು ಜಮೀನು ಗುರುತಿಸಿದ ನಂತರ ಅರಣ್ಯ ಇಲಾಖೆಯ ಜಮೀನು ಗುರುತಿ ಸಲು ಸುಲಭವಾಗುತ್ತದೆ ಎಂದರು. 

ವಿರೋಧ: ಗ್ರಾಮಸ್ಥರು ಅರಣ್ಯ ಅಳತೆ ಮಾಡು ವುದನ್ನು ವಿರೋಧಿಸಿ ಗುರುವಾರ ಪ್ರತಿಭಟನೆ ನಡೆಸಿ ವಿಷ ಕುಡಿಯಲು ಮುಂದಾಗಿ ದ್ದರು. ರೈತ ಸಂಘದವರೂ ರೈತರ ಜೊತೆಗೂಡಿ ದ್ದರಿಂದ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಹಂತ ತಲು ಪಿತ್ತು. ಪೊಲೀಸರು ಬಿಗಿ ಬಂದೋಬಸ್‌್ತ ಏರ್ಪಡಿಸಿ ಪ್ರತಿಭಟನಾ ಕಾರರನ್ನು ಬಂಧಿಸಲು ಮುಂದಾಗಿದ್ದನ್ನು ಸ್ಮರಿಸಬಹುದು.
ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠ ಅಮ್ಜದ್‌ ಅಹಮದ್‌ ಸ್ಥಳಕ್ಕೆ ಭೇಟಿ ನೀಡಿದ್ದರು.

ಶಾಸಕ ಬಿ.ಶಿವಣ್ಣ, ಗ್ರಾ.ಪಂ. ಸದಸ್ಯ ಎನ್‌.ಅಚ್ಯುತ ರಾಜು, ಜಿಲ್ಲಾ ಪಂಚಾ ಯಿತಿ ಸದಸ್ಯ ಜೆ.ನಾರಾಯಣಪ್ಪ, ಮಾಜಿ ಸದಸ್ಯ ಸಿ.ನಾಗರಾಜು ಸ್ಥಳೀ ಯರ ಮನವೊಲಿಸಿ ಅಳತೆ ಮಾಡಲು ಸಹಕಾರ ನೀಡಲು ಕೋರಿದ್ದರಿಂದ ಅಳತೆ ಕಾರ್ಯ ನಡೆ ಯುತ್ತಿದೆ. 

ಪ್ರಕರಣ ದಾಖಲು: ಅರಣ್ಯ ಇಲಾಖೆಯ ಜಮೀನು ಒತ್ತುವರಿ ಸಂಬಂಧ ಚೂಡ ಹಳ್ಳಿ 103 ಜನರ ಮೇಲೆ ಪ್ರಕರಣ ಗಳನ್ನು ದಾಖಲಿಸ ಲಾಗಿದೆ. 5897 ಎಕರೆ 30 ಗುಂಟೆ ವಿಸ್ತೀರ್ಣದಲ್ಲಿ ಮಹದೇಶ್ವರ ರಕ್ಷಿತಾರಣ್ಯ ವ್ಯಾಪಿಸಿದ್ದು ಈ ಪೈಕಿ ಅರಣ್ಯ ಇಲಾಖೆಯ ಜಮೀನು ಒತ್ತವರಿ ಸಂಬಂಧ ಚೂಡಹಳ್ಳಿ ಗ್ರಾಮದ 103 ರೈತರ ವಿರುದ್ಧ ಕರ್ನಾಟಕ ಅರಣ್ಯ ಕಾಯ್ದೆ 1963ರ ಅಡಿಯಲ್ಲಿ ಸೆಕ್ಷನ್‌ 24 ಮತ್ತು 73ರ ಅಡಿಯಲ್ಲಿ ಅಕ್ರಮ ಅರಣ್ಯ ಪ್ರವೇಶ, ಗಡಿ ನಾಶ ಹಾಗೂ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಸೆಕ್ಷನ್‌ 5 ಮತ್ತು 6ರ ಅಡಿಯಲ್ಲಿ ಅತಿಕ್ರಮಣ ಪ್ರವೇಶ ಹಾಗೂ ಅರಣ್ಯ ಸಂರಕ್ಷಣಾ ಕಾಯ್ದೆ 1980ರ ಅಡಿಯಲ್ಲಿ ಅರಣ್ಯ ಒತ್ತುವರಿ ಪ್ರಕರಣಗಳನ್ನು ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT